ರಜಪೂತ ಹಿಂದೂ ಕುಟುಂಬವೊಂದು ಕೇಸರಿ ತೊಟ್ಟು ಪಾಕಿಸ್ತಾನಿಯರನ್ನೇ ನಡುಗಿಸುತ್ತಿದೆ! ಪಾಕಿಸ್ತಾನದಲ್ಲಿರುವ ಹಿಂದೂ ಹುಲಿಯ ರೋಚಕ ಸ್ಟೋರಿ..

ರಜಪೂತರ ಧ್ಯೇಯ ವಾಕ್ಯವೊಂದಿದೆ. “ತನ್ನ ಕೊನೆಯ ಉಸಿರು ಇರುವವರೆಗೂ ಶತ್ರುವನ್ನು ಯಾರೂ ಎದುರಿಸುತ್ತಾನೋ ಅವನೇ ನಿಜವಾದ ರಜಪೂತ” ಎಂದು.. ರಜಪೂತರ ಬಗ್ಗೆ ಯಾತಕ್ಕಾಗಿ ಹೇಳ್ತಾ ಇದೇನೇ ಅಂದರೆ ಇಂದಿಗೂ ಅಂತಹ ಧೈರ್ಯಶಾಲಿ ರಜಪೂತ ಕುಟುಂಬವೊಂದು ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನದಲ್ಲಿದೆ ಎಂದರೆ ಒಂದು ಬಾರಿ ಅಚ್ಚರಿಯಾಗುತ್ತೆ ಅಲ್ವಾ?! ಹೌದು, ಪಾಕಿಸ್ತಾನದಲ್ಲಿ ಇನ್ನೂ ರಜಪೂತ ಕುಟುಂಬವೊಂದು ರಾಜಾರೋಷವಾಗಿ ತನ್ನ ರಜಪೂತ ರಕ್ತದ ಶೌರ್ಯತನವನ್ನು ಉಳಿಸುತ್ತಾ, ಹಿಂದೂ ಧರ್ಮವನ್ನು ಪಾಲಿಸುತ್ತಾ, ಪಾಕ್‍ನಲ್ಲಿ ಹುಲಿಯಂತೆ ಘರ್ಜಿಸುತ್ತಾ ಜೀವನ ನಡೆಸುತ್ತಿದ್ದಾರೆ.. ಅಂದು ಮೊಘಲರನ್ನೇ ದಿಗ್ಭ್ರಮೆಗೊಳಿಸಿದ ರಜಪೂತ ಕುಟುಂಬ ಇದೀಗ ಪಾಕಿಸ್ತಾನಿಯರನ್ನು ನಡುಗಿಸುತ್ತಿದೆ.

ಪಾಕಿಸ್ತಾನದಲ್ಲಿದೆ ಹಿಂದೂ ರಜಪೂತ ಕುಟುಂಬ!!

ರಾಣಾ ಚಂದರ್ ಸಿಂಗ್ ಸೋಧಾ ಮರಣಾ ನಂತರ ಮಗ ರಾಣಾ ಹಮೀರ್ ಸಿಂಗ್ ಸೋಧಾ ಪರ್ಮಾರ್ ಎಂಬವರು ಉಮರ್ ಕೋಟ್ ಸಾಮ್ರಾಜ್ಯದ ಅತ್ಯನ್ನತ ಹಿಂದೂ ಆಡಳಿತಗಾರನಾಗುತ್ತಾರೆ. ಅಧಿಕಾರವನ್ನು ಸ್ವೀಕರಿಸುವ ಮುಂಚೆಯೇ ಇವರು ರಾಜಕೀಯದಲ್ಲಿ ಸಕ್ರೀಯವಾಗಿ ದುಡಿದವರು.. ವಿಜ್ಞಾನ ಮತ್ತು ತಂತ್ರಜ್ಞಾನ ಕೃಷಿ ಸಚಿವರಾಗಿ ಕೆಲಸ ನಿರ್ವಹಿಸಿದ್ದವರು.. ಬೆನೆಸಿರ್ ಬುಟ್ಟೋ ಪಾಕಿಸ್ತಾನದ ಪ್ರಧಾನಿಯಾಗಿದ್ದ ಸಮಯದಲ್ಲಿ ಇವರು ಕಾರ್ಯ ನಿರ್ವಹಿಸಿದ್ದರು.. ರಾಣಾ ಹಮೀರ್ ಸಿಂಗ್ ಬೆನೆಸಿರ್ ಬುಟ್ಟೋ ಅಧಿಕಾರ ವಹಿಸಿದ್ದ ಸಮಯದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.. ಅದಲ್ಲದೆ ಉಮರ್ ಕೋಟ್‍ನಲ್ಲಿ ನಿಜಾಮರಾಗಿ ಕೂಡಾ ಕೆಲಸ ನಿರ್ವಹಿಸಿದ್ದರು..!! ರಾಣಾ ಚಂದರ್ಸಿಂಗ್ ಸೋದಾರ ಮರಣವಾಯಿತೋ ಯಾವಾಗ ರಾಣಾ ಹಮೀರ್ಸಿಂಗ್ ಪಟ್ಟಾಭಿಷೇಕವಾಯಿತೋ ನಿಜಕ್ಕೂ ಅದೊಂದು ಅದ್ಭುತ ಕ್ಷಣ ಅಂತಾನೇ ಹೇಳಬಹುದು.. ಅದರಲ್ಲೂ ರಾಜಸ್ಥಾನಿ ರಾಜಕುಮಾರನ ಕಿರೀಟವನ್ನು ಧರಿಸಿರುವ ಸಂದರ್ಭ ಕಣ್ಣಂಚಿನಲ್ಲಿ ಖುಷಿಯಿಂದ ನೀರು ತುಂಬುವುದಂತೂ ಖಂಡಿತ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಿಂದ ಪ್ರವೇಶಿಸಿದರೆ ಉಮರ್ ಕೋಟ್ ಪಾಕಿಸ್ತಾನದ ಮೊದಲ ರೈಲ್ವೆ ನಿಲ್ದಾಣವಾದ ಖೋಕ್ರಾಪರ್ನಿಂದ 40 ಕಿ.ಮೀ ದೂರದಲ್ಲಿದೆ.

ಪೀಪಲ್ಸ್ ಪಾರ್ಟಿಯನ್ನು ತೊರೆದು ತನ್ನ ಪಕ್ಷ ಆರಂಭಿಸಿದ ರಾಣಾ ಹಮೀರ್ ಸಿಂಗ್!!

ಹೀಗೆ 1990ರಲ್ಲಿ ರಾಣಾ ಹಮೀರ್ ಸಿಂಗ್ ಪೀಪಲ್ಸ್ ಪಾರ್ಟಿಯನ್ನು ತೊರೆದು ತನ್ನದೇ ಆದ ಒಂದು ಪಕ್ಷವನ್ನು ಆರಂಭಿಸುತ್ತಾರೆ.. ಅದುವೇ “ಪಾಕಿಸ್ತಾನ್ ಹಿಂದೂ ಪಾರ್ಟಿ” (ಪಿಹೆಚ್‍ಐ).. ಅವರು ತಮ್ಮ ಪಕ್ಷಕ್ಕೆ ಕೇಸರಿ ಧ್ವಜ ಅದರ ಮಧ್ಯದಲ್ಲಿ ಓಂ ಮತ್ತು ತ್ರಿಶೂಲವನ್ನು ಹೊಂದಿರುವಂತಹ ಧ್ವಜವನ್ನು ತನ್ನ ಪಕ್ಷದ ಸಂಕೇತವಾಗಿ ಒಳಸುತ್ತಾರೆ.. ಈ ವಿಷಯವಾಗಿ ಪಾಕಿಸ್ತಾನದಲ್ಲಿ ಅನೇಕರು ಇವರ ವಿರುದ್ಧ ಹೋರಾಟ ಕೂಡಾ ಮಾಡುತ್ತಾರೆ..

ಪಾಕಿಸ್ತಾನಿಯರಿಗೆ ಭಾರತೀಯರೆಂದರೆ ತಡೆಯಲಾರದ ಉರಿ.. ಭಯೋತ್ಪಾದಕರನ್ನು ಸಾಕಿ ಸಲಹುವುದರ ಮೂಲಕ ಉಗ್ರರನ್ನು ಭಾರತದ ವಿರುದ್ಧ ಛೂ ಬಿಡುವುದೇ ಪಾಕಿಸ್ತಾನದ ಕೆಲಸ. ಭಾರತೀಯರೇನಾದರೂ ಪಾಕ್ ಗಡಿ ದಾಟಿದರೆ ಸಾಕು ಪಟಕ್ಕನೆ ಹಿಡಿದು ಪಾಕ್ ತನ್ನ ಬೋನಿನೊಳಗೆ ಹಾಕಿ ಚಿತ್ರ ಹಿಂಸೆಯನ್ನು ಕೊಡುತ್ತಾರೆ.. ಆದರೆ ಭಾರತದ ಏಕೈಕ ಹಿಂದೂ ಕುಟುಂಬವೊಂದು ರಾಜಾರೋಷವಾಗಿ ಹುಲಿಯಂತೆ ಘರ್ಜಿಸಿ ಇಡೀ ಪಾಕಿಸ್ತಾನವನ್ನು ಈ ಹಿಂದೂ ಕುಟುಂಬಕ್ಕೆ ಹೆದರಿ ಬದುಕುತ್ತಿದ್ದಾರೆ ಎಂದರೆ ನಂಬಲು ಸಾಧ್ಯವೇ? ನಿಜವಾಗಿ ಅಸಾಧ್ಯವಾದರೂ ಹುಲಿಯಂತೆ ಬದುಕಿ ತೋರಿಸುತ್ತಿದ್ದಾರೆ ಈ ರಜಪೂತ ಕುಟುಂಬ..

ಬೆದರಿಕೆ ಹಾಕಲು ಬಂದ ಪರ್ವೇಜ್ ಮುಷರಫ್‍ನಿಗೆ ಯಾವ ರೀತಿ ಮುಖಭಂಗ ಮಾಡಿದ್ದರು ಗೊತ್ತಾ?!

ಅದಲ್ಲದೆ ಪರ್ವಜ್ ಮುಷರಫ್ ಕೂಡಾ ರಾಣಾ ಹಮೀರ ಸಿಂಗ್‍ನಿಗೆ ಏನಾದರೂ ಮಾಡಿ ಬೆದರಿಕೆ ಹಾಕಬೇಕೆಂದು ಬಂದು ಮುಖಭಂಗಕ್ಕೀಡಾಗಿದ್ದನು. ರಾಣಾ ಹಮೀರ್ ಸಿಂಗ್ ಜೀವ ಬೆದರಿಕೆಯನ್ನು ಹಾಕಿದ ಫರ್ವೇಜ್ ಮುಷರಫ್‍ನಿಗೆ ಮುಖಕ್ಕೆ ಹೊಡೆದ ರೀತಿದ ಆಡಿದ ಮಾತು ಕೇಳಿದರೆ ನಿಜವಾಗಿ ಒಮ್ಮೆ ಪ್ರತೀಯೊಬ್ಬ ಭಾರತೀಯನ್ನು ಮೈನವಿರೇಳಿಸುತ್ತದೆ. ನಮಗೆ ನೀವು ಹೆದರಿಸಲು ನಾವು ದರೋಡೆಕೋರರಲ್ಲ, ಕಳ್ಳ ಸಾಗಾಣಿಕೆ ಮಾಡಿಲ್ಲ, ಸರಕಾರದ ಹಣವನ್ನು ಎಂದೂ ಲೂಟಿ ಮಾಡಿಲ್ಲ. ಯಾವ ಅಕ್ರಮ ವ್ಯಾಪಾರವನ್ನು ಮಾಡಲೂ ಹೊರಟಿಲ್ಲ ನಮಗೆ ಯಾರ ಬಗ್ಗೆಯೂ ಭಯವಿಲ್ಲ!!

ಧರ್ಮದ ಹೆಸರಲ್ಲಿ ನಮಗೆ ಯಾರೂ ಬೆದರಿಕೆ ಹಾಕಿದರೆ ನಾವು ಸುಮ್ಮನೆ ಬಿಡಲ್ಲ. ನಾವು ಯಾವ ಗುಳ್ಳೆ ನರಿಗೂ ಹೆದರುವವರಲ್ಲ. ಎಲ್ಲಿಯವರೆಗೆ ನಮ್ಮ ಪ್ರಾಣ ಇರುತ್ತದೋ ಅಲ್ಲಿಯವರೆಗೆ ನಾವು ರಾಜಾರೋಷದಿಂದ ಹೋರಾಡುತ್ತೇವೆ. ನಮ್ಮನ್ನು ಬೆದರಿಸಿ ಗೆಲ್ಲೋಕೆ ಸಾಧ್ಯವಿಲ್ಲ ಎಂದು ಹುಲಿಯಂತೆ ಘರ್ಜಿಸಿದ್ದು ಇದೇ ರಾಣಾ ಹಮೀರ್ ಸಿಂಗ್ ಸೋಧಾ. ಅಂದು ಯಾವ ರೀತಿ ಮೊಘಲರು ರಜಪೂತರ ಆರ್ಭಟಕ್ಕೆ ತತ್ತರಿಸಿ ಹೋಗಿದ್ದರೋ ಇಂದು ಪಾಕಿಸ್ತಾನದಲ್ಲೂ ಈ ರಜಪೂತ ಹಿಂದೂ ಕುಟುಂಬಕ್ಕೆ ತತ್ತರಿಸಿ ಹೋಗಿವೆ. ಇಲ್ಲಿ ಜೀವಿಸುತ್ತಿರುವ ನಾವು ಯಾವಾಗ ಪಾಕಿಸ್ತಾನದ ಭಯೋತ್ಪಾಕರು ಬಂದು ದಾಳಿ ಮಾಡುತ್ತಾರೋ ಎಂಬ ಭಯದಿಂದ ಬದುಕಿದ್ದೇವೆ. ಅದೇ ಪಾಕ್‍ನಲ್ಲೇ ಒಂದು ಹಿಂದೂ ಕುಟುಂಬ ಹುಲಿಯಂತೆ ರಾಜಾರೋಷವಾಗಿ ಪಾಕಿಸ್ತಾನಕ್ಕೇ ಸವಾಲು ಎಸೆಯುತ್ತಾ ಬದುಕುತ್ತಿದೆ ಎಂದರೆ ನಿಜಕ್ಕೂ ಗ್ರೇಟ್.

ಪಾಕಿಸ್ತಾನದ ನೆಲದಲ್ಲಿದ್ದರೂ ಜಪಿಸುವುದು ಮಾತ್ರ ಹಿಂದೂ ಮಂತ್ರ!!

ರಾಣಾ ಹಮೀರ್ ಸಿಂಗ್ ಮತ್ತು ಅವರ ಕುಟುಂಬ ಯಾವಾಗಲೂ ಪಾಕಿಸ್ತಾನಿ ಹಿಂದೂಗಳ ಉನ್ನತಿಗಾಗಿ ಕೆಲಸ ಮಾಡಿದ್ದಾರೆ. ಅವರು ಯಾವಾಗಲೂ ಸತ್ಯಕ್ಕಾಗಿ ನಿಂತಿದ್ದಾರೆ ಮತ್ತು ಭಾರತ ವಿರುದ್ಧ ಪಾಕಿಸ್ತಾನದ ಪಿತೂರಿ ಏನಾದರೂ ಮಾಡಿದರೆ ತಕ್ಷಣ ಖಂಡಿಸುತ್ತಾ ಬಂದಿದ್ದಾರೆ.. ಈ ಕುಟುಂಬಕ್ಕೆ ಒಮ್ಮೆ ಬೆದರಿಕೆ ಹಾಕಿದ್ದಕ್ಕೆ ಪಾಕ್‍ನಲ್ಲಿ ಜೀವಿಸುತ್ತಿರುವ ಹಿಂದೂ ಹುಲಿ, ರಜಪೂತ ದೊರೆ ರಾಣಾ ಹಮೀರ್ ಸಿಂಗ್ ಸೋಧಾ ನಿಜವಾದ ಹುಲಿಯಂತೆ ಘರ್ಜಿಸಿ ಫರ್ವೇಜ್ ಮುಷರಫ್ ಎಂಬ ನರಿಯನ್ನು ಓಡಿಸಿದ ಪರಿ ನಿಜವಾಗಿಯೂ ಗ್ರೇಟ್!! ಈ ಕುಟುಂಬದ ಭಯವು ಪಾಕಿಸ್ತಾನದಲ್ಲೆಲ್ಲಾ ಬಲವಾಗಿ ಹರಡಿದೆ.. ಪಾಕಿಸ್ತಾನದ “ರಜಪೂತ ಹಿಂದೂ ಹುಲಿ” ಗೆ ನಿಜವಾಗಿಯೂ ನಾವು ಗೌರವ ಸೂಚಿಸಲೇ ಬೇಕು.. ಅವರೇ ನಮಗೆಲ್ಲಾ ಸ್ಫೂರ್ತಿಯಾಗಬೇಕು.

ಪಕ್ಕಾ ಮುಸ್ಲಿಮ್ ರಾಷ್ಟ್ರದಲ್ಲಿ ಒಂದು ಹಿಂದೂ ಕುಟುಂಬ ಮಾತ್ರ ತನ್ನ ಪ್ರಾಣವನ್ನೂ ಲೆಕ್ಕಿಸದೆ ತಲೆಗೆ ಕೇಸರಿ ಬಣ್ಣದ ಶಾಲನ್ನು ಸುತ್ತಿ ಹಣೆಗೆ ಕುಂಕುಮವನ್ನು ಹಾಕಿ ರಾಜ ರೋಷವಾಗಿ ಜೀವಿಸುತ್ತಿದ್ದಾರೆ.. ರಾಣಾ ಹಮೀರ್ ಸಿಂಗ್ ಸಿಂಧ್ ಅನ್ನು ಪಾಕಿಸ್ತಾನದ “ಧತ” ಎಂದು ಸಹ ಕರೆಯಲಾಗುತ್ತದೆ.. ಇವರು ಭಾರತದ ಪ್ರಸಿದ್ಧ ರಜಪೂತ ವಂಶವನ್ನು ಇನ್ನೂ ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಆಶ್ಚರ್ಯಕರದ ಜೊತೆಗೆ ಇದು ನಮಗೆ ಹೆಮ್ಮೆಯ ವಿಚಾರ. 2009ರಲ್ಲಿ ತನ್ನ ತಂದೆ ಮರಣಾ ನಂತರ ಹಿರಿಯ ಮಗನಾದ ರಾಣಾ ಹಮೀರ್ ಸಿಂಗ್ ಸೋಧಾರಿಗೆಗೆ ಪಟ್ಟಾಭಿಷೇಕವನ್ನು ಮಾಡಿದಾಗ. ಆ ಸಮಯದಲ್ಲಿ ಭಾರೀ ಸಂಖ್ಯೆಯ ಹಿಂದೂಗಳು ಮತ್ತು ಮುಸ್ಲಿಮರು ಪಾಲ್ಗೊಂಡಿದ್ದರು. ಇಂಡೋ ಪಾಕಿಸ್ತಾನದ ಗಡಿಯಲ್ಲಿ ಇವರಿಗೆ ಪಟ್ಟಾಭಿಭಿಷೇಕವನ್ನು ಮಾಡಲಾಯಿತು. ಹಮೀರ್ ಸಿಂಗ್ ರಾಜ ವೈಭೋಗದಂತೆ ಕಿರೀಟ ಧಾರಣೆಯನ್ನು ಮಾಡಲಾಯಿತು.. ಇದಕ್ಕೆ ಇಡೀ ಪಾಕ್ ಸಾಕ್ಷಿಯಾಯಿತು!! ಕಣ್ಣೆದುರಲ್ಲೇ ಇಷ್ಟೆಲ್ಲಾ ನಡೆಯ ಬೇಕಾದರೂ ಏನೂ ಮಾಡೋದಕ್ಕೆ ಆಗದ ಇವರು ಭಾರತದಲ್ಲಿ ಏನು ಕಿತ್ತುಕೊಳ್ಳಲು ಸಾಧ್ಯ ಎಂಬುವುದನ್ನು ನಾವು ಯೋಚಿಸಬೇಕಾಗಿದೆ.. ಹಿಂದೂಗಳು ಒಗ್ಗಟ್ಟಾಗ ಬೇಕು ಅಷ್ಟೆ… ಪಾಕಿಸ್ತಾನದಂತಹ ಯಾವ ಗೊಡ್ಡು ಬೆದರಿಕೆಗೂ ನಾವು ಅಂಜಬಾರದು.

ನಾವುಗಳು ಭಾರತದಲ್ಲಿ ಜೀವಿಸುತ್ತಿದ್ದರೂ ಕೂಡಾ ಹಿಂದೂಗಳು ಅಸುರಕ್ಷಿತವಾಗಿದ್ದೇವೆ.. ಇಲ್ಲಿ ಹಿಂದೂ ರಾಷ್ಟ್ರವಾಗಿದ್ದರೂ ಮುಸಲ್ಮಾನರ ಅಟ್ಟಹಾಸ ಗಲ್ಲಿಗಲ್ಲಿಗಳಲ್ಲಿ ನಡೆಯುತ್ತಿದೆ..ಪ್ರತಿ ನಿಮಿಷವೂ ಪಾಕಿಸ್ತಾನ ಮೂಲದ ಭಯೋತ್ಪಾದಕರ ಮುಖಾಂತರ ಬೆದರಿಕೆಯೊಡ್ಡುವ ಅಪಾಯವಿದೆ. ಅದಕ್ಕೆಲ್ಲಾ ನಾವು ಯಾರಿಗೂ ಜಗ್ಗಬಾರದು.. ರಾಣಾ ಹಮೀರ್ ಸಿಂಗ್ ಜಿ ಪಾಕಿಸ್ತಾನದವರನ್ನು ಧೈರ್ಯದಿಂದ ಎದುರಿಸಲು ಮತ್ತು “ಭಾರತ-ನಿಜಕ್ಕೂ ಕೆಚ್ಚೆದೆಯ ಹೃದಯಗಳ ದೇಶ” ಎಂದು ಪಾಕಿಸ್ತಾನಕ್ಕೆ ಅರ್ಥ ಮಾಡಿಸಿದ್ದಾರೆ.. ಈ ರಾಣಾ ಹಮೀರ್ ಸಿಂಗ್ ಸೋಧಾ ನಿಜವಾಗಿಯೂ ಹಿಂದೂ ಹುಲಿ. ಪ್ರತಿ ಭಾರತೀಯರಿಗೆ ಇವರು ಒಂದು ಮಾದರಿಯಾಗಬೇಕು..

Be the first to comment