ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಶೀಘ್ರದಲ್ಲೇ ಕೋಲ್ಕತ್ತಾದಲ್ಲಿ ಸಂಚಾರ..

ಅಬ್ಬಾ! ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆ ಏರಿದಾಗಿನಿಂದ ಭಾರತದಲ್ಲಿ ಏನಾಗುತ್ತಿದೆ ಎಂದು ಯೋಚಿಸಲೂ ಅಸಾಧ್ಯ.. ಯಾಕೆಂದರೆ ಇಡೀ ವಿಶ್ವವೇ ಭಾರತವನ್ನು ಕಡೆಗಣಿಸಿದ್ದ ಸಮಯದಲ್ಲಿ 2014ರಲ್ಲಿ ಮೋದಿಜೀಯನ್ನು ಆ ದೇವರೇ ಭಾರತದ ಪ್ರಧಾನಿಯನ್ನಾಗಿ ಮಾಡಿದರೋ ಏನೋ… ಅಂದಿನಿಂದ ಇಡೀ ಭಾರತ ಬದಲಾಯಿತು.. ಅವರು ಮಾಡಿರುವ ಯೋಜನೆಗಳು ಅಭಿವೃದ್ಧಿಗಳು ಒಂದಾ ಎರಡಾ? ಯುಪಿಎ ಸರಕಾರದ ಅವಧಿಯಲ್ಲಿ ಇಡೀ ವಿಶ್ವ ಹೇಳಿದ್ದನ್ನು ನಾವು ಕೈ ಕಟ್ಟಿ ಕೇಳಬೇಕಿತ್ತು.. ಆದರೆ ಇಂದು ಭಾರತ ಹೇಳಿದ್ದನ್ನು ಇಡೀ ಜಗತ್ತು ಕೇಳುತ್ತೇ ಅಂದರೆ ಭಾರತಕ್ಕೆ ಇಡೀ ವಿಶ್ವ ಎಂತಹ ಸ್ಥಾನ ನೀಡುತ್ತೆ ಅನ್ನೋದನ್ನ ಊಹಿಸಲೂ ಅಸಾಧ್ಯ! ದಿನದಿಂದ ದಿನಕ್ಕೆ ನಾನಾ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೋದಿ ಸರಕಾರ ರೈಲ್ವೆ ಇಲಾಖೆಗೂ ಹೆಚ್ಚಿನ ಮಹತ್ವ ಕೊಡುತ್ತಿದ್ದು ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ಧಿಯನ್ನೇ ರೈಲ್ವೆ ಇಲಾಖೆ ನೀಡುತ್ತಿದೆ. ಭಾರತ ಸಂಚಾರದ ಜೀವನಾಡಿಯಾಗಿರುವ ಮತ್ತು ಅತಿ ದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೆ ಇಲಾಖೆಯು ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಕಾರ್ಯಾರಂಭಿಸಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಶೀಘ್ರದಲ್ಲೇ ದೇಶದ ಮೊದಲ ಅಂಡರ್ ವಾಟರ್ ಮೆಟ್ರೊ ರೈಲು ಸಂಚಾರ!

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತ್ತಾದಲ್ಲಿ ಶೀಘ್ರದಲ್ಲೇ ದೇಶದ ಮೊದಲ ಅಂಡರ್‍ವಾಟರ್ ಮೆಟ್ರೊ ರೈಲು ಸಂಚರಿಸಲಿದೆ. ಹೂಗ್ಲಿ ನದಿ ಆಳದಲ್ಲಿ ಅಂಡರ್‍ವಾಟರ್ ಮೆಟ್ರೋ ರೈಲು ಕಾಮಗಾರಿ ಅಂತಿಮ ಹಂತ ತಲುಪಿದ್ದು, ಸದ್ಯದಲ್ಲೇ ಸಂಚಾರ ಆರಂಭವಾಗಲಿದೆ. ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಟ್ವೀಟ್ ಮೂಲಕ ಈ ವಿಷಯ ತಿಳಿಸಿದ್ದಾರೆ. ಮೆಟ್ರೋ ಲೈನ್-2 ಅಥವಾ ಈಸ್ಟ್-ವೆಸ್ಟ್ ಮೆಟ್ರೋ ಭಾಗವಾಗಿ ಈ ಅಂಡರ್ ವಾಟರ್ ರೈಲು ಸಂಚರಿಸಲಿದೆ. ಒಟ್ಟು ಒಂದು ನಿಮಿಷಗಳ ನದಿಯ ಆಳದಲ್ಲಿ ಇರಲಿದೆ. ರೈಲಿನೊಳಗೆ ಒಂದೇ ಒಂದು ಹನಿ ನೀರು ಕೂಡ ನುಸುಳದಂತೆ 4 ಪದರದ ಸುರಕ್ಷತಾ ಕವಚವನ್ನು ಬಳಸಲಾಗುತ್ತಿದೆ.

16 ಕಿಮೀ ಉದ್ದದ ಮೆಟ್ರೋ ಪ್ರಾಜೆಕ್ಟ್ ಇದಾಗಿದ್ದು ಸಾಲ್ಟ್ ಸೆಕ್ಟರ್ 5ನ್ನು ಹೌರೌ ಮೈದಾನದೊಂದಿದೆ ಸಂಪರ್ಕಿಸಲಿದೆ. ಸಾಲ್ಟ್ ಲೇಖ್ ಸೆಕ್ಟರ್ 5ನ್ನು ಸಾಲ್ಟ್ ಲೇಕ್ ಸ್ಟೇಡಿಯಂಗೆ ಸಂಪರ್ಕಿಸುವ ಯೋಜನೆಯ ಮೊದಲ ಹಂತ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಇದರ ಸುರಂಗಕ್ಕೆ ನಾಲ್ಕು ಸುತ್ತಿನ ಭದ್ರತೆಯನ್ನು ಒದಗಿಸಲಾಗಿದ್ದು ಇದು ಹೂಗ್ಲಿ ನದಿ ನೀರಿನಿಂದ ರಕ್ಷಣೆ ಮಾಡುತ್ತದೆ. ನಿಜಕ್ಕೂ ಹೇಳಬೇಕೆಂದರೆ ದೇಶದ ಅಭಿವೃದ್ಧಿ ಅಡಕವಾಗಿರುವುದೇ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ. ಅದಕ್ಕೋಸ್ಕರ ಇದೀಗ ಮೋದಿ ಸರಕಾರ ಸಾರಿಗೆ ಸಂಪರ್ಕವನ್ನು ಅಭಿವೃದ್ಧಿಗೊಳಿಸುತ್ತಿದೆ. ಒಟ್ಟಾರೆಯಾಗಿ ಮೋದಿಜೀ ಅಧಿಕಾರವಹಿಸಿದಾಗಿನಿಂದ ದಿನದಿಂದ ದಿನಕ್ಕೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಖಂಡಿತ!!

Be the first to comment