ರಷ್ಯಾ ಪ್ರವಾಸದಲ್ಲಿ ಪ್ರಧಾನಿ ಮೋದಿ… ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಡಾಲರ್ ಸಾಲ ನೀಡುವುದಾಗಿ ಘೋಷಿಸಿದ ಭಾರತ!

ಮೋದಿಜೀ ಅಧಿಕಾರವೇರಿದ ಮೇಲೆ ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಿದ್ದಲ್ಲದೆ ಇಡೀ ವಿಶ್ವವೇ ಭಾರತದ ಸ್ನೇಹ ಬಯಸಲು ನಾ ಮುಂದು ತಾ ಮುಂದು ಅಂತಾ ಹಾತೊರೆಯುತ್ತಿದೆ. ಯುಪಿಎ ಸರ್ಕಾರದ ಅಧಿಕಾರವಧಿಯಲ್ಲಿ ಭಾರತ ಸ್ಥಿತಿ ಅದೋಗತಿಯಲ್ಲಿತ್ತು. ಆದರೆ ಈಗ ಮೋದಿಜೀ ಅಧಿಕಾರವಧಿಯಲ್ಲಿ ಭಾರತದ ವಿಶ್ವದಲ್ಲೇ ರಾರಾಜಿಸುತ್ತಿದೆ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತಿದೆ. ಮೊದಲು ಬೇರೆ ದೇಶಗಳಿಂದ ಸಾಲ ಪಡೆಯುತ್ತಿದ್ದ ಭಾರತ ಇಂದು ಬೇರೆ ದೇಶಗಳಿಗೆ ಸಾಲ ನೀಡುತ್ತಿದೆ ಎಂದರೆ ಮೋದಿಜೀಯ ಆಡಳಿತ ಎಷ್ಟರ ಮಟ್ಟಿಗೆ ಇದೆ ಎಂಬುವುದನ್ನು ವಿವರಿಸಬೇಕಾಗಿಲ್ಲ…

ರಷ್ಯಾಕ್ಕೆ 1 ಬಿಲಿಯನ್ ಡಾಲರ್ ಸಾಲ ನೀಡಲಿದೆ ಭಾರತ!

ಹೌದು… ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಡಾಲರ್ ಸಾಲ ನೀಡುವುದಾಗಿ ಘೋಷಿಸಿದ್ದಾರೆ. 5 ನೇ ಈಸ್ಟರ್ನ್ ಎಕಾನಾಮಿಕ್ ಪೆÇೀರ್ಮ್ ನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ-ರಷ್ಯಾ ಸ್ನೇಹ ಕೇವಲ ಸರ್ಕಾರದ ಸಂವಹನ, ರಾಜಧಾನಿಗಳಿಗೆ ಸೀಮಿತವಾಗದೇ ಜನತೆ ಹಾಗೂ ಉದ್ಯಮಕ್ಕೂ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರೊಂದಿಗೆ ರಷ್ಯಾದ ಫಾರ್ ಈಸ್ಟ್ ಪ್ರದೇಶದೊಂದಿಗೆ ಭಾರತದ ಸಹಭಾಗಿತ್ವ ವೃದ್ಧಿಗೆ ಆಕ್ಟ್ ಫಾರ್ ಈಸ್ಟ್ ನೀತಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಫಾರ್ ಈಸ್ಟ್ ಅಭಿವೃದ್ಧಿಗೆ ಭಾರತ 1 ಬಿಲಿಯನ್ ಡಾಲರ್ ನೆರವು ನೀಡಲಿದೆ. ಭಾರತ ಸರ್ಕಾರ ಆಕ್ಟ್ ಈಸ್ಟ್ ಪಾಲಿಸಿಯಡಿಯಲ್ಲಿ ಸಕ್ರಿಯವಾಗಿ ಈಸ್ಟ್ ಏಷ್ಯಾದೊಂದಿಗೆ ಸಹಭಾಗಿತ್ವ ಹೊಂದಿದ್ದು, ಇದು ನಮ್ಮ ಆರ್ಥಿಕ ರಾಜತಾಂತ್ರಿಕತೆಗೆ ಹೊಸ ಆಯಾಮ ನೀಡಲಿದೆ ಎಂದು ಮೋದಿ ಹೇಳಿದ್ದಾರೆ. ರಷ್ಯಾದ ಫಾರ್ ಈಸ್ಟ್ ಪ್ರದೇಶಕ್ಕೆ ಭೇಟಿ ನೀಡಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

ನರೇಂದ್ರ ಮೋದಿ, ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರನ್ನು ನಿನ್ನೆ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು ಈ ವೇಳೆ ಉಭಯ ದೇಶಗಳ ನಡುವೆ ರಕ್ಷಣಾ ತಂತ್ರಜ್ಞಾನ ಸಹಕಾರ, ಇಂಧನ ಪೂರೈಕೆ ಸೇರಿದಂತೆ 15 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಪ್ರಮುಖವಾಗಿ ಭಾರತದ 20 ಕಡೆ ಅಣು ಸ್ಥಾವರ ಸ್ಥಾಪನೆ ಮಾಡುವ ಒಪ್ಪಂದಕ್ಕೆ ರಷ್ಯಾ ಸಹಿ ಹಾಕಿದ್ದು, ಇದಲ್ಲದೆ ರಕ್ಷಣೆ, ಶಿಕ್ಷಣ ಸೇರಿ 15 ಒಪ್ಪಂದಗಳು ಏರ್ಪಟ್ಟಿವೆ. ಮೋದಿಜೀಯ ಆಡಳಿತಕ್ಕೆ ಇಡೀ ವಿಶ್ವವೇ ಇಂದು ತಲೆಬಾಗುತ್ತಿದೆ ಎಂದರೆ ಇಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯರು…

Be the first to comment