ಭೀಕರ ಪ್ರವಾಹದಲ್ಲಿ ಇಬ್ಬರು ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ರಕ್ಷಿಸಿದ ಪೊಲೀಸ್‍ ಗೆ ಶ್ಲಾಘನೆ!

ಭೀಕರ ಪ್ರವಾಹದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜನರ ಪ್ರಾಣ ರಕ್ಷಣೆ ಮಾಡಿದ್ದು ನಮ್ಮ ಯೋಧರು ಹಾಗೂ ಪೊಲೀಸರು.. ಪ್ರವಾಹದ ನಡುವೆ ಮಕ್ಕಳಿಬ್ಬರನ್ನು ಹೆಗಲ ಮೇಲೆ ಕೂರಿಸಿಕೊಂಡು ಸುರಕ್ಷಿತವಾದ ಪ್ರದೇಶಕ್ಕೆ ಸ್ಥಳಾಂತರ ಮಾಡಿದ ಗುಜರಾತಿನ ಪೊಲೀಸ್ ಕಾನ್ಸ್‍ಸ್ಟೇಬಲ್‍ಗೆ ಅವರಿಗೆ ಎಲ್ಲಾ ಕಡೆಯಿಂದಲೂ ಶ್ಲಾಘನೆಗಳ ಮಹಾಪೂರ ಹರಿದು ಬರುತ್ತಿದೆ.

ಒಮ್ಮಿಂದೊಮ್ಮೆ ಸುರಿದ ಭಾರಿ ಮಳೆಯಿಂದಾಗಿ ಮೊರ್ಬಿ ಜಿಲ್ಲೆಯ ಕಲ್ಯಾಣ್‍ಪುರ ಶಾಲೆಯ ಸುತ್ತು ನೀರು ಆವರಿಸಿತ್ತು. ಐದು ಗಂಟೆ ಕಳೆದರೂ ನೀರು ಇಳಿಯಲಿಲ್ಲ. ಶಾಲೆಯ ಆಡಳಿತ ಮಂಡಳಿ ಪೆÇಲೀಸರು, ಜಿಲ್ಲಾಡಳಿತ, ಎನ್‍ಡಿಆರ್‍ಎಫ್ ಸೇರಿದಂತೆ ಎಲ್ಲರಿಗೂ ಕರೆ ಮಾಡಿತ್ತು. ಎನ್‍ಡಿಆರ್‍ಎಫ್ ಇಲ್ಲಿಗೆ ಧಾವಿಸಿತಾದರೂ ಭಾರಿ ಪ್ರವಾಹದ ಕಾರಣಕ್ಕಾಗಿ ಬೋಟ್ ಕಾರ್ಯಾಚರಣೆ ಕಷ್ಟ ಎಂದು ಕೈಚೆಲ್ಲಿತ್ತು. ಆಗ ಸಾಹಸಕ್ಕೆ ಮುಂದಾದ ಗುಜರಾತ್ ಪೆÇಲೀಸರು ಒಬ್ಬೊಬ್ಬ ಮಕ್ಕಳನ್ನೇ ಹೆಗಲಲ್ಲಿ ಕೂರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ನಿರ್ಧರಿಸಿದರು. ಈ ನಡುವೆ, ಕಾನ್‍ಸ್ಟೇಬಲ್ ಪೃಥ್ವೀರಾಜ್ ಸಿಂಗ್ ಜಡೇಜಾ ಅವರು ಇಬ್ಬರು ಮಕ್ಕಳನ್ನು ಹೆಗಲಲ್ಲಿ ಕೂರಿಸಿಕೊಂಡು ಪ್ರವಾಹದ ಮಧ್ಯೆ ನಡೆದೇ ಬಿಟ್ಟು ಸುರಕ್ಷಿತ ಜಾಗಕ್ಕೆ ಸಾಗಿಸಿದ್ದರು.

ಸ್ವತಃ ಅಲ್ಲಿನ ಪೆÇಲೀಸ್ ಮಹಾ ನಿರ್ದೇಶಕ ಶಂಶೇರ್ ಸಿಂಗ್ ಈ ಸಾಹಸದ ವಿಡಿಯೊವನ್ನು ಟ್ವಿಟರ್‍ನಲ್ಲಿ ಹಾಕಿದ್ದಾರೆ. ‘ನಮ್ಮ ಭುಜಗಳಲ್ಲಿ ನೀವು ಸುರಕ್ಷಿತ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡಿರುವ ಈ ವಿಡಿಯೊ ವೈರಲ್ ಆಗಿದ್ದು, ಎಲ್ಲರೂ ಜಡೇಜಾ ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೂ ಇವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಮೆಚ್ಚುಗೆಗೆಳನ್ನು ವ್ಯಕ್ತಪಡಿಸಿದ್ದಾರೆ. ಇವರ ಈ ಸಾಹಸಕ್ಕೊಂದು ಸೆಲ್ಯೂಟ್..

Be the first to comment