ನಿಮ್ಮೊಂದಿಗೆ ಇಡೀ ದೇಶವಿದೆ… ಹತಾಶರಾಗಬೇಡಿ! ಇಸ್ರೋ ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ ಮೋದಿ…

ಚಂದ್ರನ ಮೇಲೆ ಸುರಕ್ಷಿತ ಲ್ಯಾಂಡ್ ಆದ ವಿಶ್ವದ ನಾಲ್ಕನೇ ದೇಶ ಎಂಬುದರ ಜತೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆದ ಹಾಗೂ ಮೊದಲ ಪ್ರಯತ್ನದಲ್ಲೇ ಚಂದ್ರಯಾನ ಯಶಸ್ವಿಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿತ್ತು. ಆದರೆ ಕೊನೆಯ ಹಂತದಲ್ಲಿ ಲ್ಯಾಂಡರ್ ಸುರಕ್ಷಿತವಾಗಿ ಇಳಿಯಲು ಸಾಧ್ಯವಾಗದಿರುವುದರಿಂದ ಇಸ್ರೋ ವಿಜ್ಞಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಸೋಲೇ ಗೆಲುವಿನ ಸೋಪಾನ ಎನ್ನುವ ಮಾತಿದೆ. ಉನ್ನತ ಗುರಿಯ ಬೆನ್ನೇರಿ ಹೊರಟಾಗ ಏಳುಬೀಳುಗಳನ್ನು ಅನುಭವಿಸುವುದು ಸಹಜ. ಸಾಧನೆಯ ಹಾದಿಯಲ್ಲಿ ಕಷ್ಟಗಳನ್ನು ಎದುರಿಸಿದಾಗಲೇ ಮುಂದೆ ಬರುವ ಸಂದರ್ಭಗಳನ್ನು ಧೈರ್ಯವಾಗಿ ಎದುರಿಸಲು ಸಾಧ್ಯ! ಅದರಂತೆ ಖಂಡಿತವಾಗಿ ಮುಂದೆ ಚಂದ್ರಯಾನ-2 ಯಶಸ್ವಿಯಾಗುತ್ತೆ ಎಂಬುವುದು ಇಡೀ ಭಾರತೀಯರಿಗೆ ನಂಬಿಕೆಯಿದೆ.

ಚಂದ್ರನ ಅಂಗಳದ ಮೇಲೆ ಲ್ಯಾಂಡರ್’ನ್ನು ಇಳಿಸುವ ಕೊನೆಯ 15 ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ ಕಡಿದುಕೊಂಡಿತು. ಈ ವೇಳೆ ಇಸ್ರೋ ಕೇಂದ್ರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಸಿಗ್ನಲ್ ಗಾಗಿ ಕೆಲ ಹೊತ್ತು ನಿರೀಕ್ಷಿಸಲಾಯಿತು. ಆದರೆ, ಯಾವುದೇ ಧನಾತ್ಮಕ ಫಲ ಸಿಗಲಿಲ್ಲ. ಕೊನೆಗೆ ಇಸ್ರೋ ಅಧ್ಯಕ್ಷ ಶಿವನ್ ಅವರು ಲ್ಯಾಂಡರ್ 2.1 ಕಿಮೀವರೆಗೆ ಸುಸೂತ್ರವಾಗಿ ಕೆಲಸ ಮಾಡಿದೆ. ಆ ನಂತರ ಸಿಗ್ನಲ್ ಕಡಿತಗೊಂಡಿದೆ. ಇದರ ಡೇಟಾವನ್ನು ವಿಶ್ಲೇಷಣೆ ಮಾಡುತ್ತೇವೆಂದು ಘೋಷಣೆ ಮಾಡಿದರು. ಆ ಕೊನೆ ಕ್ಷಣ ಮಾತ್ರ ವಿಜ್ಞಾನಿಗಳಲ್ಲಿ ಹತಾಶೆಯನ್ನು ತಂದಿತ್ತು…

ಭಾವುಕರಾಗಬೇಡಿ… ನಿಮ್ಮೊಂದಿಗೆ ನಾವಿದ್ದೇವೆ!!

ಮೋದಿಜೀಯನ್ನು ಇಡೀ ದೇಶ ಯಾಕೆ ಇಷ್ಟ ಪಡುತ್ತೆ ಅಂದರೆ ಇದಕ್ಕೇ ನೋಡಿ… ಗೆದ್ದಾಗಲೂ ಬೆನ್ನುತಟ್ಟುತ್ತಾರೆ…ಸೋತಾಗಲೂ ಅವರನ್ನು ಸಂತೈಸಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆ ಕೊಡುವ ಪ್ರಧಾನಿ ಅಂದರೆ ಇವರೇ.. ಇಂತಹ ಪ್ರಧಾನಿ ನಮ್ಮ ಜೊತೆ ಇರಬೇಕಾದರೆ ನಮಗೆ ಯಾವ ಕೆಲಸ ಮಾಡಲೂ ಹಿಂಜರಿಕೆ ಬರಲು ಸಾಧ್ಯವಿಲ್ಲ. ಚಂದ್ರಯಾನ 2 ವೀಕ್ಷಣೆಗೆ ನಿನ್ನೆ ತಡರಾತ್ರಿ ತನಕ ಕಾದು ಕುಳಿತಿದ್ದರು ಮೋದಿ…ಆದರೆ ಲ್ಯಾಂಡರ್ ನೌಕೆ ಸಂಪರ್ಕ ಕಡಿದುಕೊಂಡಾಗ ಹಿಗ್ಗದೆ ಮೋದಿಜೀ ಎಲ್ಲಾ ಇಸ್ರೋ ವಿಜ್ಞಾನಿಗಳಿಗೆ ಆತ್ಮಸ್ಥೈರ್ಯವನ್ನು ತುಂಬಿದರು. ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ, ಹತಾಶರಾಗಬೇಡಿ. ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಭಾರತವಿದೆ ಎಂದು ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆತ್ಮಸ್ಥೈರ್ಯ ತುಂಬಿದ್ದಾರೆ. ನಗರದಲ್ಲಿರುವ ಇಸ್ರೋ ಕಂಟ್ರೋಲ್ ಸೆಂಟರ್ ನಲ್ಲಿ ದೇಶವನ್ನುದ್ದೇಶಿಸಿ ಇಂದು ಮಾತನಾಡಿದ ಪ್ರಧಾನಿ ಮೋದಿಯವರು ಇಸ್ರೋ ವಿಜ್ಞಾನಿಗಳ ಕಾರ್ಯಕ್ಷಮತೆಯನ್ನು ಹಾಗೂ ಪರಿಶ್ರಮವನ್ನು ಕೊಂಡಾದಿದ್ದಾರೆ. ನಿಮ್ಮ ಪ್ರಯತ್ನವನ್ನು ಇಡೀ ಭಾರತವೇ ಕೊಂಡಾಡುತ್ತಿದೆ. ಅಡೆತಡೆಗಳಿಂದ ನಮ್ಮ ಉತ್ಸಾಹವೇನೂ ಕಡಿಮೆಯಾಗಲಿಲ್ಲ. ಬದಲಾಗಿ ಹೆಚ್ಚಾಗಿದೆ. ದೇಶದ ಪ್ರಗತಿಗೆ ಅತ್ಯಂತ ದೊಡ್ಡ ಕೊಡುಗೆಯನ್ನು ನೀಡಿದ್ದೀರ ಎಂದು ಹೇಳಿದ್ದಾರೆ.

ಇಸ್ರೋ ಅಧ್ಯಕ್ಷ ಸಿವನ್ ಅವರನ್ನು ಸಂತೈಸಿದ ಮೋದಿ!

ರಾತ್ರಿ ಹಗಲೆನ್ನದೆ ಚಂದ್ರಯಾನ 2 ಗಾಗಿ ಅದೆಷ್ಟೋ ವಿಜಾನಿಗಳು ಪರಿಶ್ರಮ ಪಟ್ಟಿದ್ದಾರೆ. ಇನ್ನೇನೂ ಗೆಲುವಿನ ಮೆಟ್ಟಿಲೇರಲು ಒಂದೇ ಒಂದು ಹೆಜ್ಜೆ ಅಂದಿರಬೇಕಾದರೆ ನಿರಾಸೆ ಯಾಯಿತು. ಯಾವುದೇ ಕೆಲಸ ಮಾಡಬೇಕಾದರೂ ಸ್ವಲ್ಪ ಅಡೆತಡೆಗಳು ಬಂದೇ ಬರುತ್ತದೆ ಅದನ್ನು ನಾವು ದಾಟಿ ಮುಂದೆ ಬಂದು ಜಯಿಸುವುದೇ ನಿಜವಾದ ಜಯ! ಅಲ್ಲಿ ಕಲಿಯುವ ಪಾಠ ಜೀವನದುದ್ದಕ್ಕೂ ನೆನಪಿರುತ್ತೆ! ಚಂದ್ರಯಾನ-2ಗೆ ಹಿನ್ನಡೆಯುಂಟಾದ ಹಿನ್ನಲೆಯಲ್ಲಿ ಭಾವುಕರಾಗಿದ್ದ ಇಸ್ರೋ ಮುಖ್ಯಸ್ಥ ಸಿವನ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಲಂಗಿಸಿ, ಸಂತೈಸಿದ್ದಾರೆ. ಇಸ್ರೋ ಸಾಧನೆ ಕುರಿತಂತೆ ಇಂದು ಬೆಳಿಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಗರದ ಇಸ್ರೋ ಕಂಟ್ರೋಲ್ ಸೆಂಟರ್ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದು, ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದಾರೆ. ಭಾಷಣ ಪೂರ್ಣಗೊಂಡ ಬಳಿಕ ಭಾವುಕರಾಗಿದ್ದ ಸಿವನ್ ಅವರನ್ನು ಪ್ರಧಾನಿ ಮೋದಿಯವರು ಆಲಂಗಿಸಿ, ಸಂತೈಸಿದ್ದಾರೆ.

Be the first to comment