ಭಾರತದೊಂದಿಗೆ ವ್ಯಾಪಾರ ಸ್ಥಗಿತಗೊಳಿಸಿದ ಪಾಕ್ ಇದೀಗ ವಿಲವಿಲ ಒದ್ದಾಡುವಂತಾಗಿದೆ…

ಭಾರತೀಯರು ಶಾಂತಿ ಪ್ರಿಯರು! ಅವರನ್ನು ಕೆದಕಿದರೆ ಮಾತ್ರ ಸುಮ್ಮನಿರುವ ಜಾಯಮಾನದವರೇ ಅಲ್ಲ. ಯಾವಾಗ ಆರ್ಟಿಕಲ್ 370 ರದ್ದಾಯಿತೋ ಅಂದಿನಿಂದ ಪಾಕಿಸ್ತಾನದ ಹುಚ್ಚಾಟ ಸ್ವಲ್ಪ ಮಟ್ಟಿಗೆ ಜಾಸ್ತಿಯಾಗಿದೆ. ಭಾರತದ ಜೊತೆ ಪಾಕಿಸ್ತಾನ ಸವಾಲು ಹಾಕಿದರೆ ಸೋಲೋದು ಪಾಕಿಸ್ತಾನವೇ ಅನ್ನೋದು ಇಡೀ ಪ್ರಪಂಚಕ್ಕೆ ತಿಳಿದಿರುವ ವಿಚಾರ ಹಾಗೂ ಪಾಪಿ ರಾಷ್ಟ್ರ ಪಾಕಿಸ್ತಾನಕ್ಕೂ ಗೊತ್ತು. ಆದರೂ ಮತ್ತೆ ಮತ್ತೆ ಕಾಲುಕೆರೆದುಕೊಂಡು ಜಗಳಕ್ಕೆ ಬರುತ್ತಿರುತ್ತೆ! ಅದೊಂದು ಕಾಲವಿತ್ತು ಭಾರತ ವಿಶ್ವ ಹೇಳಿದ್ದನ್ನು ಕೇಳಬೇಕಿತ್ತು. ಆದರೆ ಈಗ ಮೋದಿ ಯುಗ.. ಈಗ ಭಾರತ ಹೇಳುತ್ತೆ ವಿಶ್ವ ಕೇಳುತ್ತೆ! ಅಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಭಾರತದ ವಿರೋಧ ಪಾಕಿಸ್ತಾನ ನಿಂತರೆ ವಿಶ್ವದ ಬಲಿಷ್ಟ ರಾಷ್ಟ್ರಗಳು ಪಾಕಿಸ್ತಾನಕ್ಕೆ ಛೀ ಥೂ ಅಂತಾ ಛೀಮಾರಿ ಹಾಕುತ್ತಲ್ಲದೆ ಈಗಾಗಲೇ ಪಾಕಿಸ್ತಾನವನ್ನು ಮೂಲೆಗುಂಪು ಮಾಡಿದೆ. ಭಾರತದೊಂದಿಗೆ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನೂ ಕಡಿತಗೊಳಿಸಿ ತನ್ನ ಹೊಟ್ಟೆಗೆ ತಾನೇ ಕಲ್ಲು ಹಾಕಿಕೊಂಡಿದೆ. ಅರ್ಟಿಕಲ್ 370 ರದ್ದಾಗುತ್ತಿದ್ದಂತೆ ಬೆಚ್ಚಿಬಿದ್ದ ಪಾಕಿಸ್ತಾನ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಮುರಿಯಿತು. ಇದರಿಂದ ಭಾರತಕ್ಕೆ ನಷ್ಟನೂ ಇಲ್ಲ ಲಾಭನೂ ಇಲ್ಲ… ತಾನು ತೊಡಿದ ಗುಂಡಿಗೆ ಪಾಕ್ ತಾನೇ ಬಿದ್ದಂತಾಗಿದ್ದು ಇದೀಗ ಭಾರತದ ಎದುರು ಭಿಕ್ಷೆ ಬೇಡುವ ಪರಿಸ್ಥಿತಿ ಬಂದೊದಗಿದೆ.

ಹೌದು… ಭಾರತದೊಂದಿಗಿನ ವಾಣಿಜ್ಯ ಸಂಬಂಧವನ್ನು ನಿಷೇಧಿಸಿದ್ದ ಪಾಕಿಸ್ತಾನದಲ್ಲಿ ಇದೀಗ ಅಗತ್ಯ ವಸ್ತುಗಳಿಗೆ ಹಾಹಾಕಾರ ಉಂಟಾಗಿದ್ದು, ತರಕಾರಿ ಮತ್ತು ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದರ ನಡುವೆ ಪಾಕಿಸ್ತಾನದಲ್ಲಿ ಜೀವ ರಕ್ಷಕ ಔಷಧಿಗಳ ಬೆಲೆಯೂ ಗಗನಕ್ಕೇರಿದ್ದು, ಔಷಧಿಗಳ ಕೊರತೆಯಿಂದಾಗಿ ಅಲ್ಲಿನ ಜನ ಸಂಕಷ್ಟಕ್ಕೀಡಾಗಿದ್ದಾರೆ.ಪ್ರಮುಖವಾಗಿ ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆಗಳಿಗೆ ಪಾಕಿಸ್ತಾನಕ್ಕೆ ಭಾರತದ ಮುಖಾಂತರವೇ ಔಷಧಿಗಳ ರವಾನೆಯಾಗುತ್ತಿತ್ತು. ಆದರೆ ಪಾಕಿಸ್ತಾನ ಸರ್ಕಾರ ವ್ಯಾಪಾರ ಸಂಬಂಧ ನಿಷೇಧಿಸಿ ಬೆನ್ನಲ್ಲೇ ಅಲ್ಲಿ ಔಷಧಿಗಳಿಗಾಗಿ ಹಾಹಾಕಾರ ಸೃಷ್ಟಿಯಾಗಿತ್ತು. ಇದೇ ಕಾರಣಕ್ಕೆ ಇದೀಗ ಪಾಕಿಸ್ತಾನ ಸರ್ಕಾರ ಜೀವ ರಕ್ಷಕ ಔಷಧಿಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿದೆ. ಪಾಕಿಸ್ತಾನದ ವಾಣಿಜ್ಯ ಸಚಿವಾಲಯ ನಿಷೇಧ ತೆರವುಗೊಳಿಸಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಪಾಕಿಸ್ತಾನಕ್ಕೆ ಸರಬರಾಜು ಆಗುವ ಒಟ್ಟಾರೆ ಔಷಧಿಗಳ ಪೈಕಿ ಶೇಕಡಾ 65ಕ್ಕೂ ಅಧಿಕ ಔಷಧಿಗಳು ಭಾರತದ ಮುಖಾಂತರವೇ ರಫ್ತಾಗುತ್ತದೆ.

ಹೀಗಾಗಿ ಭಿಕಾರಿ ರಾಷ್ಟ್ರದಲ್ಲಿ ತಿನ್ನೋಕೆ ಗತಿಯಿಲ್ಲದಿದ್ದರೂ ತನ್ನಿಂದಲೇ ಎಲ್ಲಾ ಎಂದು ಬೀಗಿ ಭಾರತದೊಂದೊಗಿನ ರಾಜತಾಂತ್ರಿಕ ಸಂಬಂಧ ಕಡಿತಗೊಳಿಸಿದ್ದಕ್ಕೆ ಇದೀಗ ತಕ್ಕ ಶಾಸ್ತಿಯಾಗಿದೆ. ಭಾರತೊಂದಿಗೆ ವ್ಯಾಪಾರ ಕೈ ಬಿಟ್ಟ ಮೇಲೆ ಪಾಕಿಸ್ತಾನದ ಪಾಡು ಹೇಳತೀರದಾಗಿದ್ದು ಪಾಕಿಸ್ತಾನಿಯರು ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವಂತಾಗಿದೆ. ಅದಕ್ಕೆ ಹೇಳೋದು ಹಿರಿಯರು ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚು ಅಂತಾ… ಭಾರತದ ವಿರುದ್ಧ ತನ್ನ ದರ್ಪ ತೋರಿಸಲು ಹೋಗಿ ಯಾವ ರೀತಿ ಇಂದು ಭಾರತದ ಮುಂದೆ ಬೇಡುವ ಪರಿಸ್ಥಿತಿ ಬಂತು ನೋಡಿ… ಯಾರೇ ಆಗಲಿ ಭಾರತ ವಿರೋಧ ನಿಂತರೆ ಮತ್ತೆ ಮಂಡಿಯೂರಲೇ ಬೇಕಾದ ಪರಿಸ್ಥಿತಿ ಬಂದೊದಗುತ್ತೆ!

Be the first to comment