ಯುದ್ಧಕ್ಕೆ ತಯಾರಿ ನಡೆಸುತ್ತಿದೆಯಾ ಪಾಕ್?! ಕಣ್ಗಾವಲು ತೀವ್ರಗೊಳಿಸಿದ ಭಾರತ…

ಆರ್ಟಿಕಲ್ 370 ರದ್ದಾಗಿರುವ ತಕ್ಷಣ ಪಾಕಿಸ್ತಾನಕ್ಕೆ ಒಳಗಿಂದೊಳಕ್ಕೆ ಉರಿಯಾಗಲು ಶುರುವಾಗಿತ್ತು. ಅದಾದ ಬೆನ್ನಲ್ಲೇ ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿತು. ಇದರಿಂದಾಗಿ ಪಾಕಿಸ್ತಾನ ಸಾಕಷ್ಟು ನಷ್ಟ ಅನುಭವಿಸಿತು. ವಿಶ್ವದ ದೊಡ್ಡಣ್ಣ ಕೂಡಾ ಪಾಕಿಸ್ತಾನಕ್ಕೆ ವಾರ್ನ್ ಮಾಡಿತ್ತು. ತನ್ನ ಮಿತ್ರ ರಾಷ್ಟ್ರ ಚೀನಾ ಕೂಡಾ ಆರ್ಟಿಕಲ್ 370 ರದ್ಧತಿ ವಿಚಾರವಾಗಿ ನಾವು ಪಾಕಿಸ್ತಾನ ಬೆಂಬಲಿಸಲ್ಲ ಎಂದು ಖಡಾ ಖಂಡಿತವಾಗಿ ಕಡ್ಡಿಮುರಿದಂತೆ ಹೇಳಿ ಕಳುಹಿಸಿದೆ. ಇದೆಲ್ಲಾ ಪಾಕಿಸ್ತಾನಕ್ಕೆ ತೀವ್ರ ಅವಮಾನ ಉಂಟಾಗುವಂತೆ ಮಾಡಿತ್ತು. ಅದಾದ ಬಳಿಕ ಪಾಕಿಸ್ತಾನ ಇಡೀ ವಿಶ್ವ ಭಾರತದ ಬೆಂಬಲಕ್ಕೆ ನಿಂತಿದೆ ಎನ್ನುವ ವಿಚಾರ ತಿಳಿದು ಇದೀಗ ಭಾರತದ ವಿರುದ್ಧ ಬಹುದೊಡ್ಡ ಕುಕೃತ್ಯಕ್ಕೆ ಕೈ ಹಾಕಿದೆ ಎನ್ನಲಾಗಿದೆ.

ಕೇಂದ್ರಾಡಳಿತ ಲಡಾಖ್ ನ ಸಮೀಪದ ಸ್ಕರ್ದು ಏರ್ ಬೇಸ್ ಗೆ ಪಾಕಿಸ್ತಾನ ತನ್ನ ವಾಯುಪಡೆಗೆ ಸೇರಿದ 3ಸಿ 130 ಏರ್ ಕ್ರಾಫ್ಟ್ ಮತ್ತು ಯುದ್ಧೋಪಕರಣಗಳನ್ನು ರವಾನಿಸಿರುವುದಾಗಿ ವರದಿಯಾಗಿದೆ. ಇನ್ನು ಪಾಕ್ ಏನು ಮಾಡುತ್ತಿದೆ ಎಂಬುದನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಗಡಿಭಾಗದಲ್ಲಿ ಪಾಕಿಸ್ತಾನದ ಚಲನವಲನದ ಬಗ್ಗೆ ಭಾರತದ ಗುಪ್ತಚರ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಸುದ್ದಿ ಸಂಸ್ಧೆಯೊಂದು ವರದಿ ಮಾಡಿದೆ. ಪಾಕಿಸ್ತಾನ ದಿಢೀರ್ ಅಂತಾ ಈ ನಿರ್ಧಾರಕ್ಕೆ ಬಂದಿದ್ದು ಸ್ಕರ್ದು ವಾಯುನೆಲೆಗೆ ಜೆಎಫ್-17 ಯುದ್ಧ ವಿಮಾನವನ್ನು ಕಳುಹಿಸುವ ಸಾಧ್ಯತೆ ಇದೆ. ಯುದ್ಧ ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಏರ್ ಬೇಸ್ ನಲ್ಲಿ ಪಾಕ್ ಯುದ್ಧೋಪಕರಣಗಳನ್ನು ರವಾನಿಸುತ್ತಿರುವುದಾಗಿ ಮೂಲಗಳು ಹೇಳಿವೆ.

ಪಾಕಿಸ್ತಾನದ ಸಂಪೂರ್ಣ ಉದ್ದ ಅಗಲಕ್ಕೂ ಪಾಕ್ ವಾಯುಸೇನೆ ನಡೆಯುತ್ತಿರುವ ಬೆಳವಣಿಗೆಗಳನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಮತ್ತು ವಾಯುಪಡೆ ಮತ್ತು ಸೇನೆಗಳು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿವೆ. ಪಾಕಿಸ್ಥಾನ ವಾಯುಪಡೆಯು ತನ್ನ ವಾಯುಪಡೆ ಮತ್ತು ಸೇನೆಗಳ ಸಮಾರಭ್ಯಾಸವನ್ನು ನಡೆಸಲು ಯೋಚಿಸುತ್ತಿದೆ ಮತ್ತು ವಿಮಾನಗಳನ್ನು ಫಾರ್ವರ್ಡ್ ಬೇಸ್‍ಗೆ ಸ್ಥಳಾಂತರಿಸುಯುವಿಕೆಯು ಅದರ ಒಂದು ಭಾಗವಾಗಿರಲೂಬಹುದು ಎಂದು ಮೂಲಗಳು ತಿಳಿಸಿವೆ. ಸ್ಕಾರ್ಡು ಪಾಕಿಸ್ಥಾನ ವಾಯುಸೇನೆಯ ಫಾರ್ವರ್ಡ್ ಆಪರೇಟಿಂಗ್ ಬೇಸ್ ಆಗಿದ್ದು, ಇದನ್ನು ಭಾರತದ ಗಡಿಯಲ್ಲಿ ತನ್ನ ಸೇನಾ ಕಾರ್ಯಾಚರಣೆಯನ್ನು ಬೆಂಬಲಿಸಲು ಅದು ಬಳಸುತ್ತದೆ. ಈಗಾಗಲೇ ಭಾರತದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪಾಕಿಸ್ತಾನ ಭಾರತದ ವಿರುದ್ಧ ದಾಳಿಗೆ ಸ್ಕೆಚ್ ಹಾಕುತ್ತಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಇತ್ತ ನಮ್ಮ ಸೇನೆ ಪಾಕಿಸ್ತಾನಕ್ಕೆ ಮತ್ತೆ ನಿಮ್ಮ ಆಟ ಶುರುಮಾಡಿದರೆ ಹುಷಾರ್ ಎಂದು ವಾರ್ನಿಂಗ್ ಮಾಡಿತ್ತು.. ಆದರೂ ಮತ್ತೆ ನರಿ ಬುದ್ದಿ ತೋರಿಸುತ್ತಿದೆ.. ಈ ಬಾರಿ ಮತ್ತೆ ಬಾಲ ಬಿಚ್ಚಿದರೆ ಪಾಕಿಸ್ತಾನ ನಿಜಕ್ಕೂ ಭಿಕಾರಿ ರಾಷ್ಟ್ರವಾಗುತ್ತೆ…

Be the first to comment