ಅಂದು ನಮ್ಮ ಸೈನಿಕರ ಹೋರಾಟದ ಫಲವೇ ಲಡಾಖ್ ಭಾರತದಲ್ಲೇ ಉಳಿಯುವಂತಾಯಿತು! ಶೈತಾನ್ ಸಿಂಗ್‍ ನ ಸಾಹಸಕ್ಕೊಂದು ಸೆಲ್ಯೂಟ್…

ಎರಡನೇ ಮಹಾಯುದ್ಧ ಸಂಭವಿಸುವ ಒಂದು ವರ್ಷದ ಮುಂಚೆಯೇ ಭಾರತಕ್ಕೆ ಯುದ್ದೋಪಕರಣಗಳ ಅಗತ್ಯವಿತ್ತು. ಅಂದಿನ ಪ್ರಧಾನಿಯಾದ ನೆಹರೂ ಅವರಲ್ಲಿ ಮನವಿ ಮಾಡಿದ್ದರೂ ಆ ಮನವಿಯನ್ನು ತಿರಸ್ಕರಿಸಿ ಬಿಟ್ಟಿದ್ದರು. ಹಾಗೆ ಮನವಿಯನ್ನು ಮೂಲೆಗುಂಪು ಮಾಡಿದ ಪರಿಣಾಮ 1962ರ ಯುದ್ಧವನ್ನೇ ಸೋಲಬೇಕಾಯಿತು ಅಂತಾ ಹೇಳೋಕೆ ನಿಜಕ್ಕೂ ಬೇಸರದ ಸಂಗತಿ.. ಅಂದು ಸೈನಿಕರಿಗೆ ಬೇಕಾದ ಯುದ್ಧೋಪರಣಗಳನ್ನು ಒದಗಿಸುತ್ತಿದ್ದರೆ ಅಂದು ಅಷ್ಟು ಸೈನಿಕರನ್ನೂ ಕಳೆದುಕೊಳ್ಳುತ್ತಿರಲಿಲ್ಲ. ಅಂದು ಭಾರತ ಆ ಯುದ್ಧದಲ್ಲಿ ಸೋತಿರಬಹುದು ಆದರೆ ಯುದ್ಧ ಗೆದ್ದ ಚೀನಾ ನಿಜವಾಗಿಯೂ ಸೋತಿದೆ. ಯಾಕೆಂದರೆ ಆ ದೇಶ ಸಾವಿರಾರು ಮಂದಿ ಸೈನಿಕರನ್ನು ಕಳೆದುಕೊಂಡಿದೆ. ಶೈತಾನ್ ಸಿಂಗ್ ನೇತೃತ್ವದಲ್ಲಿ ನಡೆದ ಯುದ್ಧ ನಿಜಕ್ಕೂ ಅಚ್ಚರಿಯನ್ನು ತರಿಸುತ್ತೆ.. ದೇಶದ ರಕ್ಷಣೆಯ ವಿಚಾರ ಬಂದಾಗ ಪ್ರಾಣ ತ್ಯಾಗ ಮಾಡಲೂ ಹಿಂಜರಿಯಲ್ಲ ಈ ಯೋಧರು.. ಇವರೇ ನಿಜವಾದ ಕಣ್ಣಿಗೆ ಕಾಣೋ ದೇವರು..

ಇಂದು ಲಡಾಖ್ ಭಾರತದಲ್ಲೇ ಉಳಿಯಬೇಕಿದ್ದರೆ ಅದಕ್ಕೆ ಕಾರಣ ಶೈತಾನ್ ಸಿಂಗ್!!

ಹೌದು, ಲಡಾಖ್ ಎನ್ನುವ ಪ್ರದೇಶ ಭಾರತದಲ್ಲೇ ಉಳಿಯಬೇಕಿದ್ದರೆ ಅದಕ್ಕೆ ಪ್ರಮುಖ ಕಾರಣ ಶೈತಾನ್ ಸಿಂಗ್. ಇವರು ಅಹಿರ್ ಎನ್ನುವ ಪಂಗಡಕ್ಕೆ ಸೇರಿದ್ದು, ವೀರ್ ಅಹಿರ್ ಎಂದೇ ಹೆಸರು ಪಡೆದಿದ್ದಾರೆ. ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿ ದೇಶಕ್ಕಾಗಿ ಪ್ರಾಣ ಕೊಟ್ಟ ಅಹಿರ್ ಪಂಗಡದ ಶೈತಾನ್ ಸಿಂಗ್ ನಡೆಸಿಕೊಂಡು ಬರುತ್ತಿದ್ದ ರೆಜಿಮೆಂಟ್ ಚೀನಾದವರನ್ನು ಮಣ್ಣುಮುಕ್ಕಿಸಿದ ರೀತಿಯೇ ಒಂದು ಅದ್ಭುತ. ಲಡಾಖ್ ಎನ್ನುವುದು ಭಾರತಕ್ಕೆ ಅಗತ್ಯವಾಗಿ ಉಳಿಯಲೇಬೇಕಾದ ಪ್ರದೇಶ. ಯಾಕೆಂದರೆ ಚುಶುಲ್ ಕಣಿವೆ ಪ್ರದೇಶದ ಸಮೀಪ ಭಾರತ ವಾಯುನೆಲೆಯನ್ನು ನಿರ್ಮಿಸಿರುವುದರಿಂದ ಶತ್ರುಗಳನ್ನು ಸುಲಭವಾಗಿ ಹಿಮ್ಮೆಟ್ಟಿಸಬಹುದು. ಒಂದು ವೇಳೆ ಆ ಪ್ರದೇಶ ಚೀನಾಕ್ಕೆ ಹೋಗಿಬಿಟ್ಟಿದ್ದರೆ ಭಾರತಕ್ಕೆ ಭವಿಷ್ಯದಲ್ಲಿ ತುಂಬಾ ಅಪಾಯವಾಗುವ ಸಾಧ್ಯತೆ ಇತ್ತು. ಶೈತಾನ್ ಸಿಂಗ್ ಅವರನ್ನು ರೇಡಿಯೋದಲ್ಲಿ ಸಂಪರ್ಕಿಸಿದ ಹಿರಿಯ ಅಧಿಕಾರಿಗಳು, `ನಾಳೆ ಬೆಳಿಗ್ಗೆ ಚೀನಾ ನಿಮ್ಮ ಮೇಲೆ ದಾಳಿಮಾಡುವುದಿದೆ. ಅವರು 5 ರಿಂದ 6 ಸಾವಿರ ಜನ ಸೈನಿಕರಿರುವರು. ನೀವಿರುವುದು ಕೇವಲ 124 ಜನ ಕೆಳಗಿಳಿದು ಬಂದುಬಿಡಿ, ಮುಂದೆ ನೋಡಿಕೊಳ್ಳೋಣ’ ಎಂದು ಹೇಳಿದ್ದರು.

ಯಾರಿಗಾದರೂ ಜೀವ ಉಳಿಸಿಕೊಳ್ಳಬೇಕೆಂಬ ಹಂಬಲ ಇದ್ದಲ್ಲಿ ಕೆಳಗಿಳಿದು ಹೊರಟುಬಿಡಿ… ನಾನೂ ಮಾತ್ರ ಪ್ರಾಣ ಹೋದರೂ ಕೆಳಗಿಳಿಯಲ್ಲ!!

ಶೈತಾನ್ ಸಿಂಗ್ 13 ನೆಯ ಕುಮೌನ್ ಬಟಾಲಿಯನ್ ನ 124 ಸೈನಿಕರ ಆಫೀಸರ್.. ಭಾರತ ಚೀನಾ ಯುದ್ಧದ ಸಮಯದಲ್ಲಿ ಜಮ್ಮು ಕಾಶ್ಮೀರ ರಾಜ್ಯದ ರೆಜಂಗ್ಲಾ ಪಾಸ್ ಎಂಬ 5000 ಮೀ. (16404 ಅಡಿ) ಎತ್ತರದ ಬೆಟ್ಟವನ್ನು ಕಾಯುವುದು ಶೈತಾನ್ ಸಿಂಗ್ ಮತ್ತು ತಂಡದ ಕೆಲಸವಾಗಿತ್ತು. ಅದನ್ನವರು ತನ್ನ ತಾಯಿಯ ದೇಹದ ಭಾಗವನ್ನು ಕಾಯುತ್ತಿರುವಷ್ಟೇ ಪ್ರೀತಿಯಿಂದ ಮಾಡುತ್ತಿದ್ದರು. ಅವರಿರುವುದು ಕೇವಲ 124 ಸೈನಿಕರು ಜೊತೆಗೆ ಆಫೀಸರ್ ಶೈತಾನ್ ಸಿಂಗ್.. ಆದ್ದರಿಂದಲೇ ಮೇಲಾಧಿಕಾರಿಗಳು ಇವರಿಗೆ ಕೆಳಗಿಳಿದು ಬರುವಂತೆ ಆದೇಶ ನೀಡಿದ್ದರು.. ಆದರೆ ನಮ್ಮ ಭೂಭಾಗವನ್ನು ಬಿಟ್ಟುಕೊಟ್ಟು ಹೋಗಲಿಚ್ಛಿಸದ ಶೈತಾನ್ ಸಿಂಗ್ ಅಲ್ಲೇ ಇರುವ ನಿರ್ಧಾರ ಮಾಡಿದ್ದನು. ಅಲ್ಲದೆ ತನ್ನ ಸೈನಿಕರನ್ನು ಬಳಿ ಕರೆದು, ` ನಾಳೆ ಬೆಳಿಗ್ಗೆ ಚೀನಾ ನಮ್ಮ ಮೇಲೆ ದಾಳಿ ಮಾಡುವುದಿದೆ ನಿಮ್ಮಲ್ಲಿ ಯಾರಿಗಾದರೂ ಜೀವ ಉಳಿಸಿಕೊಳ್ಳಬೇಕೆಂಬ ಹಂಬಲ ಇದ್ದಲ್ಲಿ ಕೆಳಗಿಳಿದು ಹೊರಟುಬಿಡಿ ನಾನೂ ಮಾತ್ರ ಇಲ್ಲಿಂದ ಕದಲಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದರು. ಇವರ ಉತ್ಸಾಹ ವನ್ನು ಕಂಡ ಸೈನಿಕರು ತಾವೂ ಈ ಜಾಗ ಬಿಟ್ಟು ತೆರಳಲ್ಲ ಅಂತಾ ಅಲ್ಲೇ ಕುಳಿತು ಬಿಟ್ಟರು!!

ಕೇವಲ 124 ಸೈನಿಕರು 2500 ಚೀನೀ ಸೈನಿರನ್ನು ಹೊಡೆದುರುಳಿಸಿದ ಪರಿ ನಿಜಕ್ಕೂ ಊಹಿಸಲೂ ಅಸಾಧ್ಯ!!

ರಾತ್ರಿ ಕುಳಿತು ಬೇರೆ ಬೇರೆ ವ್ಯೂಹಗಳನ್ನು ರಚಿಸಿದ ಶೈತಾನ್ ಸಿಂಗ್ ಚೀನಿಯರನ್ನು ಎದುರಿಸಲು ತನ್ನ ಪಡೆಯನ್ನು ಸನ್ನದ್ಧವಾಗಿಸಿ ಕುಳಿತ. ನಸುಕಿನ ಸುಮಾರು 4 ಗಂಟೆಗೆ ಚೀನಿಯರ ದಾಳಿ ಆರಂಭವಾಯಿತು. ಸಿಂಗ್ ತನ್ನ ಸೈನಿಕರನ್ನು ಅದ್ಯಾವ ಪರಿ ಹುರಿದುಂಬಿಸಿದ್ದ ಎಂದರೆ ಪ್ರತಿಯೊಂದು ಚೀನೀ ಸೈನಿಕರ ಅಲೆಯನ್ನೂ ಸಮರ್ಥವಾಗಿ ಹಿಮ್ಮೆಟ್ಟಿಸಿದರು.. ಸುಮಾರು 5 ಗಂಟೆಗಳ ಕಾಲ ಅದ್ಭುತವಾದ ಪ್ರತ್ಯುತ್ತರ ನೀಡಿದ ನಮ್ಮ ಸೈನಿಕರ ಬಲ ಕ್ಷೀಣಿಸಿತು.. ಚೀನೀ ಸೈನಿಕರು ತಮ್ಮ ರೇಡಿಯೋದಲ್ಲಿ ” ಇವರು ಸಾವಿರಾರು ಸೈನಿಕರು ಇರುವಂತೆ ತೋರುತ್ತದೆ” ಎಂದು ಮಾತಾಡಿದ್ದು ಇಂದಿಗೂ ನಮ್ಮ ಸೈನ್ಯದ ಬಳಿ ಇದೆ. ಅದ್ಯಾವ ಪರಿ ಕಾದಾಡಿದರೆಂದರೆ ಕೇವಲ 124 ನಮ್ಮ ಸೈನಿಕರು 2500 ಸಾವಿರಕ್ಕೂ ಅಧಿಕ ಚೀನೀಯರನ್ನು ಹೊಡೆದುರುಳಿಸಿದರು ಎಂದರೆ ಊಹಿಸಿಕೊಳ್ಳಿ..

ಬಂದೂಕಿನ ಟ್ರಿಗ್ಗರ್ ಮೇಲೆ ತನ್ನ ಕೈಬೆರಳಿಟ್ಟುಕೊಂಡೇ ಪ್ರಾಣಬಿಟ್ಟ ಸೈತಾನ್ ಸಿಂಗ್!!

ಸ್ವತಃ ಶೈತಾನ್ ಸಿಂಗ್ ಬರೋಬ್ಬರಿ 54 ಚೀನೀಯರ ಗುಂಡುಗಳನ್ನು ತನ್ನ ದೇಹದೊಳಗೆ ನಿರುಮ್ಮಳವಾಗಿ ಹೊಕ್ಕಿಸಿಕೊಂಡ ಮೇಲಷ್ಟೇ ತನ್ನ ಪ್ರಾಣ ತೊರೆದರು.. ತನ್ನ ಕೈಯಲ್ಲಿನ ಬಂದೂಕಿನ ಟ್ರಿಗ್ಗರ್ ಮೇಲೆ ತನ್ನ ಕೈಬೆರಳಿರಿಸಿಕೊಂಡೇ ಪ್ರಾಣಬಿಟ್ಟ ಈ ಶೈತಾನ್ ಸಿಂಗ್ ನಿಜವಾದ ದೇಶಪ್ರೇಮಿ.. ಇದ್ದ ಸೈನಿಕರಲ್ಲಿ 114 ಸೈನಿಕರು ಸ್ಥಳದಲ್ಲಿಯೇ ಪ್ರಾಣಾರ್ಪಣೆ ಮಾಡಿದರೆ 5 ಸೈನಿಕರನ್ನು ಒತ್ತೆಯಾಳುಗಳನ್ನಾಗಿ ಕರೆದೊಯ್ದರು. ಉಳಿದ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಶೈತಾನ್ ಸಿಂಗ್ ನ ಪರಾಕ್ರಮವನ್ನು ನೋಡಿದ ಸರ್ಕಾರ `ಪರಮವೀರಚಕ್ರ’ ನೀಡಿ ಗೌರವಿಸಿತು.. ದುರ್ದೈವವೆಂದರೆ ಎಷ್ಟೋ ದೇಶಗಳ ಸೈನ್ಯ ತರಬೇತಿಯಲ್ಲಿ ಶೈತಾನ್ ಸಿಂಗ್ ನ ಮಾದರಿಯಾಗಿ ಇಟ್ಟುಕೊಂಡು ತರಬೇತಿ ನೀಡುತ್ತಿದ್ದರೂ ನಮ್ಮ ದೇಶದ ಜನರಿಗೆ ಈ ಮಹಾನ್ ದೇಶಪ್ರೇಮಿಯ ಬಗ್ಗೆ ಗೊತ್ತಿಲ್ಲ.!!

ಭಾರತದ ಆರು ಸೈನಿಕರನ್ನು ಚೀನಾ ಸೈನಿಕರು ಯುದ್ಧಖೈದಿಗಳಂತೆ ಬಂಧಿಸಿದರು. ಆದರೆ ಆರು ಮಂದಿ ಅವರಿಂದ ತಪ್ಪಿಸಿಕೊಂಡರು. ಗಾಯಾಳುಗಳನ್ನು ಸೈನಿಕಾಸ್ಪತ್ರೆಗೆ ದಾಖಲಿಸಲಾಯಿತು. ಚೀನಿಯರ ಕೈಯಿಂದ ತಪ್ಪಿಸಿಕೊಂಡಿದ್ದ ಯಾದವ್ ಅವರನ್ನು ನವೆಂಬರ್ 19ರಂದು ಜಮ್ಮುವಿನ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಇವರೆಲ್ಲಾ ದಕ್ಷಿಣ ಹರ್ಯಾಣದ ಗೂರ್ಗನ್ ರೇವರಿ, ನಾರ್ನೌಲ್ ಹಾಗೂ ಮಹೇಂದ್ರಗಡ್‍ನಿಂದ ಬಂದವರು. ಇಂದು ಲಡಾಖ್ ನಮ್ಮಲ್ಲೇ ಉಳಿದಿದೆ ಎಂದರೆ ಅದಕ್ಕೆ ಕಾರಣ ಇವರೇ.. ಸುಮಾರು 1300ದಷ್ಟು ಚೀನಾ ಸೈನಿಕರನ್ನು ಶೈತಾನ್ ಸಿಂಗ್ ನೇತೃತ್ವದ ಭಾರತೀಯ ಸೈನಿಕರು ಕೊಂದರೆಂದರೆ ಈ ಸಾಹಸವನ್ನು ಬಣ್ಣಿಸಲು ಸಾಧ್ಯವೇ ಇಲ್ಲ. ಮಹಾಭಾರತದಲ್ಲಿನ ಅಭಿಮನ್ಯು ಅವತಾರ ಎತ್ತಿದಂತೆ ಹೋರಾಡಿದರು. ನಮ್ಮ ಸೈನ್ಯದ ನಿಜವಾದ ಬಾಹುಬಲಿ ಎಂದರೆ ಅದು ಶೈತಾನ್ ಸಿಂಗ್.!!

ಆ ಸಮಯದಲ್ಲಿ ಪ್ರಧಾನಿಯಾಗಿದ್ದ ನೆಹರೂ ಸೈನಿಕರಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದರೆ ಅಷ್ಟೂ ಸೈನಿಕರನ್ನು ಕಳೆದುಕೊಳ್ಳುವ ಅವಶ್ಯಕತೆ ಇರಲಿಲ್ಲ!! ಆದರೆ ಹಿಂದಿನ ಯುಪಿಎ ಸರಕಾರಕ್ಕೂ ಮತ್ತು ಈಗಿನ ಮೋದಿ ಸರಕಾರಕ್ಕೂ ಒಮ್ಮೆ ಹೋಲಿಸಿ ನೋಡಿ. ಮೋದಿ ಸರಕಾರ ನಮ್ಮ ದೇಶ ಕಾಯುವ ಸೈನಿಕರನ್ನು ದೇವರಂತೆ ಪೂಜಿಸುತ್ತಾರೆ!! ಅವರಿಗೆ ಬೇಕಾದ ಎಲ್ಲಾ ಪರಿಕರಗಳನ್ನು ಕೂಡಾ ಎಷ್ಟೇ ಕಷ್ಟವಾದರೂ ಪೂರೈಸುತ್ತದೆ. ಅದಲ್ಲದೆ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಸೈನಿಕರ ಜೊತೆ ಹೋಗಿ ಅವರಿಗೆ ಮಾನಸಿಕ ಸ್ಥೈರ್ಯವನ್ನು ತುಂಬುತ್ತದೆ!! ಆದರೆ ನೆಹರೂ ಮಾತ್ರ ಹೆಸರಿಗೆ ಮಾತ್ರ ಪ್ರಧಾನಿಯಾಗಿದ್ದರು… ಆದರೆ ಮಾಡಿದ್ದು ದೇಶ ಒಡೆಯುವ ಕೆಲಸ….ಇಂದು ಮೋದಿಜೀ ಸೈನಿಕರಿಗೆ ಏನು ಅಗತ್ಯತೆ ಇದೆಯೋ ಅದನ್ನು ಆಗಿಂದಾಗಲೆ ಪೂರೈಸಲು ಮುಂದಾಗುತ್ತಾರೆ..

Be the first to comment