ಸೋಫಾವನ್ನು ನಿರಾಕರಿಸಿ ಎಲ್ಲರೊಂದಿಗೆ ಕುರ್ಚಿಯಲ್ಲಿ ಕುಳಿತು ಸರಳತೆ ಮೆರೆದ ಮೋದಿಜೀ…

ಮೋದಿಜೀ ಸತತ ಎರಡನೇ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿ ಇಡೀ ಭಾರತವನ್ನು ಅಭಿವೃದ್ಧಿಪಡಿಸಿ ಇಡೀ ವಿಶ್ವದಲ್ಲೇ ರಾರಾಜಿಸುವಂತೆ ಮಾಡಿದ್ದಾರೆ. ಮೋದಿ ಎಂಬ ಎರಡಕ್ಷರದಲ್ಲಿ ಅದೇನೋ ಶಕ್ತಿ ಅಡಗಿದೆ. ಯಾಕೆಂದರೆ ಯಾವ ರಾಷ್ಟ್ರಕ್ಕೆ ಹೋದರೂ ಮೋದಿಜೀಯನ್ನು ಗೌರವಿಸುವ ಪರಿ ನಿಜಕ್ಕೂ ನಮಗೆ ಹೆಮ್ಮೆ ಅನಿಸುತ್ತೆ… ಇಡೀ ವಿಶ್ವ ಕೊಂಡಾಡುವ ಮೋದಿಜೀಯ ಸರಳತೆ ಮಾತ್ರ ಯಾವತ್ತೂ ಬದಲಾಗಲ್ಲ.

ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದಲ್ಲಿ ತನ್ನ ಸರಳತೆಯಿಂದ ಮತ್ತೆ ಗಮನ ಸೆಳೆದಿದ್ದಾರೆ. ಫೆÇೀಟೋಶೂಟ್ ನಲ್ಲಿ ತನಗಾಗಿ ಇರಿಸಲಾಗಿದ್ದ ವಿಶೇಷ ಸೋಫಾವನ್ನು ನಿರಾಕರಿಸಿ ಮಾಮೂಲಿ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಹೌದು… ರಷ್ಯಾ ಪ್ರವಾಸದಲ್ಲಿರುವ ಮೋದಿಜೀಗಾಗಿ ವಿಶೇಷ ಆಸನವನ್ನು ರೆಡಿ ಮಾಡಿದ್ದರು. ಆದರೆ ತಮಗಾಗಿ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ಆಸನವನ್ನು ನಿರಾಕರಿಸಿ, ಇತರರೊಂದಿಗೆ ಸಾಮಾನ್ಯ ಕುರ್ಚಿಯಲ್ಲಿ ಕುಳಿತುಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಮೋದಿಯವರ ಸರಳತೆಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವರು ಮೋದಿಯವರ ಸರಳತೆಯನ್ನು ಶ್ಲಾಘಿಸಿದ್ದಾರೆ.

ರಷ್ಯಾದ ವ್ಲಾಡಿವೋಸ್ಟಾಕ್’ನಲ್ಲಿ ನಡೆದ ಫೆÇೀಟೋ ಸೆಷನ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದುಬಾರಿ ಸೋಫಾವನ್ನು ನಿರಾಕರಿಸಿ, ಕುರ್ಚಿಯಲ್ಲಿ ಕುಳಿತುಕೊಂಡು ಸರಳತೆಗೆ ಉದಾಹರಣೆಯಾಗಿದ್ದಾರೆ. ಫೆÇೀಟೋ ಸೆಷನ್ ನಲ್ಲಿ ಪ್ರಧಾನಿ ಮೋದಿಯವರು ದುಬಾರಿಯಾದ ಹಾಗೂ ವಿಶಾಲವಾದ ಸೋಫಾವನ್ನು ನಿರಾಕರಿಸಿ ಕುರ್ಚಿಯಲ್ಲಿ ಕುಳಿತುಕೊಂಡದ್ದನ್ನು ನೋಡಿದ ಇತರೆ ಅಧಿಕಾರಿಗಳು ತಾವೂ ಕೂಡ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಮೋದಿಯವರ ಈ ಸರಳತೆಯ ಮನಸ್ಥಿತಿಯನ್ನು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆ ಟ್ವಿಟರ್ ನಲ್ಲಿ ಹೆಂಚಿಕೊಂಡಿದ್ದಾರೆ.

Be the first to comment