ಉತ್ತರ ಪ್ರದೇಶದಲ್ಲಿ ಶಿವ ಪೂಜೆ ಮಾಡಿದ ಮುಸ್ಲಿಂ ಪೊಲೀಸ್ ಅಧಿಕಾರಿ!

ಸನಾತನ ಧರ್ಮ ಎಂದರೆ “ಆದಿ ಮತ್ತು ಅಂತ್ಯವಿಲ್ಲದ, ನಿರಂತರ ನಡೆಯುತ್ತಿರುವ” ಮತ್ತು ಧರ್ಮ ಎಂದರೆ “ಶಾಶ್ವತವಾಗಿ ಉಳಿಯಬಲ್ಲ, ಎಲ್ಲರಿಂದ ಸ್ವೀಕೃತವಾಗಬಲ್ಲ ಜೀವನಮಾರ್ಗ” ಎಂಬ ಅರ್ಥವಿರುವ ಸನಾತನಧರ್ಮ ವಾಸ್ತವವಾಗಿ ಒಂದು ಚೌಕಟ್ಟಿಗೆ ಮೀರದ ನೀತಿಗೆ ಒಳಪಟ್ಟ ನಿಯಮವೇ ಆಗಿದೆ. ಸನಾತನ ಧರ್ಮವನ್ನು `ಆಧ್ಯಾತ್ಮಿಕದ ತೊಟ್ಟಿಲು’ ಎಂದೂ, `ಎಲ್ಲ ಧರ್ಮಗಳ ತಾಯಿ’ ಎಂದೂ ಕರೆಯಲಾಗುತ್ತದೆ. ವಿಶ್ವದ ಅತ್ಯಂತ ಪುರಾತನ ಸಂಸ್ಕೃತಿಯಾಗಿ ಇದನ್ನು ಗುರುತಿಸಲಾಗುತ್ತದೆ. ಕೇವಲ ಭಾರತೀಯರಲ್ಲದೆ ಇಡೀ ವಿಶ್ವವೇ ಸನಾತನ ಧರ್ಮ ಕಡೆ ಒಲವು ತೋರಿಸಿ ತಮ್ಮ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಭಾರತೀಯರಾದ ನಾವು ಇಲ್ಲಿ ಯಾವ ಧರ್ಮವನ್ನೂ ಕಡೆಗಣಿಸದೆ ಎಲ್ಲಾ ಧರ್ಮವನ್ನೂ ಸಮಾನ ರೀತಿಯಲ್ಲಿ ನೋಡಿಕೊಳ್ಳುಕೊಳ್ಳುತ್ತೇವೆ. ಆದರೆ ಕೆಲವರು ಓಟ್ ಬ್ಯಾಂಕಿಗೋಸ್ಕರ ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ದ್ವೇಷಿಗಳಂತೆ ಬಿಂಬಿಸುತ್ತಾರೆ. ಹಿಂದೂಗಳೂ ಮುಸ್ಲಿಂ ವಿರೋಧಿಗಳು ಎಂದು ಇದೀಗಾಗಲೇ ಸುಖಾಸುಮ್ಮನೆ ಸುದ್ಧಿ ಹಬ್ಬಿಸುತ್ತನೇ ಬರುತ್ತಿದ್ದಾರೆ. ಅದಲ್ಲದೆ ಇಲ್ಲಿ ಹಿಂದೂಗಳ ಪ್ರಭಾವ ಎಷ್ಟರ ಮಟ್ಟಿಗೆ ಇದೆ ಎಂಬುವುದು ಕೂಡಾ ಈಗಾಗಲೇ ಮುಸ್ಲಿಮರಿಗೂ ತಿಳಿದಿದೆ. ಅದೇ ರೀತಿ ಇದೀಗ ಮುಸ್ಲಿಂ ಪೊಲೀಸ್ ಅಧಿಕಾರಿಯೊಬ್ಬರು ಶಿವನಿಗೆ ಅಭಿಷೇಕ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

ಹೌದು… ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಭಮೋರಾ ಪೆÇಲೀಸ್ ಠಾಣಾ ವ್ಯಾಪ್ತಿಯ ಸ್ಟೇಷನ್ ಹೌಸ್ ಅಧಿಕಾರಿಯಾಗಿರುವ ಜಾವೇದ್ ಖಾನ್(40) ದೇವಾಲಯದಲ್ಲಿ ಶಿವನ ವಿಗ್ರಹಕ್ಕೆ ಸಂಪ್ರದಾಯದಂತೆ ಭಕ್ತಾದಿಗಳಿಗೂ ಮುನ್ನ ಸ್ವತಃ ಪೂಜೆ ನಿರ್ವಹಿಸಿರುವ ಅಧಿಕಾರಿ. ಇಲ್ಲಿ ನಡೆದುಬಂದಿರುವ ಸಂಪ್ರದಾಯದ ಪ್ರಕಾರ ಔನ್ಲಾ ಸರ್ಕಲ್ ಆಫೀಸರ್ ಭಕ್ತಾದಿಗಳಿಗಿಂತಲೂ ಮುನ್ನ ಪೂಜೆ ಸಲ್ಲಿಸಬೇಕು, ಆದರೆ ಈ ಅಧಿಕಾರಿ ಕಾರಣಾಂತರಗಳಿಂದ ಬರಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಖಾನ್ ಸ್ವತಃ ಅಭಿಷೇಕ ನೆರವೇರಿಸಿ ಸಂಪ್ರದಾಯವನ್ನು ಪಾಲಿಸಿದ್ದಾರೆ. ದೇವಾಲಯದ ಪ್ರಧಾನ ಅರ್ಚಕ ಅಶೋಕ್ ಶರ್ಮ ಈ ಬಗ್ಗೆ ಮಾತನಾಡಿದ್ದು, “ಖಾನ್ ಅವರನ್ನು ಪೂಜೆ ಮಾಡಲು ಕೇಳುವುದಕ್ಕೆ ಹಿಂಜರಿಕೆ ಇತ್ತು. ಆದರೆ ಪರಿಸ್ಥಿತಿ ಕಂಡು ಪೂಜೆ ನೆರವೇರಿಸಲು ಅವರೇ ಮುಂದಾದದ್ದು ಆಶ್ಚರ್ಯ. ಶಿವ ಶುದ್ಧ ಮನಸ್ಸಿನಿಂದ ಮಾಡುವ ಪೂಜೆಯನ್ನು ಸ್ವೀಕರಿಸುತ್ತಾನೆ. ಅದ್ಭುತ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಅಧಿಕಾರಿ ಜಾವೇದ್ ಖಾನ್ ಈ ಬಗ್ಗೆ ಮಾತನಾಡಿದ್ದು, ಕರ್ತವ್ಯ ನಿರ್ವಹಣೆ ಎಲ್ಲಾ ಧರ್ಮಕ್ಕಿಂತಲೂ ಮಿಗಿಲಾದದ್ದು, ನಾನು ಎಸ್ ಹೆಚ್ ಒ ನಿರ್ವಹಿಸಬೇಕಿದ್ದ ಕರ್ತವ್ಯವನ್ನು ಪಾಲಿಸಿದ್ದೇನೆ ಎಂದು ಹೇಳಿದ್ದಾರೆ.

Be the first to comment