ಮೋದಿಜೀ, ಅಮಿತ್ ಷಾ ರನ್ನು ಕೃಷ್ಣ ಅರ್ಜುನರಿಗೆ ಹೋಲಿಸಿದ ನಟ ರಜನೀಕಾಂತ್! ಕಲಂ 370 ರದ್ದತಿಗೆ ಶ್ಲಾಘನೆ..

ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಳ್ಳುವ ಒಂದೊಂದು ನಿರ್ಧಾರವೂ ನಿಜಕ್ಕೂ ಇಡೀ ದೇಶ ಮಾತ್ರವಲ್ಲದೆ ಇಡೀ ವಿಶ್ವವೇ ಭೇಷ್ ಅನ್ನುತ್ತೇ. ಅದರಲ್ಲೂ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರ ಕಲಂ 370 ರದ್ದು ಮಾಡಿರುವುದ್ದಂತೂ ನಿಜಕ್ಕೂ ಗ್ರೇಟ್! ಇವರ ಈ ನಡೆಗೆ ಕೆಲ ದೇಶ ವಿರೋಧಿಗಳು ಖಂಡಿಸಿದರೆ ದೇಶ ಪ್ರೇಮಿಗಳು ಮಾತ್ರ ಮೋದಿಜೀಯ ನಿರ್ಧಾರಕ್ಕೆ ಖುಷಿ ಪಟ್ಟಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನ 370 ನೇ ವಿಧಿಯನ್ನು ತೆಗೆದು ಹಾಕಿದ ಮೋದಿ ಸರ್ಕಾರದ ಸರ್ಕಾರದ ನಿರ್ಧಾರವನ್ನು ತಮಿಳುನಾಡಿನ ಮೆಗಾಸ್ಟಾರ್ ರಜನೀಕಾಂತ್ ಅವರು ಶ್ಲಾಘಿಸಿದ್ದಾರೆ. ಈ ಕಠಿಣ ನಿರ್ಧಾರವನ್ನು ತೆಗದುಕೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಕೃಷ್ಣ ಅರ್ಜುನ ಎಂದು ಅವರು ಬಣ್ಣಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಧೀರ್ಘಕಾಲದ ಸಹವರ್ತಿಯಾಗಿರುವ ಶಾ ಅವರನ್ನು ಮಿಷನ್ ಕಾಶ್ಮೀರದ ಯಶಸ್ವಿ ಸಾಧನೆಗಾಗಿ ಅಭಿನಂದಿಸಿರುವ ನಟ ರಾಜಕಾರಣಿ ರಜನೀಕಾಂತ್ ಅವರು ಕಾಶ್ಮೀರ ಬಗೆಗೆ ತೆಗೆದುಕೊಳ್ಳಲಾಗದ ನಿರ್ಧಾರವನ್ನು ಅದ್ಭುತ ನಡೆ ಎಂದು ವಿಶ್ಲೇಷಿಸಿದ್ದಾರೆ. ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರ ಕಛೇರಿಯಲ್ಲಿ listening, learning and leading ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ರಜನೀಕಾಂತ್ ಮಾತನಾಡಿದ್ದಾರೆ. ಹಿಂದೂ ಮಹಾಕಾವ್ಯ ಮಹಾಭಾರತದ ಪ್ರಕಾರ ಕೃಷ್ಣನನ್ನು ವಿಷ್ಣುವಿನ ಅವತಾರ ಮತ್ತು ಅರ್ಜುನನ್ನು ಆತನ ಶಿಷ್ಯ ಎಂದು ಪರಿಗಣಿಸಲಾಗಿದೆ. ಕೃಷ್ಣ ಯುದ್ಧಕಾಲದಲ್ಲಿ ಅರ್ಜುನನಿಗೆ ಬೋಧಿಸುವ ಬೋಧನೆಗಳೇ ಭಗವದ್ಗೀತೆಯಾಗಿದೆ. ಮೋದಿ ಮತ್ತು ಅಮಿತ್ ಶಾ ಧೀರ್ಘಕಾಲದಿಂದಲೂ ಸಹವರ್ತಿಗಳಾಗಿ ಕಾರ್ಯ ಮಾಡುತ್ತಿದ್ದು ಇವರಿಬ್ಬರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ರಜನೀಕಾಂತ್ ಹೇಳಿದ್ದಾರೆ. ಹೀಗೆ ಹತ್ತು ಹಲವಾರು ಪ್ರಮುಖ ವ್ಯಕ್ತಿಗಳು ಮೋದಿಜೀ ನಡೆಗೆ ಭೇಷ್ ಎಂದಿದ್ದಾರೆ.

 

Be the first to comment