ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ನ 10 ಶಾಸಕರು ಬಿಜೆಪಿಗೆ ಸೇರ್ಪಡೆ..

ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್‍ನ 10 ಶಾಸಕರು ಇಂದು ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರ ಸಮ್ಮುಖದಲ್ಲಿ ಇವರನ್ನು ಬಿಜೆಪಿಗೆ ಸ್ವಾಗತಿಸಲಾಗಿದೆ. ಈ ವರ್ಷದ ಏಪ್ರಿಲ್‍ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಬಿಜೆಪಿ ಪಡೆದುಕೊಂಡಿಲ್ಲ. ಆದರೀಗ 10 ಎಸ್‍ಡಿಎಫ್ ಶಾಸಕರು ಪಕ್ಷವನ್ನು ಸೇರ್ಪಡೆಗೊಂಡಿರುವುದರಿಂದ ಬಿಜೆಪಿ ಈ ರಾಜ್ಯದ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. 25 ವರ್ಷಗಳ ಕಾಲ ಸಿಕ್ಕಿಂನ್ನು ಆಳಿರುವ ಎಸ್‍ಡಿಎಫ್ ಕಳೆದ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗೆದ್ದುಕೊಂಡಿತು. ಅದರೆ ಈಗ ಅಧಿಕಾರವನ್ನು ಕಳೆದುಕೊಂಡಿತು. ಅದರ ಇಬ್ಬರು ನಾಯಕರು ಎರಡು ಕ್ಷೇತ್ರಗಳಲ್ಲಿ ಚುನಾವಣೆ ಸ್ಪಧಿಸಿ ಗೆದ್ದ ಪರಿಣಾಮ ವಿಧಾನಸಭೆಯಲ್ಲಿ ಈ ಪಕ್ಷದ ಕೇವಲ 13 ಅಷ್ಟೇ ಇರುವುದು. ಅದರಲ್ಲಿ 10 ಮಂದಿ ಈಗ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರ ಸಮ್ಮುಖದಲ್ಲಿ 10 ಶಾಸಕರು ಬಿಜೆಪಿಯ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಬಳಿಕ ಹಾಲಿ ಶಾಸಕರು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದರು. ಎಸ್ ಡಿಎಫ್ ನ ಹದಿಮೂರು ಶಾಸಕರ ಪೈಕಿ ಹತ್ತು ಮಂದಿ ಬಿಜೆಪಿ ಸೇರಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. ಈ ಮೂಲಕ ಬಿಜೆಪಿಯು ಸಿಕ್ಕಿಂನಲ್ಲಿ ಪ್ರಮುಖ ವಿರೋಧ ಪ್ರತಿಪಕ್ಷ ಆಗಲಿದೆ. ಎಸ್ ಡಿಎಫ್ ಈ ಹಿಂದೆ ಬಿಜೆಪಿ ಮೈತ್ರಿ ಪಕ್ಷವಾಗಿತ್ತು. ಈ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ ಡಿಎಫ್ ಸೋಲನುಭವಿಸಿತ್ತು. ಅದಕ್ಕೂ ಮುನ್ನ ಇಪ್ಪತ್ತೈದು ವರ್ಷಗಳ ಕಾಲ ಪಕ್ಷ ಅಧಿಕಾರದಲ್ಲಿ ಇತ್ತು.

Be the first to comment