ಭಾರತ ಎಂದಿಗೂ ಆಕ್ರಮಣಕಾರಿ ಮನೋಭಾವ ತೋರಿದ ಇತಿಹಾಸವಿಲ್ಲ! ಆದರೆ ದಾಳಿ ಮಾಡಿದ್ರೆ ಸುಮ್ಮನೆ ಬಿಡೋರೂ ಅಲ್ಲ… ಪಾಕ್ ಗೆ ಮತ್ತೆ ರಾಜ್‍ನಾಥ್ ಸಿಂಗ್ ಎಚ್ಚರಿಕೆ!

ಭಾರತ ಶಾಂತಿಯುತ ರಾಷ್ಟ್ರ… ಹಾಗಂದ ಮಾತ್ರಕ್ಕೆ ನಮ್ಮ ವಿರುದ್ಧ ದಾಳಿ ಮಾಡಿದರೂ ಸುಮ್ಮನೆ ಕೂರುವ ಜಾಯಮಾನದವರು ಭಾರತೀಯರಲ್ಲ. ನಮ್ಮ ವಿರುದ್ಧ ಹೊಂಚು ಹಾಕಿದ್ರೆ ಕೊನೆಗೆ ಸರ್ವನಾಶವಾಗೋದು ಶತ್ರು ರಾಷ್ಟ್ರ ಎಂಬುವುದಕ್ಕೆ ಈಗಾಗಲೇ ಹಲವು ನಿದರ್ಶನಗಳಿವೆ. ಅದೆಷ್ಟೋ ಬಲಿಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಹೆಸರಿದೆ ಎಂಬೂದನ್ನು ಮರೆತು ಪಾಕಿಸ್ತಾನದಂತಹ ಭಿಕಾರಿ ರಾಷ್ಟ್ರ ತಮಗೆ ಬೇಕಾದ ರೀತಿ ಮಾತುಗಳನ್ನಾಡುತ್ತಿವೆ. ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದು ಮಾಡಿದಾಗಿನಿಂದ ಭಾರೀ ಹಾರಾಡುತ್ತಿರುವ ಪಾಕಿಸ್ತಾನಕ್ಕೆ ಈಗಾಗಲೇ ಹಲವು ಬಾರಿ ಎಚ್ಚರಿಕೆಯನ್ನು ಭಾರತ ರವಾನಿಸಿದ್ರೂ ಪದೇ ಪದೇ ಟೊಳ್ಳು ಬೆದರಿಕೆಯನ್ನು ಹಾಕುತ್ತಿದೆ. ಭಾರತದ ಶಕ್ತಿ ಎಷ್ಟಿದೆ ಎಂಬುವುದನ್ನು ಮರೆತು ಪಾಪಿ ರಾಷ್ಟ್ರ ಪಾಕಿಸ್ತಾನ ಪದೇ ಪದೇ ತನ್ನ ಬಾಲ ಬಿಚ್ಚುತ್ತಿದೆ. ಯುದ್ಧಕ್ಕೇನಾದರೂ ಭಾರತ ನಿಂತರೆ ಪಾಕಿಸ್ತಾನ ಪಾಡೇನಾಗಬಹುದು ಎಂದು ಯಾರೂ ಊಹಿಸದ ರೀತಿ ಇರುತ್ತೆ! ಅಂದಿನಿಂದ ಇಂದಿನವರೆಗೂ ಭಾರತ ಯಾವತ್ತೂ ಸುಖಾಸುಮ್ಮನೆ ಯಾರ ವಿರುದ್ಧ ಯುದ್ಧ ಮಾಡಿದ ಇತಿಹಾಸವೇ ಇಲ್ಲ… ಆದ್ರೆ ತಂಟೆಗೆ ಬಂದವರನ್ನು ಸುಮ್ಮನೆ ಬಿಟ್ಟವರೂ ಅಲ್ಲ ಅಂತ ಇಡೀ ವಿಶ್ವಕ್ಕೆ ಗೊತ್ತಿರುವ ವಿಚಾರ ಅದನ್ನು ಪಾಕಿಸ್ತಾನ ಮರೆತಂತಿದೆ.

ದಕ್ಷಿಣ ಕೊರಿಯಾದ ಸಿಯೋಲ್‍ನಲ್ಲಿ ಆಯೋಜನೆಗೊಂಡಿರುವ ಸಿಯೋಲ್ ರಕ್ಷಣಾ ಸಮಾಲೋಚನೆ ಎಂಬ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡಿರುವ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಮತ್ತೊಮ್ಮೆ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಭಾರತದ ಇತಿಹಾಸವನ್ನು ಅವಲೋಕಿಸಿದರೆ ಅದು ಎಂದಿಗೂ ಆಕ್ರಮಣಕಾರಿ ಮನೋಭಾವ ತೋರಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಂದು, ನಮ್ಮ ಮೇಲೆ ಯಾರಾದರೂ ದಂಡೆತ್ತಿ ಬಂದರೆ ಪ್ರತೀದಾಳಿ ನಡೆಸಲು ಹಿಂದೆ ಮುಂದೆ ಆಲೋಚಿಸುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಹೌದು, ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಆಯೋಜನೆಗೊಂಡಿರುವ ಸಿಯೋಲ್ ರಕ್ಷಣಾ ಸಮಾಲೋಚನೆ ಎಂಬ ವಿಶೇಷ ಅಧಿವೇಶನದಲ್ಲಿ ಅವರು ಮಾತನಾಡಿದ್ದು ಭಾರತ ಯಾರ ಮೇಲೂ ಬಲಪ್ರಯೋಗಿಸಿದ ಉದಾಹರಣೆ ಅದರ ಇತಿಹಾಸದಲ್ಲಿ ಸಿಗುವುದಿಲ್ಲ. ಹಾಗೆಂದು ಯಾರಾದರೂ ಬಲಪ್ರಯೋಗಿಸಲು ಮುಂದಾದರೆ ತನ್ನ ಬಲವನ್ನು ಬಳಸಿಕೊಳ್ಳುವುದರಲ್ಲಿ ಅದು ಹಿಂದೆ ಬೀಳುವುದಿಲ್ಲ ಎಂದರು. ರಕ್ಷಣಾ ರಾಜತಾಂತ್ರಿಕತೆ, ಭಾರತದ ಪ್ರಮುಖವಾದ ವ್ಯೂಹಾತ್ಮಕ ಸಾಧನ ಎಂಬುದನ್ನು ಪ್ರತಿಪಾದಿಸುವ ಉದ್ದೇಶದಿಂದ ಜಾಗತಿಕವಾಗಿ ರಕ್ಷಣೆ ಮತ್ತು ಭದ್ರತಾ ಸಹಕಾರ ಹೆಚ್ಚಿಸಿಕೊಳ್ಳುವ ಗುರಿಯೊಂದಿಗೆ ರಾಜನಾಥ್ ಸಿಂಗ್ ಈ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಭಾರತದ ನೆರೆಹೊರೆಯವರು ಮೊದಲು ಎಂಬ ನೀತಿಯನ್ನು ಪ್ರಸ್ತಾಪಿಸಿದ ಅವರು, ಹಿಂದೂ ಮಹಾಸಾಗರ ರಿಮ್ ಸಂಘಟನೆ ಇಂಡಿಯನ್ ಓಷನ್ ರಿಮ್ ಅಸೋಸಿಯೇಷನ್- ಐಒಆರ್‍ಎ ಮತ್ತು ಬಂಗಾಳ ಕೊಲ್ಲಿಯಲ್ಲಿ ಬಹು ವಲಯದ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಬಿಮ್‍ಸ್ಟೆಕ್ ಅಲ್ಲದೆ ಸಮುದ್ರ ಮಾರ್ಗದಲ್ಲಿ ಹೆಚ್ಚಿನ ಭದ್ರತೆಗಾಗಿ ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಅನ್ನು ಒಳಗೊಂಡ ತ್ರಿಪಕ್ಷೀಯ ಸಹಕಾರ ಹೊಂದಿರುವ ಉದಾಹರಣೆಗಳನ್ನು ನೀಡಿದರು. ಭಾರತದ ಸಂಪ್ರದಾಯದಲ್ಲಿ ಅಡಕವಾಗಿರುವ ಗೌರವ, ಸಂವಾದ, ಸಹಯೋಗ, ಶಾಂತಿ ಮತ್ತು ಸಮೃದ್ಧಿ ಎಂಬ ಪಂಚಸೂತ್ರವನ್ನು ಆಧರಿಸಿ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿದರೆ ಭಾರತ ಮತ್ತು ಪೆಸಿಫಿಕ್ ವಲಯದಲ್ಲಿ ಎಲ್ಲರನ್ನೂ ಒಳಗೊಳಿಸಿಕೊಂಡು ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದು ಅದರ ಜೊತೆಗೆ ಶತ್ರು ರಾಷ್ಟ್ರಕ್ಕೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಪಾಕಿಸ್ತಾನ ತನ್ನ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಂಡು ಕುಳಿತುಕೊಂಡರೆ ಒಳಿತು. ಅದನ್ನು ಬಿಟ್ಟು ಮತ್ತೆ ತನ್ನ ಆಟ ಶುರು ಮಾಡಿದ್ರೆ ಭಾರತದ ಪರಾಕ್ರಮ ಎಂತಹುದ್ದು ಎಂಬುವುದು ಮತ್ತೆ ನೆನೆಪಿಸಬೇಕಾಗುತ್ತದೆ.

Be the first to comment