ಬಾಲಕಿಯ ಪರಿಸರ ಪ್ರೇಮಕ್ಕೆ ಫುಲ್ ಫಿದಾ ಆದ ಮಣಿಪುರ ಸಿಎಂ! 9 ನೇ ವಯಸ್ಸಿಗೆ ಈಕೆ ಹಸಿರು ರಾಯಬಾರಿ..

ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಎಲಾಂಗ್‍ಬಾಮ್ ವ್ಯಾಲೆಂಟಿನಾ ದೇವಿ ತಾನು ಒಂದನೇ ತರಗತಿಯಲ್ಲಿದ್ದಾಗ ನದಿಯ ಪಕ್ಕದಲ್ಲಿ ಎರಡು ಗುಲ್ ಮೊಹರ್ ಮರದ ಸಸಿಯನ್ನು ನೆಟ್ಟಿದ್ದಳು. ಸಸಿಗಳೆರಡು ಬೆಳೆದು ದೊಡ್ಡದಾದ ಮರವಾಗಿದ್ದತ್ತು. ಆದರೆ, ನದಿಯ ಪಕ್ಕದಲ್ಲಿ ರಸ್ತೆ ವಿಸ್ತರಣೆ ಯೋಜೆನಯಡಿಯಲ್ಲಿ ಕಳೆದ ಶನಿವಾರ ಎರಡು ಮರಗಳನ್ನು ಕಡಿದು ಹಾಕಲಾಗಿತ್ತು. ತಾನು ಬೆಳೆಸಿದ್ದ ಮರಗಳು ತುಂಡಾಗಿ ಬಿದ್ದಿದ್ದನ್ನು ನೋಡಿ ಬಾಲಕಿ ಬಿಕ್ಕಿ ಬಿಕ್ಕಿ ಅತ್ತಿದ್ದು ಆ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಗ್ರೀನ್ ಮಣಿಪುರ ಮಿಶನ್‍ಗೆ ಈ ಬಾಲಕಿ ರಾಯಬಾರಿ..

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ ಬಾಲಕಿಯ ಪರಿಸರ ಪ್ರೇಮ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎಲ್ಲೆಡೆ ಬಾಲಕಿ ವಿಚಾರ ಚರ್ಚೆಯಾಗುತ್ತಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮಣಿಪುರ ಸಿಎಂ ಎನ್ ಬಿರೆನ್ ಸಿಂಗ್ ತಕ್ಷಣ ಸ್ಪಂದಿಸಿದ್ದಾರೆ. ಔಪಚಾರಿಕ ಮರಗಳ ತೋಟ, ವಿಐಪಿ ನೆಡುತೋಪು, ವಿಶ್ವ ಪರಿಸರ ದಿನ, ವನ ಮಹೋತ್ಸವ ಮತ್ತು ವಿಭಾಗೀಯ ಪ್ರಾಯೋಜಿತ ತೋಟಗಳು ಸೇರಿದಂತೆ ವಿವಿಧ ಸರ್ಕಾರಿ ಪ್ರಾಯೋಜಕತ್ವದ ನೆಡುತೋಪು ಕಾರ್ಯಕ್ರಮಗಳಲ್ಲಿ ಬಾಲಕಿ ಭಾಗಿಯಾಗುವ ಅವಕಾಶ ನೀಡಿದ್ದು, ಆಕೆಯನ್ನು ಮಣಿಪುರ ಸಿಎಂ ಹಸಿರು ಮಿಷನ್ ಯೋಜನೆಗೆ ರಾಯಭಾರಿಯನ್ನಾಗಿ ನೇಮಕ ಮಾಡಿದ್ದಾರೆ.

ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಆಕೆ ಎರಡು ಗುಲ್ಮೋಹರ್ ಸಸಿಗಳನ್ನು ನೆಟ್ಟಿದ್ದಳು. ಆ ಮರಗಳು ದೊಡ್ಡದಾಗಿದ್ದವು. ಶನಿವಾರ ಆಕೆ ಶಾಲೆ ಮುಗಿಸಿ ಮನೆಗೆ ವಾಪಸ್ ಬಂದಾಗ ಆ ಮರಗಳು ನೆಲಕ್ಕುರುಳಿ ಬಿದಿದ್ದನ್ನು ಕಂಡು ತೀವ್ರವಾಗಿ ರೋದಿಸಿದ್ದಳು. ಮುಖ್ಯಮಂತ್ರಿ ವಿಡಿಯೋ ವೀಕ್ಷಿಸಿದ ನಂತರ ಆಕೆಯ ಮನೆಗೆ ಹೋಗಿ ಕೆಲ ಸಸಿಗಳನ್ನು ನೀಡಿ ಸಮಾಧಾನಪಡಿಸುವಂತೆ ಪೆÇಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಪೆÇಲೀಸ್ ಸಿಬ್ಬಂದಿಗಳೊಂದಿಗೆ ಎಸ್ ಪಿ ಆ ಬಾಲಕಿಯ ಮನೆಗೆ ಹೋಗಿ ಸಮಾಧಾನಪಡಿಸಿದ್ದಾರೆ.

Angang acna kaplibse ateigi natte Mahak na class 1 karakpdagi thajkhib U( tree) gunmahor pambi 2 khak ngasi Mahak na Scholl halkpkda lambi sembda phukdokpirmme adugi angang asina thamoi sokna thengthari. Mahakna hairi U pambi 20 amga thakhini Haina… Hiyanglam Makha Leikai

Gepostet von Monen Elangbam am Freitag, 2. August 2019

ಜುಲೈ 18 ರಂದು ಮುಖ್ಯಮಂತ್ರಿ ಹಸಿರು ಮಣಿಪುರ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಬಾಲಕಿಯನ್ನು ಹಸಿರು ರಾಯಬಾರಿಯನ್ನಾಗಿ ಮಾಡಬೇಕೆಂಬುದು ಕೂಡಲೇ ನನ್ನ ಗಮನಕ್ಕೆ ಬಂತು ಎಂಬುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಮಣಿಪುರಕ್ಕೆ ವಾಪಸ್ ಆದ ನಂತರ ಆ ಬಾಲಕಿಯನ್ನು ಭೇಟಿ ಮಾಡುವುದಾಗಿ ಅವರು ಹೇಳಿದ್ದಾರೆ. ಇಂತಹ ಈ ಹಸಿರು ಪ್ರೇಮ ಎಲ್ಲರಿಗೂ ಮಾದರಿ. ಇದೇ ಕೆಲವರು ಮರಗಳನ್ನು ಕಡಿಯಲು ತೋರುವ ಉತ್ಸಾಹ ಗಿಡ ನೆಡುವುದರಲ್ಲಿಯೂ ಇದ್ದರೆ ದೇಶದಲ್ಲಿ ಹಸಿರು ಹೆಚ್ಚಾಗಿ ಖಂಡಿತ ದೇಶ ಅಭಿವೃದ್ಧಿಯಾಗುತ್ತೆ..

Be the first to comment