66 ಸಾವಿರ ಉಚಿತ ಸಸಿಗಳನ್ನು ವಿತರಣೆ ಮಾಡಿದ ಯೋಗಿ ಆದಿತ್ಯನಾಥ್! ವಿಶ್ವ ದಾಖಲೆಯ ಪುಟ ಸೇರಿದ ಯುಪಿ ..

ಯೋಗಿ ಆದಿತ್ಯನಾಥ್ ರವರು ಅಧಿಕಾರ ಸ್ವೀಕರಿಸಿದ ಮೇಲೆ ಉತ್ತರ ಪ್ರದೇಶದ ಚಿತ್ರಣವೇ ಬದಲಾಗಿದೆ. ಬದುಕಲು ಯೋಗ್ಯವೇ ಅಲ್ಲ ಎಂಬಂತಿದ್ದ ಉತ್ತರ ಪ್ರದೇಶವನ್ನು ಯೋಗಿ ಆದಿತ್ಯನಾಥರು ಸಂಪೂರ್ಣ ಬದಲಾಯಿಸಿ ಬಿಟ್ಟರು. ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಲೇ ಕೆಲವರು ಅರಚಾಡಲು ಶುರು ಮಾಡಿದ್ದರು. ಅದೆಷ್ಟೋ ಜನ ಅವರು ಒಬ್ಬ ಸನ್ಯಾಸಿ ಎಂದೆಲ್ಲಾ ಬಾಯಿಗೆ ಬಂದ ಹಾಗೆ ಮಾತನಾಡಿದರು. ಹಿಂದೂ ಸಂತನಿಗೆ ರಾಜಕೀಯ ಪಟ್ಟ ನೀಡಿದರೆ ರಾಜ್ಯದ ಮುಸ್ಲಿಮರು ರಾಜ್ಯ ಬಿಟ್ಟು ಹೋಗಬೇಕಾಗುತ್ತದೆ ಎಂದು ಸುಳ್ಳು ಪ್ರಚಾರ ಮಾಡಿದ್ದರು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಇಡೀ ದೇಶವೇ ಇಲ್ಲಿನ ಬದಲಾವಣೆಗೆ ಅಚ್ಚರಿಪಡುತ್ತಿದೆ. ಈಗಾಗಲೇ ಕುಂಭಮೇಳ ವಿಶ್ವ ದಾಖಲೆಯ ಪುಟಸೇರಿದ್ದು ಅದರ ಬೆನ್ನಲ್ಲೇ ಇದೀಗ ಮತ್ತೆ ಯುಪಿ ಸರ್ಕಾರ ವಿಶ್ವ ದಾಖಲೆಯ ಪುಟ ಸೇರಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಮತ್ತೆ ತನ್ನ ಹೆಸರು ದಾಖಲಿಸಿದೆ. ಕ್ವಿಟ್ ಇಂಡಿಯಾ ಚಳವಳಿಯ 77 ನೇ ವಾರ್ಷಿಕೋತ್ಸವವಾದ ನಿನ್ನೆ 66,000 ಸಸಿಗಳನ್ನು ಏಕಕಾಲದಲ್ಲಿ ವಿತರಿಸಿದ ಉತ್ತರ ಪ್ರದೇಶವು ಗಿನ್ನಿಸ್ ವಿಶ್ವ ದಾಖಲೆಗೆ ಪ್ರವೇಶಿಸಿದೆ. ವೃಕ್ಷ ಮಹಾಕುಂಭವನ್ನು ಸಂಗಮ್ ನಗರದ ಪ್ರಯಾಗರಾಜ್‍ನ ಪೆರೇಡ್ ಮೈದಾನದಲ್ಲಿ ನಿನ್ನೆ ಆಯೋಜಿಸಲಾಗಿದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವೃಕ್ಷ ಮಹಾಕುಂಭದಲ್ಲಿ ಎಂಟು ಗಂಟೆಗಳಲ್ಲಿ 66 ಸಾವಿರ ಉಚಿತವಾಗಿ ಸಸಿ ವಿತರಿಸಿ ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದರು. ಅತಿ ಹೆಚ್ಚು ಸಸ್ಯಗಳ ವಿತರಣೆಯ ವಿಶ್ವ ದಾಖಲೆ ಇದಾಗಿದೆ. ಈ ವಿಶೇಷ ಸಂದರ್ಭದಲ್ಲಿ, ಸ್ಥಳದಲ್ಲಿ ಹಾಜರಿದ್ದ ಗಿನ್ನೆಸ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್ ಪ್ರತಿನಿಧಿ ಸ್ವಪ್ನಿಲ್ ದಾಮ್ರೆಕರ್ ಇದನ್ನು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪ್ರಮಾಣಪತ್ರ ನೀಡಿದರು.

 

ಈ ಸಂದರ್ಭದಲ್ಲಿ, 100 ವರ್ಷಕ್ಕಿಂತ ಮೇಲ್ಪಟ್ಟ ಮರಗಳನ್ನು ಗುರುತಿಸಲಾಗುತ್ತಿದೆ. ಅಂತಹ ಮರಗಳನ್ನು ಪಾರಂಪರಿಕ ಮರಗಳಾಗಿ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ವೃಕ್ಷ ಕುಂಭ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ರಾಜ್ಯದಲ್ಲಿ ನೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮರಗಳನ್ನು ಪರಂಪರೆಯಾಗಿ ಸಂರಕ್ಷಿಸಬೇಕು ಎಂದು ಹೇಳಿದರು. ಇದಕ್ಕಾಗಿ ಅರಣ್ಯ ಇಲಾಖೆ ಸ್ಮಾರಕವನ್ನು ಪ್ರಕಟಿಸುತ್ತದೆ. ಅಂತಹ ಮರಗಳನ್ನು ಪಾರಂಪರಿಕ ಮರಗಳೆಂದು ಘೋಷಿಸಲಾಗುವುದು ಎಂದು ಅವರು ಹೇಳಿದರು. ದೇಶೀಯ ಮಾವಿನ ಮರಗಳನ್ನು ಇನ್ನು ಮುಂದೆ ಕತ್ತರಿಸಲಾಗುವುದಿಲ್ಲ. ‘ಕಾಡು ಇದ್ದರೆ ನೀರು’ ಇರುತ್ತದೆ. ಪ್ರಯಾಗರಾಜ್‍ನ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳಲು ಕಾಡುಗಳನ್ನೂ ಸಿದ್ಧಪಡಿಸಬೇಕು. ಅದಕ್ಕಾಗಿಯೇ ವೃಕ್ಷ ಕುಂಭಕ್ಕೆ ಪ್ರಯಾಗರಾಜ್ ಅನ್ನು ಆಯ್ಕೆ ಮಾಡಲಾಯಿತು. ಕುಂಭಕ್ಕೆ ಬಂದ 24 ಕೋಟಿ ಭಕ್ತರ ಹೆಸರಲ್ಲಿ ಸಸಿ ನೆಡಲಾಗುತ್ತಿದೆ. 75 ಜಿಲ್ಲೆಗಳಲ್ಲಿ 24 ಕೋಟಿ ಸಸಿ ನೆಡುವ ಗುರಿ ತಲುಪಲಾಗುವುದು ಎಂದು ಸಿಎಂ ಯೋಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ವೃಕ್ಷಾರೋಪಣ್ ಮಹಾಕುಂಭದ ಲೋಗೋವನ್ನು ಅನಾವರಣಗೊಳಿಸಿದರು ಮತ್ತು ಐದು ಗಾಮೀಣ ಮಹಿಳೆಯರಿಗೆ ಸಹಜನ್(ನುಗ್ಗೆಕಾಯಿ)ಗಳ ಸಸಿಗಳನ್ನು ನೀಡಿದರು.

ಬೆಳಿಗ್ಗೆ 9 ರಿಂದ 10ರವರೆಗೆ ಏಕಕಾಲದಲ್ಲಿ ಐದು ಕೋಟಿ ಗಿಡಗಳನ್ನು ನೆಟ್ಟಿದ್ದು ಒಂದು ದಾಖಲೆಯಾದರೆ , ಗವರ್ನರ್ ಆನಂದಿ ಬೆನ್ ಪಟೇಲ್ ಅವರ ಸಮ್ಮುಖದಲ್ಲಿ ಕಾಸ್‍ಗಂಜ್‍ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿದ್ದು ಇನ್ನೊಂದು ದಾಖಲೆ, ನಿರ್ದಿಷ್ಟ ಸಮಯದ ಅವಧಿಯಲ್ಲಿ 66,000 ಸಸಿಗಳನ್ನು ಒಂದೇ ಸ್ಥಳದಲ್ಲಿ ವಿತರಿಸಿದ್ದು ಮತ್ತೊಂದು ದಾಖಲೆಯಾಗಿದೆ. ಅಲ್ಲದೇ ಒಟ್ಟಾರೆಯಾಗಿ 22 ಕೋಟಿ ಸಸಿಗಳನ್ನು ನೆಟ್ಟಿದ್ದು ಮತ್ತೊಂದು ದಾಖಲೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Be the first to comment