
ಅತ್ತ ನರೇಂದ್ರ ಮೋದಿ ಸರಕಾರ ಕಲಂ 370 35ಎ ರದ್ದಾಗುತ್ತಿದ್ದಂತೆಯೇ ಪಾಕಿಸ್ತಾನಕ್ಕೆ ನಡುಕಶುರುವಾಗಿದ್ದಂತೂ ಅಕ್ಷರಸಃ ಸತ್ಯ! ಅದೇ ಕಾರಣದಿಂದ ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನೂ ಪಾಕ್ ಕೈ ಬಿಟ್ಟು ತಾನು ತೋಡಿದ ಗುಂಡಿಗೆ ತಾನೇ ಬಿದ್ದಂತಾಗಿದೆ. ಒಂದು ಕಡೆಯಲ್ಲಿ ಭಾರತೊಂದಿನ ರಾಜತಾಂತ್ರಿ ಸಂಬಂಧ ಕೈಬಿಟ್ಟರೆ ಮತ್ತೊಂದೆಡೆಯಲ್ಲಿ ಉಗ್ರರನ್ನು ಛೂ ಬಿಟ್ಟು ಮತ್ತೆ ಭಾರತದ ವಿರುದ್ಧ ಆಕ್ರಮಣ ಮಾಡಲು ಪ್ಲಾನ್ ಮಾಡುತ್ತಿದೆ. ಆದರೆ ಅದಕ್ಕೆ ಬೆದರದೆ ನಮ್ಮ ಭಾರತೀಯ ಸೇನೆ ಖಡಕ್ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ ರವಾನಿಸುವ ಮೂಲಕ ಏಳು ರಾಜ್ಯಗಳಲ್ಲಿನ ಹೈ ಅಲರ್ಟ್ ಘೋಷಣೆ ಮಾಡಿತ್ತು. ಅಲ್ಲದೆ ಭಾರತದೊಂದಿಗಿನ ವ್ಯಾಪಾರ ವಹಿವಾಟು ಒಪ್ಪಂದ ರದ್ದುಗೊಳಿಸುವ ತೀರ್ಮಾನ ಕೈಗೊಂಡ ಎರಡೇ ದಿನದಲ್ಲಿ ಪಾಕ್ ಗೆ ಆರ್ಥಿಕ ಆಘಾತ ಕೂಡಾ ಎದುರಾಗಿದೆ. ಷೇರು ಮಾರುಕಟ್ಟೆ 800 ಅಂಕಗಳಷ್ಟು ಕುಸಿತ ಕಂಡಿದೆ. ಪಾಕ್ ರೂಪಾಯಿ ಮೌಲ್ಯವೂ ತೀವ್ರ ಕುಸಿತ ದಾಖಲಿಸಿದ್ದು ಇದೀಗ ಪಾಕಿಸ್ತಾನ ತೀವ್ರ ಸಂಕಷ್ಟದಲ್ಲಿದೆ.
ಪಾಕ್ ಈಗ ಏಕಾಂಗಿ..
ಇಷ್ಟಾದರೂ ಬುದ್ಧಿ ಬರದ ಪಾಕಿಗಳು ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಭಾರತದ ಈ ನಡೆಗೆ ವಿಶ್ವಸಮುದಾಯದ ಮೊರೆಹೋಗಿದೆ. ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಪಾಕ್ ಕೋರಿಕೆಯನ್ನು ವಿಶ್ವಸಂಸ್ಥೆ ಹಾಗೂ ಅಮೆರಿಕ ಮತ್ತೊಮ್ಮೆ ಸಾರಾಸಗಟಾಗಿ ತಳ್ಳಿಹಾಕಿದರೆ, ಪಾಕ್ನ ಪರಮಾಪ್ತ ಚೀನಾ ಕೂಡ ಕೈಕೊಟ್ಟಿದೆ. ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿ ಚೀನಾ ವಿವಾದದಿಂದ ಅಂತರ ಕಾಯ್ದುಕೊಂಡಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕಣಿವೆ ರಾಜ್ಯ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಪಾಕಿಸ್ತಾನಕ್ಕೆ ತಲೆಬಿಸಿಯಾಗಿದೆ. ಇತ್ತ ಕಡೆಯಲ್ಲಿ ಮಧ್ಯಸ್ಥಿಕೆ ಕೋರಿ ಪಾಕಿಸ್ತಾನ ಬರೆದಿದ್ದ ಪತ್ರಕ್ಕೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗುಟೆರೆಸ್ ಪ್ರತಿಕ್ರಿಯಿಸಿ, `ಶಿಮ್ಲಾ ಒಪ್ಪಂದದ ಪ್ರಕಾರ ಕಾಶ್ಮೀರ ವಿಚಾರದಲ್ಲಿ ತೃತೀಯ ವ್ಯಕ್ತಿಯ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದ್ದು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ.
ಕೈ ಕೊಟ್ಟ ಚೀನಾ..
ಕಾಶ್ಮೀರ ವಿಚಾರ ಮುಂದಿಟ್ಟುಕೊಂಡು ಚೀನಾಗೆ ತೆರಳಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿಗೂ ಆಘಾತ ಎದುರಾಗಿದೆ. ಕಾಶ್ಮೀರ ವಿಚಾರದಲ್ಲಿ ನೆರವಾಗುವಂತೆ ಪಾಕ್ ಮುಂದಿಟ್ಟ ಕೋರಿಕೆಯನ್ನು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಸ್ಪಷ್ಟವಾಗಿ ತಳ್ಳಿಹಾಕಿದ್ದು, `ಈ ವಿಷಯದಲ್ಲಿ ಚೀನಾ ಹಸ್ತಕ್ಷೇಪ ಮಾಡುವುದಿಲ್ಲ. ದ್ವಿಪಕ್ಷೀಯ ಮಾತುಕತೆ ಮೂಲಕವಷ್ಟೇ ಸಮಸ್ಯೆ ಬಗೆಹರಿಸಿಕೊಳ್ಳಿ’ ಎಂದು ಖಡಕ್ ಆಗಿಯೇ ಪಾಕಿಸ್ತಾನಕ್ಕೆ ಚೀನಾ ಉತ್ತರಿಸಿದೆ. ಹೀಗಾಗಿ ಭಾರತದ ವಿರೋಧ ನಿಂತರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಎಂದು ಈಗಾಗಲೇ ತಿಳಿದಿದ್ದರೂ ಮತ್ತೆ ಮತ್ತೆ ತನ್ನ ಅಹಂಕಾರವನ್ನು ತೋರಿಸಿದರೆ ಕೊನೆಗೆ ಸರ್ವನಾಶವಾಗೋದು ಖಂಡಿತ…
Be the first to comment