ಭಾರತೀಯ ಪದ್ಧತಿಯ ಔಷಧಿಗಳನ್ನು ನೀಡಲು 150 ಜಿಲ್ಲೆಗಳಲ್ಲಿ ವಿಶೇಷ ಆಸ್ಪತ್ರೆಗಳನ್ನು ತೆರೆಯಲು ಮುಂದಾಗಿದೆ ಕೇಂದ್ರ!

ಈ ಮುಂಚೆ ಭಾರತದ ಅದೆಷ್ಟೋ ಕಡೆಗಳಲ್ಲಿ ಬಡ ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಅತಿಯಾದ ಆರೋಗ್ಯ ಸಮಸ್ಯೆಯಿಂದ ದಿಕ್ಕೇ ತೋಚದೆ ಭಿಕ್ಷೆ ಬೇಡುವ ಸ್ಥಿತಿಯನ್ನೂ ತಲುಪುವ ಸನ್ನಿವೇಶಗಳನ್ನು ನಾವು ನೋಡಿರಬಹುದು. ದುಬಾರಿಯಾಗುತ್ತಿರುವ ಆಸ್ಪತ್ರೆಗಳ ಬಿಲ್‍ಗಳಿಂದ ಅದೆಷ್ಟೋ ಜೀವಗಳು ತಮ್ಮ ಜೀವವನ್ನೇ ಕಳೆದುಕೊಂಡಿದ್ದರು. ಸರ್ಕಾರ ಅದೆಷ್ಟು ಪ್ರಯತ್ನ ಪಡುತ್ತಿದ್ದರೂ ಕೂಡಾ ಈ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನರೇಂದ್ರ ಮೋದಿ ಸರ್ಕಾರ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಅತಿ ದೊಡ್ಡ ಯೋಜನೆ ಆಯುಷ್ಮಾನ್ ಭಾರತನ್ನು ಜಾರಿಗೊಳಿಸಿತ್ತು. ಈ ಯೋಜನೆಯಿಂದಾಗಿ ಬಡವರ ಪಾಲಿಗೆ ಭಾರೀ ಕೊಡುಗೆಯನ್ನೇ ನೀಡಿತ್ತು ಮೋದಿ ಸರ್ಕಾರ. ಇದೀಗ ಮತ್ತೆ ಸರ್ಕಾರ ಸುಮಾರು 150 ಜಿಲ್ಲೆಗಳಲ್ಲಿ ಭಾರತೀಯ ಪದ್ಧತಿಯ ಔಷಧಿಗಳನ್ನು ನೀಡಲು ಮುಂದಾಗಿದೆ.

ಹೌದು.. ಸಿದ್ಧ ಮತ್ತು ಆಯುರ್ವೇದದಂತಹ ಭಾರತೀಯ ಪದ್ಧತಿಯ ಔಷಧಿಗಳನ್ನು ನೀಡುವ ಆಸ್ಪತ್ರೆಗಳನ್ನು ದೇಶದಾದ್ಯಂತ 150 ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಆಯುಷ್ ಸಚಿವಾಲಯದ ರಾಜ್ಯ ಖಾತೆ ಶ್ರೀಪಾದ್ ಯೆಸ್ಸೋ ನಾಯಕ್ ಅವರು ತಿಳಿಸಿದ್ದಾರೆ. ನಿನ್ನೆ ತಮಿಳುನಾಡಿನ ವೆಲ್ಲೂರಿನಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜೊಂದರಲ್ಲಿ ಉದ್ಘಾಟಿಸಿ ಅವರು ಮಾತನಾಡಿದ ಇವರು ಭಾರತೀಯ ಔಷಧಿ ವ್ಯವಸ್ಥೆಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಏಮ್ಸ್ ಮಾದರಿಯ ಸಂಶೋಧನಾ ಸಂಸ್ಥೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಆರೋಗ್ಯ ಸೇವೆ ಒದಗಿಸಿವ ಉದ್ಧೇಶದಿಂದ ಮೂಲ ಔಷಧೀಯ ಪದ್ಧತಿಯಲ್ಲಿ ಆರು ತಿಂಗಳ ಕೋರ್ಸ್ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

Be the first to comment