ಸ್ತ್ರೀ ರೂಪ ವಿನಾಯಕಿಯ ಬಗ್ಗೆ ನಿಮಗೆ ಗೊತ್ತೇ?!

ಯಾವುದೇ ಬಗೆಯ ಕೆಲಸ ಕಾರ್ಯವನ್ನು ಆರಂಭಿಸುವ ಮುನ್ನ ಆ ಕಾರ್ಯಕ್ಕೆ ವಿಘ್ನ ಬರದಿರಲಿ ಎಂದು ಗಣಪನನ್ನು ಪೂಜಿಸುತ್ತಾರೆ. ಅದಕ್ಕಾಗಿಯೇ ವಿಘ್ನ ವಿನಾಶಕನಿಗೆ ಪ್ರಥಮ ಪೂಜೆಯನ್ನು ನೆರವೇರಿಸುತ್ತಾರೆ. ಶಿವನ ವರವೇ ಗಣಪನಿಗೆ ದೊರೆತಿರುವ ಪ್ರಥಮ ಪೂಜೆಯಾಗಿದೆ. ಎಲ್ಲರೂ ಯಾವುದೇ ಕೆಲಸಕ್ಕೆ ಮುಂದಾಗುವ ಮುನ್ನ ಮನದಲ್ಲಾದರೂ ವಿನಾಯಕನಿಗೆ ವಂದಿಸಲೇಬೇಕು. ಗಣಪತಿ ನಮ್ಮ ಕೆಲಸದ ದಾರಿಯಲ್ಲಿ ಒದಗುವ ವಿಘ್ನವಿಡ್ಡೂರಗಳನ್ನು ಕಳೆದು ಕಾರ್ಯವನ್ನು ಸುಗಮಗೊಳಿಸುತ್ತಾನೆ.. ಪ್ರತೀಯೊಂದು ಕೆಲಸವನ್ನು ನಿರ್ವಹಿಸಬೇಕಾದರೂ ಅದರಲ್ಲಿ ಹಿಂದೂಗಳಿಗೆ ಗಣಪತಿ ಅತಿ ಮುಖ್ಯ ಪಾತ್ರವಹಿಸುತ್ತಾನೆ.. ಗಣಪತಿಯು ವಿಘ್ನವಿನಾಶಕ.. ಮೂವತ್ತ ಮೂರು ಕೋಟಿ ದೇವತೆಗಳಲ್ಲಿ ಮೊದಲ ಪೂಜೆ ಮಾಡುವುದೇ ನಾವು ಗಣಪತಿಗೆ. ಇಷ್ಟೆಲ್ಲಾ ಗಣಪತಿಯ ಬಗ್ಗೆ ತಿಳಿದ ನಾವು ಸ್ತ್ರೀ ಗಣಪತಿಯ ಬಗ್ಗೆ ಅನೇಕ ಜನರಿಗೆ ತಿಳಿದಿರಲು ಸಾಧ್ಯವಿಲ್ಲ.

ಹೌದು, ಗಣಪತಿಗೆ ಸ್ತ್ರೀರೂಪವಿದೆ. ಪುರುಷ ದೇವತೆಯಂತೆ ಸ್ತ್ರೀ ದೇವತೆಯೂ ಹೌದು. ಅನೇಕ ಪುರಾಣಗಳಲ್ಲಿ ಅವನ ಸ್ತ್ರೀರೂಪದ ಉಲ್ಲೇಖವಿದ್ದು ಅಪರೂಪಕ್ಕೆ ಕೆಲ ದೇವಸ್ಥಾನಗಳಲ್ಲಿ ಈ ಸ್ತ್ರೀರೂಪದ ಶಿಲ್ಪಗಳೂ ಇವೆ. ಅಪ್ಪಟ ಬ್ರಹ್ಮಚಾರಿಯಾಗಿರುವ ಗಣಪತಿಗೆ ಸ್ತ್ರೀರೂಪವೂ ಇದೆ ಅಂದರೆ ಆಶ್ಚರ್ಯವಾಗುತ್ತೆ! ಆದರೆ, ಇಂದಿಗೂ ಜನಸಾಮಾನ್ಯರಿಗೆ ಗಣಪತಿಯ ಬಗ್ಗೆ ಮಾತ್ರ ತಿಳಿದಿರುವಂತಹದ್ದು. ವಿನಾಯಕನ ಸ್ತ್ರೀ ಸ್ವರೂಪವೂ ಒಂದಿದೆ.. ಈಕೆಯನ್ನು ವಿನಾಯಕಿ ಎಂದು ಕರೆಯುತ್ತಾರೆ. ತಾಂತ್ರಿಕ ಸಾಧನೆಗಳನ್ನು ಮಾಡುವವರು ಈಕೆಯನ್ನು ಪೂಜಿಸುತ್ತಾರೆ. ಒಮ್ಮೆ ಅಂಧಕನೆಂಬ ಅಸುರ ಕೈಲಾಸವನ್ನು ಮುತ್ತಿ, ಪಾರ್ವತಿಯನ್ನು ಎಳೆದೊಯ್ಯಲು ಯತ್ನಿಸಿದ. ಶಿವ ಆತನನ್ನು ತ್ರಿಶೂಲದಿಂದ ಇರಿದಾಗ, ಆತನ ರಕ್ತದ ಬಿಂದು ಬಿದ್ದಲ್ಲೆಲ್ಲ ಅಂಧಕರು ಹುಟ್ಟಿಕೊಳ್ಳತೊಡಗಿದರು. ಆತನ ರಕ್ತ ನೆಲ ಸೇರದಂತೆ ಹೀರಿ ಮುಗಿಸಲು ಪ್ರತಿ ದೇವತೆಯೂ ತಮ್ಮ ಶಕ್ತಿ ರೂಪವನ್ನು ಯುದ್ಧಾಂಗಣದಲ್ಲಿ ಹೊರತೆಗೆಯುವಂತೆ ಪಾರ್ವತಿ ಸೂಚಿಸಿದಳು. ಹಾಗೆ ವಿನಾಯಕ ಹೊರಗೆಡಹಿದ ಆತನ ಸ್ತ್ರೀ ಸ್ವರೂಪವೇ ವಿನಾಯಕಿ.

ಇದೀಗ ಕನ್ಯಾ ಕುಮಾರಿಯಲ್ಲಿರುವ 1300 ವರ್ಷಗಳಷ್ಟು ಪುರಾತನವಾದ ತನುಮಾಲಯಂ ದೇವಾಲಯದಲ್ಲಿ ವಿನಾಯಕಿಯ ವಿಗ್ರಹವಿದೆ. ವಿನಾಯಕನಂತೆಯೆ ಕಾಣಿಸುವ ಈ ವಿಗ್ರಹ ವಿನಾಯಕನ ಹೆಣ್ಣು ರೂಪ. ವಿನಾಯಕಿಯ ಹೆಸರುಗಳು ಹಲವು. ಆದರೆ ಎಲ್ಲವೂ ಗಣೇಶನ ಹೆಸರುಗಳ ಸ್ತ್ರೀ ಆವೃತ್ತಿಗಳು. ಉದಾಹರಣೆಗೆ ಗಜಾನನಿ, ವಿಘ್ನೇಶಿ, ಗಜರೂಪ ಇತ್ಯಾದಿ. ಅದಲ್ಲದೆ ಈಕೆಯನ್ನು ವೈನಾಯಕಿ ಎಂದೂ ಕರೆಯಲಾಗುತ್ತದೆ. ಶಿವನ ಶಕ್ತಿಯ ಒಂದು ರೂಪಗಳಲ್ಲಿ ವಿನಾಯಕಿಯೂ ಸೇರಿದ್ದಾಳೆ. ವಿನಾಯಕಿಯ ಮೊದಲ ಉಲ್ಲೇಖ ಮತ್ಸ್ಯ ಪುರಾಣದಲ್ಲಿ ಕಂಡು ಬರುತ್ತದೆ. ವಿನಾಯಕಿಯ ಹೆಸರು ಹೆಚ್ಚಿನವರಿಗೆ ಗೊತ್ತಿರದಿದ್ದರೂ ವಿನಾಯಕಿಯ ಮೇಲೆ ಹಲವಾರು ಸಂಶೋಧನಾ ಗ್ರಂಥಗಳು ಪ್ರಕಟವಾಗಿವೆ. ವಿನಾಯಕಿಯ ಮೊದಲ ವಿಗ್ರಹ ಟೆರಕೋಟದಲ್ಲಿ ಕೆತ್ತಿದ್ದು ಇದು ಮೊತ್ತ ಮೊದಲು ರಾಜಸ್ಥಾನದಲ್ಲಿ ಕಂಡುಬಂದಿತ್ತು. ಅದಲ್ಲದೆ ಒರಿಸ್ಸಾದ ಹಿರಾಪುರದ ತಾಂತ್ರಿಕ ದೇವಾಲಯ ಚೌಸಾತ್ ಯೋಗಿನಿ ಎಂಬಲ್ಲಿ ಈ ದೇವಿಯ ಪ್ರತಿರೂಪ ಕಂಡುಬಂದಿದೆ. ಇಲ್ಲಿ ನರ್ತಿಸುವ ಭಂಗಿಯಲ್ಲಿರುವ ವಿಶೇಷವಾದ ಹೆಣ್ಣು ವಿನಾಯಕನ ವಿಗ್ರಹವು ಶಿಥಿಲಗೊಂಡರೂ ಆಕರ್ಷಕವಾಗಿ ಇಂತಿದೆ!!

ಸ್ತ್ರೀ ರೂಪದ ಗಣಪತಿಯು ವಿನಾಯಕಿ ಅಥವಾ ಗಣೇಶಾನಿ, ಗಜಾನನಿ, ಗಣೇಶ್ವರಿ ಅಥವಾ ವಿಘ್ನೇಶ್ವರಿ ಎಂಬುದು ಗಣೇಶನ ಸ್ತ್ರೀಯಾತ್ಮಕ ರೂಪ. ದೇವತೆ ವಿನಾಯಕಿ ಮೂರ್ತಿಯ ಆರಾಧನೆ ತಮಿಳುನಾಡಿನಲ್ಲಿ ಕಂಡುಬರುತ್ತದೆ. ಮಧ್ಯಪ್ರದೇಶದ ಭೇಡಾಘಾಟ್‍ನ ಯೋಗಿನೀ ದೇವಳದಲ್ಲಿ ಗಣಪತಿಯ ಸ್ತ್ರೀ ರೂಪದ ವಿಗ್ರಹವಿದ್ದು ಅದನ್ನು “ಗಣೇಶಾನಿ’ ಎನ್ನುವರು. ಹಾಗೇ ಉತ್ತರ ಕನ್ನಡ ಜಿಲ್ಲೆಯ ಶಿರಾಲಿ, ಚಿತ್ರಾಪುರ ಮಠದ ವಸ್ತುಸಂಗ್ರಹಾಲಯದಲ್ಲೂ ಒಂದು ಕಂಚಿನ “ಗಣೇಶಾನಿ’ ಪ್ರತಿಮೆಯಿದೆ. ಟಿಬೇಟಿನಲ್ಲಿಯೂ ವಿವಿಧೆಡೆಗಳಲ್ಲಿ ಗಣೇಶಾನಿ ಪ್ರತಿಮೆಗಳು ಕಾಣಸಿಗುತ್ತವೆ. ಅಲ್ಲದೆ ಗಜಾನನಿಯನ್ನು ಆರಾಧಿಸಲಾಗುತ್ತದೆ. ವಿನಾಯಕಿಯನ್ನು ಮಧುರೈಯಲ್ಲಿ ವ್ಯಾಘ್ರಪಾದ ಗಣಪತಿ ಎಂದು ಆರಾಧಿಸಲಾಗುತ್ತದೆ. ವ್ಯಾಘ್ರಪಾದ ಗಣಪತಿ ಸ್ತ್ರೀಯ ದೇಹ ಹಾಗೂ ಹುಲಿಯ ಪಾದಗಳನ್ನು ಹೊಂದಿದೆ. ಸುಚಿಂದ್ರಂನಲ್ಲಿ ಸುಖಾಸನ ಭಂಗಿಯ ಸ್ತ್ರೀಯಾತ್ಮಕ ಗಣೇಶನನ್ನು ಆರಾಧಿಸಲಾಗುತ್ತದೆ. ರಾಜಸ್ಥಾನದ ಸಿಗಾರ್ನಲ್ಲಿ ಸ್ತ್ರೀಯಾತ್ಮಕ ರೂಪದ ಗಣೇಶನ್ನು ಗಣೇಶಾನಿ ಎಂದು ಕರೆದು ಪೂಜಿಸಲಾಗುತ್ತದೆ. ಅದಲ್ಲದೆ ಬಾಲಿಯಲ್ಲಿಯೂ ಈ ವಿನಾಯಕಿ ದೇವಾಲಯವಿದ್ದು ಇದನ್ನು ಪೂಜಿಸಲಾಗುತ್ತದೆ!! ಇದು ಪ್ರಾಚೀನ ಶಿವನ ದೇವಾಲಯದಲ್ಲಿ ನಡೆಯುತ್ತದೆ. ವೇದಗಳಲ್ಲಿ ವಿದ್ಯಾಗಣಪತಿಯನ್ನು ಗಣಪತಿಯ ಸ್ತ್ರೀಯಾತ್ಮಕ ರೂಪ ಎಂದು ವಿವರಿಸಲಾಗುತ್ತದೆ.

ವಿನಾಯಕಿ ಗಜಮುಖ ಮತ್ತು ಮಹಿಳೆಯ ದೇಹವನ್ನು ಹೊಂದಿರುವ ಹಿಂದೂ ದೇವತೆ. ಈ ದೇವತೆ ಬಗ್ಗೆ ಸಾಮಾನ್ಯವಾಗಿ ಯಾರೂ ತಿಳಿರಲು ಸಾಧ್ಯವಿಲ್ಲ? ಗಣಪತಿ ಎಂದಾಗ ಆನೆಯ ತಲೆ ಮತ್ತು ಪುರುಷ ದೇಹವಾದರೆ, ಇಲ್ಲಿ ಆನೆಯ ತಲೆಯೊಂದಿಗೆ ಮಹಿಳೆಯ ದೇಹವನ್ನು ಕಾಣಬಹುದು. ಗಣಪತಿಯಂತೆ ಇವಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದ್ದು ವಿನಾಯಕಿಯನ್ನು ಕೆಲವೊಮ್ಮೆ ಅರುವತ್ತ ನಾಲ್ಕು ಯೋಗಿನಿಯರ ಭಾಗದಂತೆಯೂ ಪರಿಗಣಿಸಲಾಗಿದೆ. ಹಾಗಾಗಿ ವಿಘ್ನವಿನಾಶಕ ಗಣೇಶನಂತೆ ಸ್ತ್ರೀ ರೂಪದ ವಿನಾಯಕಿ ಇದ್ದಾಳೆ ಎಂಬುವುದು ಅಷ್ಟೇ ಸತ್ಯ.. ಮಧ್ಯಪ್ರದೇಶದ ಭೇರಾಘಾಟನ ಯೋಗಿನೀ ದೇವಳದಲ್ಲಿ ಗಣಪತಿಯ ಸ್ತ್ರೀ ರೂಪದ ವಿಗ್ರಹವಿದೆ. ಅದನ್ನು `ಗಣೇಶಾನಿ’ ಎನ್ನುವರು. ಹಾಗೇ ಉತ್ತರ ಕನ್ನಡ ಜಿಲ್ಲೆಯ ಶಿರಾಲಿ, ಚಿತ್ರಾಪುರ ಮಠದ ವಸ್ತುಸಂಗ್ರಹಾಲಯದಲ್ಲೂ ಒಂದು ಕಂಚಿನ `ಗಣೇಶಾನಿ’ ಪ್ರತಿಮೆಯಿದೆ. ಟಿಬೇಟಿನಲ್ಲಿಯೂ ವಿವಿಧೆಡೆಗಳಲ್ಲಿ ಗಣೇಶಾನಿ ಪ್ರತಿಮೆಗಳು ಕಾಣಸಿಗುತ್ತವೆ. ಶಿವನ ಶಕ್ತಿ `ಶಿವಾನಿ’ ಇದ್ದಂತೆ ಗಣೇಶನ ಶಕ್ತಿಯನ್ನು `ಗಣೇಶಾನಿ’ ಎಂದು ಜನರು ನಂಬಿರಬಹುದೆಂದು ಭಾವಿಸಲಾಗಿದೆ.

Be the first to comment