ಹಳದೀಘಾಟ್ ಯುದ್ಧವನ್ನು ಗೆದ್ದಿರೋದು ಮಹಾರಾಣ ಪ್ರತಾಪರು! ಆದರೆ ಕ್ರೂರಿ ಅಕ್ಬರ್ ನ ಹೆಸರನ್ನೇಕೆ ಇತಿಹಾಸ ವಿಜ್ರಂಭಿಸಿದ್ದು?!

ಇತಿಹಾಸ ನಮಗೆ ಯಾವ ರೀತಿ ಚಳ್ಳೆ ಹಣ್ಣು ತಿನ್ನಿಸಿದೆ ಎಂದರೆ ಅಕ್ಬರ್ ನನ್ನು ಒಬ್ಬ ಮಹಾನ್ ವ್ಯಕ್ತಿಯಂತೆ ಬಿಂಬಿಸಿದೆ.  ಹಿಂದೂ ರಾಜರುಗಳ ಶೌರ್ಯ ಸಾಹಸವನ್ನು ಮುಚ್ಚಿಟ್ಟು ಇಲ್ಲಿ ಮೊಘಲರ ಅಟ್ಟಹಾಸವನ್ನು ಮರೆಮಾಚಿ ಅವರನನ್ನು ಮಹಾನ್ ವ್ಯಕ್ತಿಗಳಂತೆ ಬಿಂಬಿಸಲಾಗಿದೆ. ಅದನ್ನೇ ಮುಗ್ಧ ಜನರೆಲ್ಲಾ ನಂಬಿಕೊಂಡು ಬರುವಂತಾಯಿತು. ಅಂದು ಮಹಾರಾಣ ಪ್ರತಾಪರ ಸೇನೆಯ ಬಗ್ಗೆ ಕೇಳಿದರೇನೇ ಅಕ್ಬರನ ಸಾಮ್ರಾಜ್ಯವೇ ಗಡಗಡ ನಡುಗುತ್ತಿತ್ತು. ಅದಲ್ಲದೆ ಅಕ್ಬರನು ತಾನು ಎಲ್ಲಿಯವರೆಗೆ ಜೀವನವಂತವಿರುತ್ತಾನೋ ಅಲ್ಲಿಯವರೆಗೆ ಆತಂಕದಿಂದನೇ ಇರುವಂತೆ ಪ್ರತಾಪರು ನೋಡಿಕೊಂಡಿದ್ದರು. ಹಾಗಾಗಿ ಅಕ್ಬರನನ್ನು ಹಿಂದೂಗಳ ವಿರುದ್ಧ ದೌರ್ಜನ್ಯ ಎಸಗದಂತೆ ನೋಡಿಕೊಂಡಿತು. ಅಲ್ಲದೆ ಅಕ್ಬರನ ಸೈನ್ಯದಲ್ಲಿ ಅನೇಕ ಹಿಂದೂಗಳಿದ್ದರೂ ಅವರು ಆರಾಮಾಗಿ ಜೀವನ ಸಾಗಿಸುವಂತಾಯಿತು. ಒಂದು ವೇಳೆ ಅಕ್ಬರ್ ಹಿಂದೂಗಳ ವಿರುದ್ಧ ನಡದುಕೊಂಡರೆ ಆತನ ಜೊತೆಯಲ್ಲಿದ್ದ ಹಿಂದೂ ದೊರೆಗಳು ಮಹಾರಾಣ ಪ್ರತಾಪರ ಸೇನೆಯನ್ನು ಸೇರುವ ಸಾಧ್ಯತೆ ಇದೆ ಎಂಬ ಆತಂಕ ಮನೆಮಾಡಿತ್ತು. ಇದೇ ಆತಂಕ ಅಕ್ಬರನಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯ ಎಸಗದಂತೆ ನೋಡಿಕೊಂಡಿತು.

ಇತಿಹಾಸದಲ್ಲಿ ಅಕ್ಬರನ ಕತೆ ಕೇಳುತ್ತಲೇ ಹಾಗೇ ತೇಲಾಡಿ ಬಿಡುತ್ತಿದ್ದೆವು. ಆದರೆ ಆತನ ಅಸಲೀ ಸತ್ಯ ಬೇರೇನೇ ಇದೆ. ಅಕ್ಬರ್ ಇತರ ಮೊಘಲ್ ದೊರೆಗಳಂತೆ ಕ್ರೂರಿಯಾಗಿದ್ದು, ಈತ ರಜಪೂತರ ವಿರುದ್ಧದ ಪ್ರಾರಂಭಿಕ ಯುದ್ಧಗಳಲ್ಲಿ ಮೆರೆದ ಕ್ರೌರ್ಯ ಇತರ ಮೊಘಲ್ ರಾಜರುಗಳಂತೆ ಕಡಿಮೆ ಇರಲಿಲ್ಲ. ರಜಪೂತ ಮಹಿಳೆಯರನ್ನು ಸತಿಯ ಚಿತಾಗ್ನಿಗೆ ದೂಡಿದ ಪಾಪಕಾರ್ಯದಲ್ಲಿ ಅಕ್ಬರನ ಪಾತ್ರವೂ ಅಷ್ಟೇ ದೊಡ್ಡದಿದೆ. ಪ್ರತಾಪರು ಅಕ್ಬರನ ಬಲಾಢ್ಯ ಸೈನ್ಯದೆದುರು ಎಂದಿಗೂ ಶರಣಾಗಲೇ ಇಲ್ಲ. ಅಕ್ಬರನಿಗೆ ತಲೆಬಾಗಿದ್ದೇ ಆದರೆ ಪ್ರತಾಪರಿಗೆ ಸಕಲ ವೈಭೋಗಗಳನ್ನು ನೀಡುವುದಾಗಿ ಸಂಧಾನ ಪ್ರಸ್ತಾಪವಾದಾಗಲೂ ಸ್ವಾಭಿಮಾನ ಬಿಡಲಿಲ್ಲ. ಬಹುತೇಕ  ರಾಜರೆಲ್ಲಾ ಅಕ್ಬರನಿಗೆ ನಿಷ್ಠರಾಗಿ, ಅವರ ಜೊತೆ ವಿವಾಹ ಸಂಬಂಧ ಏರ್ಪಡಿಸಿದ್ದರೂ ಪ್ರತಾಪರು ಮಾತ್ರ ಕಾಡುಮೇಡುಗಳಲ್ಲಿ ಅಲೆದಾಡುತ್ತಾ ಅಕ್ಬರನಿಗೆ ಪ್ರತಿರೋಧ ಒಡ್ಡುತ್ತಲೇ ಇದ್ದರು.

ಈವರೆಗೆ ನಾವೆಲ್ಲರು ತಿಳಿದುಕೊಂಡಿರುವ ಪ್ರಕಾರ, ಹಳದಿಘಾಟ್ ನ ಯುದ್ಧವು ಜೂನ್, 18, 1576ರಲ್ಲಿ ನಡೆದಿತ್ತು ಎಂದು ಹೇಳಿದ್ದಾರಲ್ಲದೇ ಬಣ್ಣ ಬಣ್ಣದ ಕಥೆಗಳನ್ನು ಕಟ್ಟಿ ಸುಳ್ಳಿನ ಮೇಲೆ ಸುಳ್ಳುಗಳನ್ನು ಹೇಳುತ್ತಾ ದೇಶದ ಪ್ರಜೆಗಳನ್ನು ಹಾದಿ ತಪ್ಪಿಸುತ್ತಾ ಬಂದಿದ್ದರು. ಅಷ್ಟೇ ಅಲ್ಲದೇ, ಇತಿಹಾಸಕಾರರು ಅಕ್ಬರನ ಮೇಲಿನ ಒಲವಿನ ಮೇರೆಗೋ ಅಥವಾ ಆತನ ಮೇಲಿನ ಕಾಳಜಿಯ ಮೇಲೆಯೋ ಏನೋ ಗೊತ್ತಿಲ್ಲ?. ಈ ಯುದ್ಧವು ಕೇವಲ ಒಪ್ಪಂದದಿಂದ ಮುಗಿಯಿತೆಂದು ಅಂತ್ಯಹಾಡಿದ್ದರು. ಆದರೆ ಈ ಯುದ್ಧವು ಒಪ್ಪಂದದಿಂದ ಕೊನೆಯಾಗಲಿಲ್ಲ, ಬದಲಿಗೆ ಮಹಾರಾಣ ಪ್ರತಾಪನ ಶೌರ್ಯದಿಂದ ಅಕ್ಬರನನ್ನು ಹೆಡೆಮುರಿ ಕಟ್ಟಿದ ಬಳಿಕವೇ ಈ ಯುದ್ಧ ಕೊನೆಗೊಂಡಿದ್ದು!!  ಈ ಮೊದಲು ರಾಜಸ್ಥಾನ ಸರಕಾರ ಮಕ್ಕಳ ಪಠ್ಯ ಪುಸ್ತಕದಲ್ಲಿ ಅಕ್ಬರ್ ದಿ ಗ್ರೇಟ್ ಎಂಬ ಶೀರ್ಷಿಕೆಯೊಂದಿಗೆ ಮಕ್ಕಳಿಗೆ ಹಳದಿಘಾಟ್ ಯುದ್ಧ ಬಗ್ಗೆ ತಪ್ಪಾಗಿ ಬೋಧಿಸಲಾಗುತ್ತಿತ್ತು. ಆದರೆ ವಸುಂಧರ ರಾಜೆ ಅವರ ಸರ್ಕಾರ ಬಂದ ಮೇಲೆ ಇದನ್ನು ತೆಗೆದು ಹಾಕಲಾಯಿತು.

ಅಲ್ಲದೇ ಹಳದಿಘಾಟ್ ಬಗೆಗಿರುವ ನೈಜ್ಯ ಇತಿಹಾಸವನ್ನು ಸಂಶೋಧನೆ ಮಾಡಿರುವ ಪೆÇ್ರಫೆಸರ್ ಚಂದ್ರಶೇಖರ್ ಶರ್ಮ ಅವರು, “ಯಾವ ಕಾರಣದಿಂದಾಗಿ ರಜಪೂತರು ಹಳದಿಘಾಟ್ ಯುದ್ಧದಲ್ಲಿ ನಿರ್ಣಾಯಕವಾಗಿ ಗೆಲುವು ಸಾಧಿಸಿದ್ದಾರೆ ಎಂಬುವುದನ್ನು ಸವಿವರವಾಗಿ ಹೇಳಿದ್ದಾರೆ. ಇವರ ಸಂಶೋಧನೆಯು 16 ನೇ ಶತಮಾನದ ದಾಖಲೆಗಳ ಆಧಾರದ ಮೇಲಿದ್ದು, ಮಹಾರಾಣ ಪ್ರತಾಪರ ಬಗ್ಗೆ ನಿಜವಾದ ಇತಿಹಾಸವನ್ನು ಹೇಳಿದ್ದಾರೆ!! ಜೂನ್ 18, 1576ರ ಯುದ್ಧದಲ್ಲಿ ಮಹಾರಾಣ ಪ್ರತಾಪ್ ಹಳದಿಘಾಟ್‍ನ ಹತ್ತಿರದ ಗ್ರಾಮಗಳ ಭೂಮಿಯ ಹಕ್ಕನ್ನು ತಾಮ್ರದ ಪ್ರತಿಫಲಕಗಳಲ್ಲಿ ಬರೆಸಿ ದಿವಾನನಾದ ಏಕಲಿಂಗನಾಥ್‍ಗೆ ಹಸ್ತಾಂತರಿಸಿದ್ದರು ಎನ್ನುವುದನ್ನು ಹೇಳಿದ್ದಾರೆ!!

ಇನ್ನು ಈ ವಿಚಾರಗಳನ್ನು ಬೆನ್ನಟ್ಟಿದ್ದ ಪೆÇ್ರಫೆಸರ್ ಚಂದ್ರಶೇಖರ್ ಶರ್ಮ ಅವರು, ಕೇವಲ ರಾಜ ಮಾತ್ರ ತನ್ನ ಪ್ರಾಂತ್ಯಗಳ ಪ್ರದೇಶಗಳನ್ನು ಬೇರೊಬ್ಬರಿಗೆ ಹಸ್ತಾಂತರ ಮಾಡಲು ಸಾಧ್ಯ!! ಈ ಎಲ್ಲಾ ಸಾಕ್ಷ್ಯಾಧಾರಗಳು ಮಹಾರಾಣ ಪ್ರತಾಪ್ ವಾಸ್ತವವಾಗಿ ಹಳದಿಘಾಟ್ ಯುದ್ಧದಲ್ಲಿ ಗೆಲುವು ಸಾಧಿಸಿದ್ದಾರೆ ಎಂಬುವುದನ್ನು ಸಾಬೀತುಪಡಿಸುತ್ತದೆ. ಅಲ್ಲದೇ, ಹಳದಿಘಾಟ್ ಯುದ್ಧದಲ್ಲಿದ್ದ ಇಬ್ಬರು ಮೊಘಲ್ ಸೇನಾಧಿಪತಿಗಳಾಗಿದ್ದ ಮಾನ್ ಸಿಂಗ್ ಮತ್ತು ಆಸಿಫ್ ಖಾನ್‍ಗೆ ಅಕ್ಬರ್ ನು ತನ್ನ ದರ್ಬಾರ್ ನ ಒಳಗೆ ಪ್ರವೇಶವನ್ನು ನೀಡಿರಲಿಲ್ಲ. ಇದು ಯುದ್ಧದಲ್ಲಿ ಸೋತಿದ್ದ ಕಾರಣಕ್ಕಾಗಿ ಅಕ್ಬರನು ಅವರಿಗೆ ನೀಡಿದ ಶಿಕ್ಷೆ ಎಂಬುವುದನ್ನು ತಿಳಿಸುತ್ತದೆಯಲ್ಲದೇ, ಇದು ಹಳದಿಘಾಟ್ ಯುದ್ಧದಲ್ಲಿ ಅಕ್ಬರನ ಸೇನೆಯು ಸೋತಿರುವುದನ್ನು ಇದು ರುಜುವಾತು ಪಡಿಸುತ್ತದೆ.

ಅದೇ ಯುದ್ಧದಲ್ಲಿ ಚೇತಕನ ಪ್ರಾಣ ಹಾರಿಹೋಯಿತು. ಚೇತಕನ ಮೃತ್ಯುವಿನಿಂದ ಮಹಾರಾಣಾರಿಗೆ ಬಹಳ ದುಃಖವಾಯಿತು. ಚೇತಕ ಪ್ರಾಣ ಬಿಟ್ಟಿರುವ ಸ್ಥಳದಲ್ಲಿ ಮಹಾರಾಣಾ ಪ್ರತಾಪಸಿಂಹರು ಅದರ ನೆನಪಿಗಾಗಿ ಒಂದು ಸುಂದರವಾದ ಉದ್ಯಾನವನವನ್ನು ನಿರ್ಮಿಸಿದರು. ಅನಂತರ ನೇರವಾಗಿ ಅಕ್ಬರನೇ ಯುದ್ಧಕ್ಕೆ ಬಂದನು. ಆತ ಬರೋಬ್ಬರಿ 6 ತಿಂಗಳು ಯುದ್ಧ ನಡೆಸಿಯೂ ಪ್ರತಾಪರನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಯುದ್ಧಕ್ಕೆ ಅಕ್ಬರ ಸಾಕಷ್ಟು ಹಾನಿ ಅನುಭವಿಸುತ್ತಿದ್ದ. ಆದರೆ ಈ ಯುದ್ಧ ಗೆದ್ದಿದ್ದು ಮಹಾರಾಣ ಪ್ರತಾಪರೇ..

ಇಂದು ಹಿಂದೂಗಳು ಬಹುಸಂಖ್ಯಾರಾಗಿ ಉಳಿದುಕೊಂಡಿರುವುದಕ್ಕೆ ಮಹಾರಾಣಾ ಪ್ರತಾಪರೂ ಕಾರಣ. ಇಲ್ಲದೇ ಹೋಗಿದ್ದರೆ ಮೊಘಲರು ಭಾರತವನ್ನು ಎಂದೋ ಇಸ್ಲಾಮೀ ರಾಷ್ಟ್ರವನ್ನಾಗಿ ಮಾಡಿರುತ್ತಿದ್ದರು. ವಿದೇಶಿ ರಕ್ತದಿಂದ ತನ್ನವರ ರಕ್ತ ಕಲುಷಿತಗೊಳ್ಳಬಾರದೆಂದೂ ತನ್ನ ದೇಶ ಸದಾ ಸ್ವತಂತ್ರವಾಗಿಯೇ ಇರಬೇಕೆಂದೂ ಅದಕ್ಕಾಗಿ ತನ್ನ ಜೀವನವನ್ನೇ ಬಲಿ ನೀಡಲು ಮಹಾರಾಣಾ ಪ್ರತಾಪ ನಿರ್ಧರಿಸಿಕೊಂಡಿದ್ದರು. ಇಂತಹ ಪರಾಕ್ರಮಿ ರಾಜರುಗಳ ಎದುರು ಯಾವ ಮೊಘಲರು ರಾಜರುಗಳೂ ಸರಿಸಾಟಿ ಇಲ್ಲ. ನಮ್ಮ ಈ ನೆಲವನ್ನು ಅಕ್ರಮವಾಗಿ ಕಬಳಿಸಿ, ಹಿಂದೂಗಳಿಗೆ ಚಿತ್ರಹಿಂಸೆ ಕೊಟ್ಟು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಲ್ಲದೆ, ಮತಾಂತರವಾಗಲು ಒಪ್ಪದೇ ಇದ್ದವರನ್ನು ತಲೆಕಡಿದು ವಿಕೃತಿ ಮರೆದು, ಇಲ್ಲಿನ ಅನೇಕ ಹಿಂದೂ ದೇವಾಲಯಗಳನ್ನು ನಾಶ ಮಾಡಿ ವಿಕೃತಿ ಮೆರದ ನಿಮ್ಮಂತಹ ಮೊಘಲರನ್ನು ಇತಿಹಾಸ ಸುಖಾಸುಮ್ಮನೆ ಅವರನ್ನು ಅಟ್ಟಕೇರಿಸಿದ್ದು ವಿಷಾದನೀಯ ಸಂಗತಿ… ಹಿಂದೂ ಧರ್ಮದ ಉಳಿವಿಗಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಮಾತ್ರ ಇತಿಹಾಸ ಮರೆಮಾಚಿರುವುದು ನಮ್ಮ ದುರಾದೃಷ್ಟ!! ಇನ್ನಾದರೂ ಎದ್ದೇಳಿ. ಹಿಂದೂ ಧರ್ಮದ ಉಳಿಗಾಗಿ ಹೋರಾಡೋಣ…

Be the first to comment