ದೇವರು ಪಾಕಿಸ್ತಾನದಂತಹ ನೆರೆಹೊರೆಯನ್ನು ಯಾರಿಗೂ ನೀಡದಿರಲಿ! ಪಾಪಿರಾಷ್ಟ್ರದ ಹುಚ್ಚಾಟಕ್ಕೆ ರಾಜ್‍ನಾಥ್ ಸಿಂಗ್ ಕಿಡಿ…

ಕಲಂ 370 ರದ್ಧತಿ ವಿಚಾರ ದೇಶಕ್ಕೆ ದೇಶವೇ ಸಂಭ್ರಮಾಚರಣೆಯಲ್ಲಿದ್ದು ಇಡೀ ವಿಶ್ವವೇ ಭಾರತದ ನಡೆಗೆ ಖುಷಿಪಟ್ಟಿದ್ದೂ ಪಾಕಿಸ್ತಾನ ಮಾತ್ರ ತನ್ನ ವಕ್ರ ಬುದ್ಧಿಯನ್ನು ತೋರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿದ್ದ ಐತಿಹಾಸಿಕ ನಿರ್ಧಾರಕ್ಕೆ ಬೆಚ್ಚಿಬಿದ್ದಿರುವ ಪಾಕಿಸ್ತಾನ ಭಾರತದೊಂದಿಗೆ ಎಲ್ಲ ರಾಜತಾಂತ್ರಿಕ ಸಂಬಂಧವನ್ನು ಕಡಿತಗೊಳಿಸಿದೆ. ಮುಖ್ಯವಾಗಿ ಈ ನಿರ್ಧಾರದಿಂದ ಭಾರತಕ್ಕೇನು ಲಾಭವೂ ಇಲ್ಲ ನಷ್ಟವೂ ಇಲ್ಲ.. ಅಂತಹ ಭಿಕಾರಿ ರಾಷ್ಟ್ರದ ಜೊತೆ ನಮಗ್ಯಾವ ನಂಟೂ ಬೇಕಾಗಿಲ್ಲ.. ಆದರೆ ಪಾಕ್ ಗೆ ಹೆಚ್ಚಿನ ಹೊಡೆತ ಬೀಳುವುದು ಖಂಡಿತ! ಯಾಕೆಂದರೆ ಹಲವು ವಿಚಾರಗಳಲ್ಲಿ ಪಾಕಿಸ್ತಾನ ಭಾರತವನ್ನು ಅವಲಂಬಿಸಿದೆ. ಇದೀಗ ಭಾರತದ ವಿರುದ್ಧ ದರ್ಪ ತೋರಿಸಲು ಹೋಗಿ ತಾನೇ ತೋಡಿದ ಗುಂಡಿಗೆ ಪಾಕಿಸ್ತಾನ ಬೀಳುತ್ತೆ ಅನ್ನೋದು ಗ್ಯಾರಂಟಿ.. ಪಾಕಿಸ್ತಾನದ ಮೊಂಡುತನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್‍ರವರು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.

ಪಾಕಿಸ್ತಾನದಂತಹ ನೆರೆಹೊರೆ ಯಾರಿಗೂ ಸಿಗದಿರಲಿ!

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದುಪಡಿಸಿದ ನಂತರ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತೀಯ ರಾಯಭಾರಿ ಉಚ್ಛಾಟನೆ ಸೇರಿ ಐದು ಹತಾಶ ಕ್ರಮಗಳಿಗೆ ಮುಂದಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೇವರು ಇಂತಹ ನೆರೆ ರಾಷ್ಟ್ರವನ್ನು ಯಾರಿಗೂ ನೀಡದಿರಲಿ ಎಂದು ಕಿಡಿ ಕಾರಿದ್ದಾರೆ. ದೆಹಲಿಯಲ್ಲಿ ನಿವೃತ್ತ ಸೈನಿಕರ ಸಮಾರಂಭವೊಂದರಲ್ಲಿ ಮಾತನಾಡಿದ ರಾಜನಾಥ್ ಸಿಂಗ್ `ನಮ್ಮ ನೆರೆರಾಷ್ಟ್ರ ಪಾಕಿಸ್ತಾನದ ಕುರಿತು ಮತ್ತು ಅದರ ಉದ್ದೇಶಗಳ ಕುರಿತು ನಮಗೆ ಅನುಮಾನ ಇದ್ದೇ ಇರುತ್ತದೆ. ಸಮಸ್ಯೆ ಏನೆಂದರೆ ನೀವು ನಿಮ್ಮ ಸ್ನೇಹಿತರನ್ನು ಬದಲಿಸಬಹುದು. ಆದರೆ, ನೆರೆಯವರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಜತೆಗೆ ಪಾಕ್ ನಂತಹ ನೆರೆಯವರು ನಮ್ಮ ಪಕ್ಕದಲ್ಲಿ ಕುಳಿತಿದ್ದಾರೆ.

ದೇವರು ಇಂತಹ ನೆರೆ ರಾಷ್ಟ್ರವನ್ನು ಯಾರಿಗೂ ನೀಡದಿರಲಿ ಎಂದು ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತ ಸರ್ಕಾರದ ನಿರ್ಧಾರವನ್ನು ಖಂಡಿಸಿ ಪಾಕಿಸ್ತಾನ ಸರ್ಕಾರ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರಿಯನ್ನು ಸ್ವದೇಶಕ್ಕೆ ತೆರಳುವಂತೆ ಸೂಚಿಸಿದೆ. ಜತೆಗೆ ಭಾರತದೊಂದಿಗಿನ ಸಂಬಂಧವನ್ನು ತಗ್ಗಿಸಲು ಹಾಗೂ ದ್ವಿಪಕ್ಷೀಯ ಒಪ್ಪಂದಗಳನ್ನು ಸ್ಥಗಿತಗೊಳಿಸಲು ಪಾಕ್ ತೀರ್ಮಾನಿಸಿದೆ. ಆದರೆ ಇದರಿಂದ ಭಾರತಕ್ಕೆ ಯಾವ ನಷ್ಟವೂ ಆಗಲು ಸಾಧ್ಯವಿಲ್ಲ. ಯಾಕೆಂದರೆ ಭಾರತ ಜೊತೆ ಈ ಭಿಕಾರಿ ರಾಷ್ಟ್ರ ಪಾಕಿಸ್ತಾನವನ್ನು ಬಿಟ್ಟರೆ ಬೇರೆ ಎಲ್ಲಾ ರಾಷ್ಟ್ರಗಳು ಭಾರತದ ಎಲ್ಲಾ ನಿರ್ಧಾರಕ್ಕೂ ಸಮ್ಮತಿಸುತ್ತದೆ ಜೊತೆಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭಾರತದ ಜೊತೆ ಕೈ ಜೋಡಿಸುತ್ತೆ! ಆದರೆ ಇದೇ ರೀತಿ ಪಾಕಿಸ್ತಾನ ಭಾರತದ ವಿರೋಧ ನಿಂತರೆ ಕೊನೆಗೊಂದು ದಿನ ಭಿಕ್ಷೆ ಬೇಡೋ ಪರಿಸ್ಥಿತಿ ಬರೋದು ಖಂಡಿತ…

Be the first to comment