ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ರಾಮನ ವಂಶಸ್ಥರು ಬೇಕಾದರೆ ರಾಮ ಜನಿಸಿದ ಭೂಮಿಯಲ್ಲಿ ಜನ್ಮವೆತ್ತ ನಾವೆಲ್ಲರೂ ರಾಮನ ವಂಶಸ್ಥರೇ ಅಲ್ಲವೇ?!

ಮರ್ಯದಾ ಪುರುಷ ಪ್ರಭು ಶ್ರೀ ರಾಮಚಂದ್ರ ಜನಿಸಿದ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕೆಂದು ಅದೆಷ್ಟೋ ಕೋಟ್ಯಾಂತರ ಭಕ್ತರ ಕನಸು. ಮೋದಿಜೀ ಅಧಿಕಾರವಹಿಸಿದಾಗಿನಿಂದ ರಾಮ ಮಂದಿರ ನಿರ್ಮಾಣಕ್ಕೆ ಶತಾಯಗತಾಯ ಪ್ರಯತ್ನ ಮಾಡುತ್ತನೇ ಇದ್ದಾರೆ. ಹಿಂದೂ ಮುಸ್ಲಿಂ ಜಗಳದಲ್ಲಿ ರಾಮಮಂದಿರವನ್ನು ಕಟ್ಟಲು ಮುಸಲ್ಮಾನರೇ ಬಿಡುತ್ತಿಲ್ಲ ಎನ್ನುತ್ತಿದ್ದ ವಿಚಾರಗಳು ಹುಸಿಯಾಗಿದೆ. ಅದೆಷ್ಟೋ ಮುಸ್ಲಿಮ್ ಬಾಂಧವರು ಕೂಡಾ ಹಿಂದುಗಳ ಜೊತೆ ಕೈ ಜೋಡಿಸಿ ಬಾಬ್ರಿ ಮಸೀದಿ ನಿರ್ಮಾಣ ಮಾಡುವುದಕ್ಕಿಂತ ಮುಂಚಿತವಾಗಿ ರಾಮ ಜನ್ಮ ಭೂಮಿಯಾಗಿತ್ತು ಎಂದು ನಮ್ಮ ಜೊತೆ ಕೈ ಜೋಡಿಸಿದರೆ ಕೆಲ ಹಿಂದೂ ವಿರೋಧಿಗಳು ಅಂದರೆ ಕಾಂಗ್ರೆಸ್ಸಿಗರು ರಾಮ ಮಂದಿರ ನಿರ್ಮಾಣವಾಗಲೇ ಬಾರದು ಎಂದು ಪಣತೊಟ್ಟಂತಿದೆ. ಅದರಲ್ಲೂ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಏನಾದರೂ ರಾಮಮಂದಿರ ನಿರ್ಮಾಣವಾದರೆ ಎಲ್ಲಿ ಆ ಕ್ರೆಡಿಟ್ ಮೋದಿ ಸರಕಾರಕ್ಕೆ ಹೋಗುತ್ತೋ ಎಂಬ ಭಯದಲ್ಲಿ ಕೆಲವರ ತಲೆ ತೀರಾ ಕೆಡಿಸಿದಂತೆ ನಡೆದುಕೊಂಡಿದ್ದರು. ರಾಮಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನೂ ಸುಪ್ರೀಂಕೋರ್ಟ್‍ಗೆ ನೀಡಿದರೂ ಮಧ್ಯಸ್ಥಿತಿಕೆ ಮಾಡಿ 8 ವಾರಗಳಲ್ಲಿ ವರದಿ ನೀಡಬೇಕೆಂದು ಗಿಮಿಕ್ ಮಾಡುವ ಮೂಲಕ ರಾಮಮಂದಿರ ನಿರ್ಮಾಣದ ಕನಸನ್ನು ಮುಂದೂಡತ್ತನೇ ಬರುತ್ತಿದೆ. ಇದೀಗ ಸುಪ್ರೀಂ ಕೋರ್ಟ್‍ನಲ್ಲಿ ರಾಮಮಂದಿರ ಪ್ರಸ್ತಾವನೆಯಲ್ಲಿ ರಘುವಂಶದ ಪ್ರಸ್ತಾಪ ಮಾಡಿ ಮತ್ತೆ ರಾಮಮಂದಿರ ನಿರ್ಮಾಣಕ್ಕೆ ತಡೆಯೊಡ್ಡುವ ಉಪಾಯ ಮಾಡುತ್ತಿದ್ದಾರೆ.

ಸುಪ್ರೀಂ ಕೋರ್ಟ್‍ನಲ್ಲಿ ರಘುವಂಶದ ಪ್ರಸ್ತಾಪ!

ಹೌದು…ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿಯ ಸಂಪೂರ್ಣ ಹಕ್ಕು ಪಡೆಯಲು ಸಲ್ಲಿಸಿರುವ ಅರ್ಜಿ ಕುರಿತು ಕೋರ್ಟ್‍ನಲ್ಲಿ ವಾದ ನಡೆಯುತ್ತಿದೆ. ಶುಕ್ರವಾರ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದಲ್ಲಿ ಐವರು ನ್ಯಾಯಮೂರ್ತಿಗಳ ಪೀಠದ ಮುಂದೆ ನಡೆದ ವಿಚಾರಣೆಯಲ್ಲಿ ಸುಪ್ರಿಂ ಕೋರ್ಟ್ ರಘುವಂಶದವರು ಯಾರಾದರೂ ಅಯೋಧ್ಯೆಯಲ್ಲಿ ಜೀವಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿ ಮತ್ತೆ ರಾಮ ಮಂದಿರ ನಿರ್ಮಾಣದ ವಿಚಾರಕ್ಕೆ ತಡೆಯೊಡ್ಡುವ ಹುನ್ನಾರ ಮಾಡುತ್ತಿದ್ದಾರೆ ಎಂದನಿಸುತ್ತಿದೆ.

ಕೋಟ್ಯಾನು ಕೋಟಿ ಭಾರತೀಯರು ಅದೆಷ್ಟೋ ವರ್ಷಗಳಿಂದ ರಾಮ ಮಂದಿರ ನಿರ್ಮಾಣಕ್ಕೆ ತುದಿಗಾಲಲ್ಲಿ ನಿಂತಿದ್ದು ಇದೀಗ ಸುಪ್ರೀಂ ಕೋರ್ಟ್ ಹೊಸ ತಗಾದೆಯನ್ನು ಎತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಅಯೋಧ್ಯೆಯಲ್ಲಿ ಯಾರಾದರೂ ರಘುವಂಶಸ್ಥರು ಇದ್ದಾರಾ ಎನ್ನುವ ಪ್ರಶ್ನೆಯನ್ನು ಕೇಳಿದ್ದು ಇದು ನಿಜವಾಗಿಯೂ ರಾಮಮಂದಿರ ನಿರ್ಮಾಣಕ್ಕೆ ತಡೆಯೊಡ್ಡು ಹುನ್ನಾರವಲ್ಲದೆ ಮತ್ತೇನು?! ಅಯೋಧ್ಯೆಯಲ್ಲಿ ಶ್ರೀರಾಮನ ವಂಶಸ್ಥರು ಇದ್ದಾರಾ ಎನ್ನುವುದು ಮುಖ್ಯ ಅಲ್ಲ.. ಬದಲಾಗಿ ಅದು ಬಾಬಾರ್ ಬಾಬ್ರಿ ಮಸೀದಿಯನ್ನು ನಿರ್ಮಾಣ ಮಾಡುವ ಮುಂಚಿತವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರವಿತ್ತು ಎಂಬುವುದು ಹೌದಾದರೆ ಅವರ ವಂಶಸ್ಥರು ಇದ್ದಾರಾ ಇಲ್ಲವಾ ಎನ್ನುವುದು ಮುಖ್ಯವೇ?! ಜೆರುಸಲೆಂ ಕ್ರಿಶ್ಚಿಯನ್ನಿಯರಿಗೂ, ಮುಸ್ಲಿಮರಿಗೂ , ಯಹೂದಿಯರಿಗೂ ಪವಿತ್ರ ಸ್ಥಳವಂತೆ. ಅವರೂ ಕೂಡಾ ಇದೇ ರೀತಿ ಹೋರಾಟ ಮಾಡುತ್ತನೇ ಬಂದಿದ್ದಾರೆ.. ಆದರೆ ಇದುವರೆಗೂ ಅವರಿಗೆ ಅಲ್ಲಿ ನಿಮ್ಮ ವಂಶಸ್ಥರು ಇದ್ದಾರೆಯೆ ಎಂಬ ಯಾಕೆ ಪ್ರಶ್ನೆ ಎತ್ತಿಲ್ಲ?! ಹಾಗಾದರೆ ಹಿಂದೂಗಳ ನಂಬಿಕೆಯನ್ನು ಪ್ರಶ್ನಿಸುವವರು ಬೇರೆ ಧರ್ಮದ ನಂಬಿಕೆಯನ್ನು ಯಾಕೆ ಪ್ರಶ್ನಿಸಲ್ಲ?!

ಹಿಂದೂಗಳ ಭಾವನೆಗೆ ಧಕ್ಕೆ ತರಬೇಕೆನ್ನುವ ಉದ್ಧೇಶವನ್ನಿಟ್ಟುಕೊಂಡೇ ಈ ರೀತಿ ಹುನ್ನಾರ ಮಾಡಲಾಗುತ್ತಿದೆಯೇ?! ಇಲ್ಲಿ ಗಮನಿಸಬೇಕಾದ ಅಂಶ ಒಂದೇ. ಬಾಬ್ರಿ ಮಸೀದಿಗಿಂತ ಮುಂಚೆ ರಾಮಮಂದಿರ ಇತ್ತೋ ಇಲ್ಲವೋ ಎಂದು.. ರಾಮಮಂದಿರ ಇತ್ತು ಎನ್ನುವುದಕ್ಕೆ ಅನೇಕ ಪುರಾವೆಗಳು ದೊರಕಿದೆ.. ಭಾರತದಲ್ಲಿ ಹುಟ್ಟಿದ ಪ್ರತೀಯೊಬ್ಬರು ರಾಮನ ವಂಶಸ್ಥರೇ. ಬೇರೆ ಧರ್ಮದವರ ಹೋರಾಟ ಮಾಡಿದ್ರೆ ಯಾವ ಪ್ರೂಫ್ ಬೇಡ.. ಆದರೆ ಮತ್ತೆ ರಾಮಮಂದಿರ ನಿರ್ಮಾಣ ಮಾಡಬೇಕಾದರೆ ನಿಮಗೆ ರಾಮನ ವಂಶಸ್ಥರು ಬೇಕಾ? ರಾಮ ಹುಟ್ಟಿರೋದಕ್ಕೆ ಇತಿಹಾಸ ಇದೆ. ಅಲ್ಲದೆ ರಾಮ ಮಂದಿರ ಅಲ್ಲೇ ಇತ್ತು ಎನ್ನುವುದಕ್ಕೆ ಈಗಾಗಲೇ ಅನೇಕ ಪುರಾವೆಗಳು ಇದ್ದರೂ ಮತ್ತೆ ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈಗಾಗಲೇ ಸ್ವತಃ ಬಾಬರ್ ವಂಶಸ್ಥನೇ ಹಿಂದೂಗಳ ಕ್ಷಮೆ ಕೇಳಿಕೊಂಡು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿ ಎಂದು ಹೇಳಿರಬೇಕಾದರೆ ಪದೇ ಪದೇ ಇಲ್ಲ ಸಲ್ಲದ ವಿಚಾರ ಎತ್ತಿ ಮತ್ತೆ ಮತ್ತೆ ರಾಮಮಂದಿರ ನಿರ್ಮಾಣಕ್ಕೆ ತಡೆಯೊಡ್ಡುವ ಉಪಾಯ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

Be the first to comment