ಅಣ್ಣನ ತ್ಯಾಗ ಮತ್ತು ಶೌರ್ಯದಿಂದ ಪ್ರೇರಿತಗೊಂಡು ಸೇನೆ ಸೇರಿದ ಹುತಾತ್ಮ ಯೋಧ ಔರಂಗಜೇಬ್ ನ ಇಬ್ಬರು ಸಹೋದರರು!

ಭಾರತೀಯ ಯೋಧ ಔರಂಗಜೇಬ ಈ ದೇಶಕ್ಕೋಸ್ಕರ ತನ್ನ ಪ್ರಾಣ ತ್ಯಾಗವನ್ನೇ ಮಾಡಿದ್ದಾನೆ. ತಾನೊಬ್ಬ ಮುಸ್ಲಿಮನಾದರೂ ಯಾವುದೇ ಜಾತಿ ಧರ್ಮವನ್ನು ಲೆಕ್ಕಿಸದೆ ಈ ದೇಶದ ಗಡಿಯನ್ನು ಕಾಯುತ್ತಾ ಉಗ್ರರ ಅಟ್ಟಹಾಸಕ್ಕೇ ಬಲಿಯಾಗಿದ್ದರು.  ಔರಂಗಜೇಬ ಎಂಬ ಹೆಸರು ಕೇಳುತ್ತಿದ್ದಂತೆಯೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ಹುತಾತ್ಮ ಯೋಧನನ್ನು ನೆನಪಾಗಿ ಕಣ್ಣಂಚಿನಲ್ಲಿ ನೀರು ಬರುತ್ತೆ. ಇದೀಗ ಹುತಾತ್ಮ ಯೋಧ ಜೌರಂಗಜೇಬ್ ಅವರ ಇಬ್ಬರು ತಮ್ಮಂದಿರು ಭಾರತೀಯ ಸೇನೆಯನ್ನು ಸೇರ್ಪಡೆಗೊಂಡಿದ್ದಾರೆ. ಅಣ್ಣನ ತ್ಯಾಗ ಮತ್ತು ಶೌರ್ಯದಿಂದ ಪ್ರೇರಿತಗೊಂಡು ಇವರಿಬ್ಬರು ಸೇನೆ ಸೇರಿದ್ದಾರೆ. ಔರಂಗಜೇಬ್ ಸೋದರರಾದ ಮೊಹಮ್ಮದ್ ತಾರೀಖ್ ಮತ್ತು ಶಬ್ಬೀರ್ ಭಾರತೀಯ ಸೇನೆಯನ್ನು ಸೇರ್ಪಡೆಗೊಂಡಿದ್ದಾರೆ ಎಂಬುವುದಾಗಿ ಅವರ ತಂದೆ ಹಾಗೂ ಮಾಜಿ ಯೋಧ ಮೊಹಮ್ಮದ್ ಹನೀಫ್ ತಿಳಿಸಿದ್ದು ದೇಶವನ್ನು ಮತ್ತು ದೇಶವಾಸಿಗಳನ್ನು ರಕ್ಷಣೆ ಮಾಡಿ ಸೇವೆ ಸಲ್ಲಿಸುವ ಸಲುವಾಗಿ ಸೇನೆಯನ್ನು ಅವರು ಸೇರಿಕೊಂಡಿದ್ದಾರೆ ಎಂಬುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಇಬ್ಬರೂ ತರಭೇತಿಯನ್ನು ಪಡೆದುಕೊಳ್ಳುತ್ತಿದ್ದು ದೇಶಭಕ್ತಿ ಮತ್ತು ಶ್ರದ್ಧೆಯ ಯೋಧನಾಗಿದ್ದ ಔರಂಗಜೇಬ್ ಅವರ ಸಾವು ಈ ಇಬ್ಬರಿಗೂ ಸೇನೆ ಸೇರಲು ಪ್ರೇರಣೆ ನೀಡಿದೆ.

ಔರಂಗಜೇಬ ಎಂದು ಹೆಸರು ಕೇಳಿದಾಕ್ಷಣ ಒಬ್ಬ ಮುಸ್ಲಿಮ್ ಅನ್ನಿಸಬಹುದು ಆದರೆ ಆತ ಮಾಡಿದ ತ್ಯಾಗವನ್ನು ಒಮ್ಮೆ ನೆನಪಿಸಿದರೆ ಯಾರ ಕಣ್ಣಲ್ಲೂ ಒಂದು ಹನಿ ನೀರು ಬರದೆ ಇರದು. ರಂಜಾನ್ ಹಬ್ಬವನ್ನು ಆಚರಿಸಲು ರಜೆ ನಿಮಿತ್ತ ಊರಿಗೆ ತೆರಳುತ್ತಿದ್ದ ಈ ಭಾರತೀಯ ಯೋಧನನ್ನು ಅಪಹರಿಸಿ ಆತನಿಂದ ಕೆಲ ಮಾಹಿತಿಯನ್ನು ಪಡೆಯಲು ಚಿತ್ರಹಿಂಸೆ ನೀಡಿದ್ದರು ಆ ಪಾಪಿ ಪಾಕಿಸ್ತಾನಿಯರು. ತದ ನಂತರ ನೀನೂ ಮುಸಲ್ಮಾನ ಪಾಕಿಸ್ತಾನಕ್ಕೆ ಬಂದು ಬಿಡು ಎಂದು ಒತ್ತಡವನ್ನು ಹಾಕಿದ್ದರು. ತನ್ನನ್ನು ಸಾಯಿಸುತ್ತಾರೆ ಎಂದು ತಿಳಿದರೂ ಕೂಡಾ ಈ ಯೋಧ ಅಂಜದೆ ಪ್ರಾಣತ್ಯಾಗ ಮಾಡಿದ್ದಾರೆ ಇದು ಇಡೀ ದೇಶದ ಜನರಿಗೆ ಮಾದರಿಯಾಗಬೇಕು. ತಾನೂ ಕೂಡಾ ಕುಟುಂಬದೊಂದಿಗೆ ರಂಜಾನ್ ಹಬ್ಬವನ್ನು ಆಚರಿಸಬೇಕು ಎಂದು ಖುಷಿಯಿಂದ ಮನೆಗೆ ಬರುವ ಸಮಯದಲ್ಲಿ ಜೌರಂಗಜೇಬ ಎಂಬ ಯೋಧನನ್ನು ಉಗ್ರರು ಅಪಹರಿಸಿದ್ದ ಸುದ್ಧಿ ತಿಳಿದಾಗ ಇಡೀ ದೇಶವೇ ತತ್ತರಿಸಿತ್ತು. ಯಾವುದೇ ಜಾತಿಮತ ಎಂದು ತಿಳಿಯದೆ ಎಲ್ಲರೂ ನಮ್ಮ ಸೈನಿಕನ ಬರುವಿಕೆಗಾಗಿ ಕಾಯುತ್ತಿದ್ದರು. ಔರಂಗಜೇಬನ ಮನೆಯವರು ಕೂಡಾ ದೇವರಲ್ಲಿ ನಮ್ಮ ಮಗ ಅದಷ್ಟು ಬೇಗ ಮನೆಗೆ ಬರಲಿ ಮತ್ತೆ ದೇಶ ಕಾಯಲು ಹೋಗುವಂತಾಗಲಿ ಎಂದು ದೇವರಲ್ಲಿ ಪರಿಪರಿಯಾಗಿ ಬೇಡಿದ್ದರು. ವಿಧಿಯಾಟ ನೋಡಿ ಪಾಪಿ ಪಾಕಿಸ್ತಾನಿಗಳ ಅಟ್ಟಹಾಸಕ್ಕೆ ಬಲಿಯಾಗಬೇಕಾಯಿತು. ಆತನನ್ನು ಕೊಲೆ ಮಾಡುವ ಮುಂಚೆ ಆತನ ವಿಡಿಯೋ ಮತ್ತು ಆತನ ಭಾವಚಿತ್ರವನ್ನು ದ್ರೋಹಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ತನ್ನನ್ನು ಉಗ್ರರು ಸಾಯಿಸುತ್ತಾರೆ ಎಂದು ತಿಳಿದರೂ, ಸ್ವಲ್ವವೂ ಪ್ರಾಣಕ್ಕಾಗಿ ಅಂಜದೆ ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡುತ್ತೇನೆ ಎಂದು ಹೆಮ್ಮೆಯಿಂದ ಪ್ರಾಣ ಬಿಡುತ್ತಾನೆ ಎನ್ನುವ ಕಣ್ಣುಗಳಲ್ಲಿ ಕಾಂತಿ, ಮುಗ್ಧ ಸಂತೃಪ್ತ ಭಾವ ಯಾವುದೇ ದೇಶಭಕ್ತನ ಮನಕಲುಕದೇ ಇರಲು ಸಾಧ್ಯವೇ ಇಲ್ಲ.

ಅಷ್ಟಕ್ಕೂ ಆತ ಆ ರೀತಿ ಅವನ ಹಬ್ಬದ ಸಮಯದಲ್ಲಿ ಅವನದ್ದೇ ಮತಕ್ಕೆ ಸೇರಿದವರಿಂದ ಅಮಾನುಷವಾಗಿ ಹತ್ಯೇಗೀಡಾಗಿದ್ದು ಯಾಕೇ ಗೊತ್ತೇ? ದೇಶಭಕ್ತಿ, ಹೌದು ಆತನ ಸೇನೆಯ ಕರ್ತವ್ಯನಿಷ್ಠೆ ಮತ್ತು ದೇಶಭಕ್ತಿ. ನಮ್ಮ ಸೇನೆ ಭರ್ಜರಿ ಬೇಟೆಯಾಡಿ ಹಿಜಬುಲ್ ಮುಜಾಹೀದ್ದಿನ ಸಂಘಟನೆಯ ಕಮಾಂಡರ್ ಸಮೀರ್ ಟೈಗರ್ ನನ್ನು ಹತ್ಯೆ ಮಾಡಿತ್ತು. ಆ ಭೇಟಯಾಡಿದ ತಂಡದ ನೇತೃತ್ವ ವಹಿಸಿದ್ದವರು ಮೇಜರ್ ರೋಹಿತ್ ಶುಕ್ಲಾ, ಅವರ ತಂಡದ ಸದಸ್ಯನಾಗಿದ್ದು ಅಷ್ಟೇ ಅಲ್ಲದೇ ಮೇಜರ್ ಶುಕ್ಲಾರ ನಿಕಟವರ್ತಿಯಾಗಿ ಅವರ ನೆರಳಿನಂತೆ ಇದ್ದವನು ಈ ಔರಂಗಜೇಬ್ . ಆ ಕಾರಣಕ್ಕಾಗಿಯೇ ಸೇನೆಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಅವರದ್ದೇ ಮತದವನು ಎನ್ನುವುದನ್ನೂ ಲೆಕ್ಕಿಸದೇ ಅಮಾನುಷವಾಗಿ ಅತನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಮೂಲತಃ ಕಾಶ್ಮೀರದವನೇ ಆದ ಔರಂಗಜೇಬ್ ಸೈನ್ಯಕ್ಕೆ ಕಲ್ಲುಹೊಡಿಯುವ ಕಣಿವೆಯ ದೇಶದ್ರೋಹಿ ಯುವಕರ ಮಧ್ಯೆಯೇ ದೇಶಭಕ್ತಿ ಮೆರೆದು ಸೇನೆಯ ಕೆಲಸಕ್ಕೆ ಸೇರಿಕೊಂಡಿದ್ದ. ಆ ದೇಶಭಕ್ತನ ಸಾವು ಕೇವಲ ಆತನ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕಾದ ನಷ್ಟ ಮತ್ತು ನೋವು. ಔರಂಗಜೇಬ್ ಅವರಿಗೆ ಮರಣೋತ್ತರ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿದೆ. ಅವರ ಸಾವಿನ ನಂತರ ಅವರ ಸೋದರರೂ ಸೇನೆಗೆ ಸೇರಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಅದರಂತೆ ಅವರೀಗ ಸೇನೆಯನ್ನು ಸೇರ್ಪಡೆಗೊಂಡಿದ್ದು ತರಭೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

Be the first to comment