ಕಲಂ 370 ರದ್ಧತಿ ವಿಚಾರ ಮೋದಿ ಸರ್ಕಾರದ ಬೆಂಬಲಕ್ಕೆ ನಿಂತು ಸಮಾವೇಶ ಏರ್ಪಡಿಸಲಿದ್ದಾರೆ ಯುಎಸ್‍ನಲ್ಲಿರುವ ಕಾಶ್ಮೀರಿ ಪಂಡಿತರು..

ಬಹುಕಾಲದ ಹಿಂದೆ ಕಾಶ್ಮೀರದಲ್ಲಿ ಶೋಷಣೆಗೆ ಒಳಗಾಗಿ ಜೀವ ಉಳಿಸಿಕೊಂಡಿದ್ದ ಕಾಶ್ಮೀರಿ ಪಂಡಿತರ ಕುಟುಂಬದ ಸದಸ್ಯರು ದೇಶದ ನಾನಾ ಕಡೆಗಳಲ್ಲಿ ಅಲ್ಲದೆ ವಿದೇಶಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದಾರೆ. ಕಾಶ್ಮೀರ ಅರವದ್ದೇ ಆದರೂ ಅವರು ವಾಪಾಸ್ಸು ಅಲ್ಲಿಗೆ ಹೋಗುವ ಕನಸ್ಸನ್ನೇ ಕೈ ಬಿಟ್ಟಿದ್ದರು. ಆದರೆ ಯಾವಾಗ ಮೋದಿ ಸರ್ಕಾರ ಆರ್ಟಿಕಲ್ 370ನ್ನು ರದ್ದುಗೊಳಿಸಿತೋ ಆ ಸಂದರ್ಭ ಮಾತ್ರ ಅವರ ಹರ್ಷಕ್ಕೆ ಪಾರವೇ ಇರಲಿಲ್ಲ. ಅಂದು ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಸೀದಿಯೊಂದರಲ್ಲಿ ಕೇಳಿಬಂದ ಜಾಗವನ್ನು ತೊರೆಯಿರಿ ಅಥವಾ ಮತಾಂತರವಾಗಿ ಇಲ್ಲವೇ ಸಾಯಿರಿ ಹಾಗಾಗದಿದ್ದರೆ ನಾವೇ ನಿಮ್ಮನ್ನು ಸಾಯಿಸುತ್ತೇವೆ ಎಂಬ ಬೆದರಿಕೆ ಕೂಗು ಕಾಶ್ಮೀರಿ ಪಂಡಿತರನ್ನು ಅಕ್ಷರಶಃ ಭೀತಿಗೆ ದೂಡಿತ್ತು. ಅಲ್ಲಿಂದ ಅಂದು ತಮ್ಮ ಪ್ರಾಣ ರಕ್ಷಣೆಗಾಗಿ ಮನೆ ತೊರೆದದವರು ಮತ್ತೆ ಕಾಶ್ಮೀರಕ್ಕೆ ವಾಪಾಸ್ಸಾಗದೆ ನಾನಾ ಕಡೆಗಳಲ್ಲಿ ಜೀವನ ನಡೆಸುತ್ತಾ ಇದ್ದಾರೆ. ತಮ್ಮದೇ ಮನೆ ಮಠ ಕಾಶ್ಮೀರದಲ್ಲಿದ್ದರೂ ಅಂದಿನ ಬೆದರಿಗೆ ಮತ್ತೆ ವಾಪಸ್ಸು ಬರುವ ಪ್ರಯತ್ನ ಪಡಲೇ ಇಲ್ಲ. ಆದರೆ ಮೋದಿ ಸರ್ಕಾರ 370 ಹಾಗೂ 35ಎ ರದ್ದಾಗಿದೆ ಎಂದು ಎನೌನ್ಸ್‍ಮೆಂಟ್ ಕೇಳುತ್ತಲೇ ಅವರ ಖುಷಿಗೆ ಪಾರವೇ ಇರಲಿಲ್ಲ. ಇದೀಗ ಅಮೆರಿಕಾದಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರು ಕೇಂದ್ರದ ನಡೆಯನ್ನು ಸಂಪೂರ್ಣವಾಗಿ ಸ್ವಾಗತಿಸಿದ್ದಾರೆ.

ಹೌದು… ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಅಮೆರಿಕಾದಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತ ಸಮುದಾಯವು ಅಭೂತಪೂರ್ವವಾಗಿ ಸ್ವಾಗತ ಮಾಡಿದೆ. ಭಾರತ ಸರ್ಕಾರದ ಈ ಮಹತ್ವಪೂರ್ಣ ನಿರ್ಧಾರವನ್ನು ಬೆಂಬಲಿಸಲು ಅದು ಸಮಾವೇಶವನ್ನು ನಡೆಸಿದೆ. ಆಗಸ್ಟ್ 5 ರಂದು ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯ ನಿಭಂಧನೆಗಳನ್ನು ರದ್ದುಗೊಳಿಸಿತು ಮತ್ತು ಆಗಸ್ಟ್ 6 ರಂದು ಸಂಸತ್ತಿನ ಅನುಮೋದನೆ ಪಡೆದು ರಾಜ್ಯವನ್ನು ವಿಭಜನೆ ಮಾಡಲು ಪ್ರಸ್ತಾಪಿಸಿತು. ಹೀಗಾಗಿ ಜಮ್ಮು ಕಾಶ್ಮೀರ ಮತ್ತು ಲಡಾಖ್ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಹೊರಹೊಮ್ಮಿದೆ.

ಭಾರತ ಸರ್ಕಾರದ ಈ ಕ್ರಮಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ ಕಾಶ್ಮೀರಿ ಪಂಡಿತರು ಮತ್ತು ಭಾರತೀಯ ಅಮೆರಿಕನ್ ಸಮುದಾಯದ ಇತರ ಸದಸ್ಯರು ಜಾರ್ಜಿಯಾದ ಅಟ್ಲಾಂಟದ ಸಿಎನೆನ್ ಕೇಂದ್ರ ಕಚೇರಿಯ ಮುಂದೆ ಸಮಾವೇಶವನ್ನು ನಡೆಸಿದರು. ಈ ಸಮಾವೇಶದಲ್ಲಿ ಹಲವಾರು ಕಾಶ್ಮೀರಿ ಪಂಡಿತರು ತಮ್ಮ ಕೆಟ್ಟ ಅನುಭವಗಳ ಬಗ್ಗೆ ನೋವವನ್ನು ಹಂಚಿಕೊಂಡಿದ್ದು 1990ರಲ್ಲಿ ಭಯೋತ್ಪಾದನೆಯ ಕಾರಣದಿಂದಾಗಿ ನಾವು ತೊರೆದ ನಮ್ಮ ನೆಲೆಗೆ ಈಗ ವಾಪಸ್ ಹೋಗಲು ಬಯಸುತ್ತೇವೆ ಎಂದು ಹಲವಾರು ಮಂದಿ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮೋದಿ ಸರ್ಕಾರದಿಂದಾಗಿ ಭಾರತದ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತರು ಈಗ ಕಾನೂನಿನ ಮುಂದೆ ಸಮಾನವಾಗಿ ಉತ್ತಮ ಅವಕಾಶವನ್ನು ಹೊಂದುತ್ತಿದ್ದಾರೆ ಎಂದು ಕಾಶ್ಮೀರ ಪಂಡಿತರಾದ ಸುಭಾಷ್ ರಝ್ದಾನ್ ಇಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇವರು ನ್ಯಾಷನಲ್ ಫೆಡರಲ್ ಆಫ್ ಇಂಡಿಯನ್ ಅಮೆರಿಕನ್ ಅಸೋಸೊಯೇಶನ್ ಮಾಜಿ ಅಧ್ಯಕ್ಷರಾಗಿದ್ದಾರೆ. ಒಟ್ಟಾರೆ ಮೋದಿ ಸರ್ಕಾರದ ಈ ನಡೆ ಕೆಲ ಹುಳುಗಳಿಗೆ ಬಿಟ್ಟರೆ ಇಡೀ ವಿಶ್ವ ಆರ್ಟಿಕಲ್ 370 ರದ್ಧತಿ ಬಗ್ಗೆ ಮೆಚ್ಚುಗೆ ವ್ಯಕ್ತಿ ಪಡಿಸಿದೆ.

Be the first to comment