ಕಾಶ್ಮೀರದಲ್ಲಿ ಶಾಂತಿ ಕದಡಲು ಯತ್ನಿಸಿದರೆ ಹುಷಾರ್! ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಭಾರತೀಯ ಸೇನೆ..

ಭಿಕಾರಿ ಪಾಕಿಸ್ತಾನ ಯಾವ ರೀತಿ ಭಾರತಕ್ಕೆ ಬೆದರಿಕೆ ಹಾಕಿದರೂ ನಮ್ಮ ಭಾರತೀಯ ಸೇನೆ ಅದಕ್ಕೆ ಎಚ್ಚರಿಕೆ ನೀಡುವ ಮೂಲಕ ಪಾಕಿಸ್ತಾನದ ಬಾಯಿ ಮುಚ್ಚಿಸುತ್ತೆ! ಇದೀಗ ಮತ್ತೆ ಆರ್ಟಿಕಲ್ 370 ರದ್ಧಾಗಿರುವ ಪರಿಣಾಮ ಪಾಕಿಸ್ತಾನ ಭಾರತಕ್ಕೆ ಬೆದರಿಕೆ ಹಾಕುತ್ತಿದೆ. ಅದಕ್ಕೆ ಪ್ರತ್ಯುತ್ತರಿಸಿದ ಸೇನೆ ಖಡಕ್ ಎಚ್ಚರಿಕೆಯನ್ನು ರವಾನಿಸಿದೆ. ಜಮ್ಮು ಕಾಶ್ಮೀರದ ಶಾಂತಿಗೆ ಧಕ್ಕೆ ತರುವವರ ವಿರುದ್ಧ ತೀಕ್ಷ್ನ ಕ್ರಮವನ್ನು ಜರಗಿಸುವುದಾಗಿ ಭಾರತೀಯ ಸೇನೆ ಎಚ್ಚರಿಕೆಯನ್ನು ನೀಡಿದೆ. ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ಬೆಳವಣಿಗೆಗೆ ಸಂಬಂಧಿಸಿದಂತೆ ಈ ಎಚ್ಚರಿಕೆಯನ್ನು ಸೇನೆ ನೀಡಿದೆ. ಕಾಶ್ಮೀರದ ಬಗ್ಗೆ ಭಾರತ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಪಾಕಿಸ್ತಾನದ ರಾಜಕೀಯ ನಾಯಕತ್ವ ಮತ್ತು ಅಲ್ಲಿನ ಮಿಲಿಟರಿ ಬೆದರಿಕೆಯ ಹೇಳಿಕೆಯನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಈ ಎಚ್ಚರಿಕೆಯನ್ನು ಸೇನೆ ನೀಡಿದೆ.

ಎಚ್ಚರಿಕೆ ನೀಡಿದ ಭಾರತೀಯ ಸೇನೆ..

ಚಿನಾರ್ ಕಾಪ್ರ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲಾನ್ ಸಂದರ್ಶನವನ್ನು ನೀಡಿದ ವೇಳೆ ಪಾಕಿಸ್ತಾನ ಮತ್ತು ಅದರ ಸೈನ್ಯವು ಕಣಿವೆಯಲ್ಲಿ ಶಾಂತಿಯನ್ನು ಭಂಗಗೊಳಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಮತ್ತು ಅವರು ಮುಂದೆಯೂ ಅದನ್ನು ನಿರಂತಗೊಳಿಸುತ್ತಾರೆ ಎಂದು ತಿಳಿಸಿದೆ. ಇತ್ತೀಚೆಗೆ ಅವರು ನೀಡುತ್ತಿರುವ ಹೇಳಿಕೆಗಳು ಕಣಿವೆಯಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ. ಅವರು ಬಹಿರಂಗವಾಗಿ ಬೆದರಿಕೆ ಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ನಾವು ಅವೆಲ್ಲವನ್ನೂ ನೋಡಿಕೊಳ್ಳುತ್ತೇವೆ. ಯಾರಾದರೂ ಬಂದು ಕಣಿವೆಯಲ್ಲಿನ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸಿದರೆ ನಾವು ಅವರನ್ನು ನಿರ್ಮೂಲನೆ ಮಾಡುತ್ತೇವೆ ಎಂದಿದ್ದಾರೆ. ಈಗಾಗಲೇ ಪುಲ್ವಾಮ ದಾಳಿಗೆ ನಮ್ಮ ಸೇನೆ ಯಾವ ರೀತಿ ಪ್ರತೀಕಾರ ತೀರಿಸಿದೆ ಎಂದು ಇಡೀ ಪ್ರಪಂಚಕ್ಕೆ ಗೊತ್ತು..ಮತ್ತೇ ಏನಾದರೂ ಈ ಬಾರಿ ಪಾಕ್ ಬಾಲ ಬಿಚ್ಚಿದರೆ ಅವರ ಕತೆ ಅದೋಗತಿ ಆಗೋದಂತೂ ಖಂಡಿತ..

Be the first to comment