ಭೀಕರ ಪ್ರವಾಹದಲ್ಲಿ ದೇವರಂತೆ ಭಾರತೀಯ ಸೇನೆ ಜನರ ರಕ್ಷಣೆ ಮಾಡುತ್ತಿದೆ!

ಹೌದು.. ಮಹಾಮಳೆಗೆ ಮುಕ್ಕಾಲು ಭಾಗ ಕರ್ನಾಟಕ ತತ್ತರಿಸಿ ಹೋಗಿದೆ. ಅನೇಕ ನದಿಗಳು ಉಕ್ಕಿಹರಿಯುತ್ತಿರುವ ಪರಿಣಾಮ 237 ಗ್ರಾಮಗಳು 32 ತಾಲೂಕುಗಳು ಅಪಾಯಕ್ಕೆ ಸಿಲುಕಿದ್ದು ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಈಗಾಗಲೇ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರು ಪಡುತ್ತಿರುವ ಕಷ್ಟ ನಿಜಕ್ಕೂ ಹೇಳತೀರದು.. ಮನೆ ಮಠಗಳನ್ನು ಕಳೆದುಕೊಂಡು ಸಂತ್ರಸ್ಥರಾದವರಿಗೆ ಗಂಜಿ ಕೇಂದ್ರಗಳಲ್ಲಿ ಆಶ್ರಯ ನೀಡುತ್ತಿದೆ. ಅಗತ್ಯ ವಸ್ತುಗಳು ಇದೀಗ ಭರದಿಂದ ಸಾಗುತ್ತಿದೆ . ಸರ್ಕಾರ ಕೂಡಾ ಈ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿದೆ. ಆದರೆ ಇಷ್ಟೆಲ್ಲಾ ಭೀಕರ ಪ್ರವಾಹದಲ್ಲಿ ಸಿಲುಕಿದವರಿಗೆ ದೇವರಂತೆ ಕಾಣೋದು ನಮ್ಮ ನಿಜವಾದ ಹೀರೋಗಳು ನಮ್ಮ ಸೈನಿಕರು..

ದೇವರಂತೆ ಜನರ ರಕ್ಷಣೆ ಮಾಡುತ್ತಿದ್ದಾರೆ ಈ ಯೋಧರು!

ಹೌದು.. ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಲಕ್ಷಾಂತರ ಜನರು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, ಸಿಆರ್‍ಪಿಎಫ್ ಯೋಧರು, ಎನ್‍ಡಿಆರ್‍ಎಫ್ ಸಿಬ್ಬಂದಿ ಸೇರಿ ಹಲವರು ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೆಲ್ಲರೂ ರಭಸದಿಂದ ಹರಿಯುವ ನೀರನ್ನೂ ಲೆಕ್ಕಿಸದೆ ಜನರನ್ನು ಬೋಟ್ ಗಳ ಮೂಲಕ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸುತ್ತಿದ್ದಾರೆ. ಈ ಸೈನಿಕರ ಋಣವನ್ನು ಯಾವ ರೀತಿಯೂ ತೀರಿಸಲೂ ನಮಗೆ ಸಾಧ್ಯವಿಲ್ಲ.. ಕಣ್ಣಿಗೆ ಕಣೋ ದೇವರು ಇವರೇ.. ಇವರನ್ನು ಯಾವ ಪದಗಳಿಂದಲೂ ವರ್ಣಿಸಲೂ ಸಾಧ್ಯವಿಲ್ಲ. ಒಂದು ಕಡೆಯಲ್ಲಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ದೇಶರಕ್ಷಣೆಯಲ್ಲಿ ತೊಡಗಿದ್ರೆ ಮತ್ತೊಂದೆಡೆಯಲ್ಲಿ ದೇಶದ ಜನರು ಸಂಕಷ್ಟದಲ್ಲಿದ್ದಾರೆಂದರೆ ಅವರ ರಕ್ಷಣೆಗೂ ತಮ್ಮ ಜೀವನ್ನೂ ಪಣಕ್ಕಿಟ್ಟು ಜನರ ರಕ್ಷಣೆ ತೊಡಗಿದ್ದಾರೆಂದರೆ ನಿಜಕ್ಕೂ ಅವರ ಈ ಕಾರ್ಯಕ್ಕೆ ಹಾಟ್ಸ್ ಆಫ್!

ಪ್ರಾಣ ರಕ್ಷಿಸಿದ ಯೋಧರಿಗೆ ಧನ್ಯವಾದ ತಿಳಿಸಿದ ಈ ಮಹಿಳೆ…

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವಾಗ ದೋಣಿಯಲ್ಲಿ ಕುಳಿತಿರುವ ಮಹಿಳೆಯೊಬ್ಬರು ತಮ್ಮನ್ನು ರಕ್ಷಿಸಿದ ಯೋಧರ ಕಾಲಿಗೆ ನಮಸ್ಕರಿಸುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಮ್ಮ ಯೋಧರ ಸಾರ್ಥಕ ಕಾರ್ಯವನ್ನು ಹೊಗಳುತ್ತಿದ್ದಾರೆ. ಭೀಕರ ಪ್ರಳಯದಲ್ಲಿ ಕಂಗೆಟ್ಟ ಜನರಿಗೆ ನಿಜಕ್ಕೂ ಈ ಯೋಧರೇ ದೇವರು…ಅವರಿಗೆ ಇಡೀ ದೇಶದ ಜನತೆ ಯಾವತ್ತೂ ಚಿರಋಣಿ…

Be the first to comment