ಡೆಹ್ರಾಡೂನ್ ಯುವತಿಯರಿಂದ ಮೋದಿಜೀಗೆ ರೆಡಿಯಾಗ್ತಿದೆ ವಿಷೇಶ ರೀತಿಯ ರಾಖಿ!

ಭ್ರಾತೃತ್ವದ ದ್ಯೋತಕ ರಾಖಿ ಹಬ್ಬ. ಅಣ್ಣ ತಂಗಿಯರ ನಡುವೆ ಕಟ್ಟುವ ಈ ರಾಖಿ ಪ್ರೀತಿಯ ದ್ಯೋತಕವಾಗಿದೆ. ತನ್ನ ಸೋದರನ ಶ್ರೇಯಸ್ಸು, ನೆಮ್ಮದಿಯನ್ನು ಬಯಸಿ ಅವನಿಗೆ ಒಳ್ಳೆಯ ಭವಿಷ್ಯ ಕರುಣಿಸಲಿ, ಆತನ ಬಾಳು ಸದಾ ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಹರಸುತ್ತಾ ಸೋದರಿಗೆ ರಾಖಿ ಕಟ್ಟುವ ಈ ಆಚರಣೆಗೆ ಭಾರತೀಯ ಸಂಪ್ರದಾಯದಲ್ಲಿ ತನ್ನದೇ ಆದ ಮಹತ್ವವಿದೆ. ಕೇವಲ ಒಡ ಹುಟ್ಟಿದವರೊಡನೆ ಮಾತ್ರವಲ್ಲದೇ ಎಲ್ಲಾ ಸಹೋದರ ಸಹೋದರಿಯರು ಈ ಹಬ್ಬವನ್ನು ಆಚರಿಸುತ್ತಾರೆ. ಈ ಮೂಲಕ ಸಹೋದರತ್ವದ ಸಂಬಂಧವನ್ನು ಗಟ್ಟಿಗೊಳಿಸುತ್ತಾರೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದೇ ರಕ್ಷಾ ದಿನವೂ ಆಚರಣೆಯಲ್ಲಿದ್ದು ಎರಡೂ ಮಹತ್ವ ದಿನಗಳು ಒಂದೇ ದಿನ ಬಂದಿರುವುದು ನಿಜಕ್ಕೂ ಖುಷಿಯ ವಿಚಾರ. ಇದೀಗ ಪ್ರಧಾನಿ ನರೇಂದ್ರ ಮೋದಿಜೀಯವರಿಗೆ ಉತ್ತರಾಖಂಡದ ಅಜೀವಿಕಾ ಎಜುಕೇಶನ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿಯರ ಗುಂಪೊಂದು ವಿಷೇಶ ರೀತಿಯ ರಾಖಿಯನ್ನು ತಯಾರು ಮಾಡುತ್ತಿದ್ದಾರೆ.

ಮೋದಿಜೀಗೆ ಸ್ಪೆಷಲ್ ರಾಖಿ…

ಹೌದು, ಈ ಬಾರಿಯು ಸ್ವಾತಂತ್ರ್ಯ ದಿನಾಚರಣೆಯಂದೇ ರಕ್ಷಾ ಬಂಧನ ಒಂದೇ ದಿನ ಆಚರಿಸಲಾಗುತ್ತಿದ್ದು ಹೀಗಾಗಿ ಈ ಯುವತಿಯರು ಸ್ವಾತಂತ್ರ್ಯ ದಿನದ ಥೀಮ್‍ನೊಂದಿಗೆ ಧಾನ್ಯಗಳನ್ನು ಬಳಸಿಕೊಂಡು ರಾಖಿಗಳನ್ನು ಸಿದ್ಧಪಡಿಸಿರುವುದೇ ವಿಷೇಶ.. ರೈತರ ಉನ್ನತಿಗಾಗಿ ಸರ್ಕಾರ ಪ್ರಯತ್ನಗಳನ್ನು ಮಾಡಿದೆ ಹಾಗೂ ಜಮ್ಮು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದು ಪಡಿಸಿದ್ದು ಇದೂ ನಿಜಕ್ಕೂ ಇಡೀ ದೇಶ ಮೆಚ್ಚುಗೆ ಪಡುವ ವಿಚಾರವಾಗಿದೆ. ಹಾಗಾಗಿ ಸ್ಪಷ್ಟ ಸಂದೇಶವನ್ನು ರವಾನಿಸಲು ಅವರು ಎಲ್ಲಾ ರಾಖಿಗಳನ್ನು ಧಾನ್ಯಗಳನ್ನು ಬಳಸಿಕೊಂಡು ಸಿದ್ಧಪಡಿಸಿದ್ದಾರೆ. ಅಂತಹ ನಿರ್ಧಾರವನ್ನು ಮಾಡಿದ್ದಕ್ಕೆ ಧನ್ಯವಾದ ಹೇಳಲು ನಾವು ಈ ರಾಖಿಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ರಾಖಿ ತಯಾರಿಕೆಯಲ್ಲಿ ನಿರತರಾದವರೇ ಹೇಳಿದ್ದಾರೆ.

ಯೋಧರಿಗೂ ರೆಡಿಯಾಗ್ತಿದೆ ವಿಷೇಶ ರೀತಿಯ ರಾಖಿ..

ಮೋದಿಜೀಗೆ ಯಾವ ರೀತಿ ರಾಖಿಯನ್ನು ರೆಡಿ ಮಾಡುತ್ತಿದ್ದಾರೋ ಅದೇ ರೀತಿ ದೇಶ ಕಾಯೋ ಯೋಧರಿಗೂ ಧನ್ಯವಾದ ಅರ್ಪಿಸುವ ಮೂಲಕ ಅವರಿಗೂ ನಾವು ತಯಾರಿಸುವ ರಾಖಿಯಲ್ಲಿ ಧ್ವಜ ಮತ್ತು ಭಾರತದ ನಕ್ಷೆಯನ್ನು ರಚಿಸಿದ್ದೇವೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಈ ಬಾರಿ ಡಿಫರೆಂಟ್ ರೀತಿಯಲ್ಲಿ ರಾಖಿ ರೆಡಿಯಾಗ್ತಿದೆ…

Be the first to comment