ಆ ಒಂದು ಘನಘೋರ ಯುದ್ಧದಲ್ಲಿ ಮೊಘಲರನ್ನು 150 ವರ್ಷಗಳ ಕಾಲ ಭಾರತದತ್ತ ಮುಖ ಮಾಡದಂತೆ ಮಾಡಿದ್ದರು ರಜಪೂತರು…

ಭಾರತೀಯರ ದುರಾದೃಷ್ಟ ನೋಡಿ ಸಾವಿರಾರು ವರ್ಷಗಳ ಹಿಂದೆ ಅನೇಕ ಆವಿಷ್ಕಾರವನ್ನು ಮಾಡಿದರೂ ಪ್ರಪಂಚಕ್ಕೆ ಮಾತ್ರ ಭಾರತೀಯರ ಹೆಸರು ಪರಿಚಿತವಾಗದೆ ಅದ್ಯಾವುದೋ ವಿದೇಶಿಗನ ಹೆಸರು ಹೇಳ್ತಾ ಬರುತ್ತಾರೆ. ಅದಕ್ಕೆ ಭಾರತೀಯರನ್ನು ಮುಗ್ಥರು ಅನ್ನೋದು.. ಅದೊಂದು ಕತೆಯಾದರೆ ಇನ್ನೊಂದು ಕತೆ ಅದೆಷ್ಟೋ ಮಹತ್ವಪೂರ್ಣ ಯುದ್ಧಗಳಲ್ಲಿ ಭಾರತ ಗೆದ್ದರೂ ಅದನ್ನೇ ಇತಿಹಾಸ ಮರೆಮಾಚುತ್ತೆ.. ಇದೆಲ್ಲಾ ನಿಜಕ್ಕೂ ಅಚ್ಚರಿ ಜೊತೆಗೆ ಅನುಮಾನ ಸೃಷ್ಟಿಸುತ್ತೆ ಅಲ್ಲವೆ?! ಕೆಲವು ಮಹತ್ವಪೂರ್ಣ ಯುದ್ಧಗಳನ್ನು ಇತಿಹಾಸ ಮರೆಮಾಚಿದೆ. ಯುದ್ಧದಲ್ಲಿ ಅತ್ಯಂತ ವೀರ ಪರಾಕ್ರಮಿಯಾಗಿ ಹೋರಾಟ ಮಾಡಿ ವಿಜಯಶಾಲಿಯಾದ ಭಾರತೀಯರನ್ನು ಇತಿಹಾಸದ ಕೆಲವೊಂದು ಭಾಗಗಳನ್ನು ಅಳಿಸಿಹಾಕಿರುವುದು ಅನುಮಾನಗಳಿಗೆ ಕಾರಣವಾಗ್ತಿದೆ. ಇಂತಹ ಸಾಲಿನಲ್ಲಿ ಭಾರತ ಸಾಕ್ಷಿಯಾಗಿದ್ದ ಒಂದು ಪ್ರಮುಖ ಘಟನೆ ಬಹ್ರೈಚ್ ಯುದ್ಧ.

ರಜಪೂತರು ಹಾಗೂ ಮೊಘಲರ ನಡುವೆ ನಡೆದಿತ್ತು ಆ ಘನಘೋರ ಯುದ್ಧ!!

ರಜಪೂತರು ಮತ್ತು ಮೊಘಲರ ನಡೆದ ಈ ಬಹ್ರೈಚ್ ಯುದ್ದ 1033 ಜುಲೈ ತಿಂಗಳಲ್ಲಿ ಆರಂಭವಾಗಿತ್ತು. ಈ ಯುದ್ಧದಲ್ಲಿ ಮೊಘಲರು ಹೀನಾಯ ಸೋಲನ್ನು ಕಂಡು ಈ ಯುದ್ಧದಲ್ಲಿ ಆದ ನಷ್ಟದಿಂದಾಗಿ ಭಾರತದತ್ತ ಮುಖ ಮಾಡಲು ಮೊಘಲರಿಗೆ ಸುಮಾರು 150 ವರ್ಷಗಳೇ ಆಗಬೇಕಾಯಿತು!! ಅಷ್ಟು ಘೋರವಾಗಿತ್ತು ಆ ಯುದ್ಧ. ಅದಲ್ಲದೆ ಆ ಯುದ್ಧದಲ್ಲಿ ಅನುಭವಿಸಿದ ನಷ್ಟ ಕೂಡಾ ಹೇಳತೀರದು.

1026ರಲ್ಲಿ ಘಜ್ನಿ ಮೊಹಮ್ಮದ್ ಭಾರತದ ಗುಜರಾತ್ ಪ್ರದೇಶಕ್ಕೆ ದಂಡೆತ್ತಿ ಬಂದು ಪ್ರಸಿದ್ಧ ಸೋಮನಾಥ ದೇವಾಲಯವನ್ನು ಕೆಡವಿದ ನಂತರ ಹಿಂದುರಿಗಿದನು. ಅದನ್ನೆಲ್ಲಾ 11 ನೇ ವಯಸ್ಸಿನ ಸೋದರಳಿಯ ಸೈಯದ್ ಸಲಾರ್ ಮಸೂದ್ ಅವನ ಈ ಕಾರ್ಯವನ್ನು ನೋಡಲ್ಪಟ್ಟು ಸೋಮನಾಥ ದೇವಸ್ಥಾನದ ಉರುಳುವಿಕೆ ಮತ್ತು ದರೋಡೆ ಮಾಡುವ ವಿಚಾರವೊಂದು ಸೈಯದ್ ಸಲಾರ್ ಮಸೂದ್ ಅವನ ತಲೆಯಲ್ಲಿ ದೊಡ್ಡ ವಿಚಾರಗಳನ್ನು ಪ್ರಚೋದಿಸಿತು. ಆಗಾಗಲೇ ಅವರಿಗೆ ತಿಳಿದಿತ್ತು ಭಾರತ ಒಂದು ಸಂಪದ್ಭರಿತ ದೇಶವೆಂದು. ಗುಜರಾತ್‍ನ ಸೋಮನಾಥ ದೇವಾಲಯದಲ್ಲಿ ಹೆಚ್ಚಿನ ಪ್ರಮಾಣದ ಸಂಪತ್ತು ಇರುವುದನ್ನು ಗಮನಿಸಿದ ಇವನು ಸೋಮನಾಥ ದೇವಾಲಯದ ಮೇಲೆ ಕಣ್ಣು ಹಾಕುತ್ತಾನೆ.

ಸಂಪತ್ತನ್ನು ಕೊಳ್ಳೆ ಹೊಡೆಯುವ ಉಪಾಯವಲ್ಲದೆ ಮತಾಂತರ ಮಾಡುವುದೇ ಮೊಘಲರ ಮುಖ್ಯ ಉದ್ಧೇಶವಾಗಿತ್ತು.

ಕೇವಲ ಸಂಪತ್ತನ್ನು ಕೊಳ್ಳೆ ಹೊಡೆಯುವುದು ಮಾತ್ರವಲ್ಲದೆ ಈತನ ಯೋಜನೆಯು ಭಾರತವನ್ನು ಮುಸ್ಲಿಮ್ ರಾಷ್ಟ್ರವಾಗಿ ಪರಿವರ್ತಿಸುವುದು ಆಗಿತ್ತು. ಸೈಯಾದ್ ಸಲಾರ್ ಮಸೂದ್‍ನನ್ನು 1030ರಲ್ಲಿ ಘಜ್ನಿಯವರ ಮರಣದ ಭಾರತವನ್ನು ಆಕ್ರಮಣ ಮಾಡಲು ಹೊಂಚುಹಾಕುತ್ತಾನೆ. ಕೇವಲ 19 ವರ್ಷದ ಹದಿಹರೆಯದವನಾಗಿದ್ದರೂ 10,000 ಸೈನಿಕರ ಬೃಹತ್ ಸೈನ್ಯವನ್ನು ಕಟ್ಟುತ್ತಾನೆ. ಭಾರತಕ್ಕೆ ಲಗ್ಗೆ ಇಟ್ಟೆ ಬಿಡುತ್ತಾನೆ. ಅವನ ಪಟ್ಟುಬಿಡದ ಆಕ್ರಮಣವು ಭಾರತೀಯ ಆಡಳಿತಗಾರರ ಮೇಲೆ ಗಮನಾರ್ಹ ಪ್ರಭಾವ ಬೀರಿತು. ಹೆಚ್ಚಿನವರು ರಾಜರುಗಳು ಈತನನ್ನು ತಡೆಯಲು ಅಥವಾ ವಿರೋಧಿಸಲು ವಿಫಲರಾಗುತ್ತಾರೆ. ಸೈಯದ್ ಸಲಾರ್ ಮಸೂದ್ ಆಕ್ರಮಿಸಿದ ಭೂಮಿಯನ್ನು ಲೂಟಿ ಮಾಡಿದ್ದಲ್ಲದೆ ಸ್ಥಳೀಯ ಆಡಳಿತಗಾರರನ್ನು ಇಸ್ಲಾಮ್‍ಗೆ ಪರಿವರ್ತಿಸುವಲ್ಲಿ ಯಶಸ್ವಿಯಾಗುತ್ತಾನೆ!!

ಅದೇ ಸಮಯದಲ್ಲಿ ರಾಜಾ ಸುಖದೇವ್ ಅಥವಾ ಸುಹಲ್ದೇವ್ ಎಂದು ಪ್ರಸಿದ್ಧರಾಗಿರುವವರು ಶ್ರವಸ್ತಿ ಎಂಬ ರಾಜ್ಯವನ್ನು ಆಳುತ್ತಿದ್ದನು. 17 ರಜಪೂತ ರಾಜರುಗಳು ರಾಜಾ ಸುಖದೇವ್ ಅಥವಾ ಸುಹಲ್ದೇವ್ ಎಂಬ ರಾಜನ ಕೈ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಯ್ಯದ್ ಸಲಾರ್ ಮಸೂದ್‍ಗಿಂತ ರಾಜ ಸುಖದೇವ್ ದೊಡ್ಡ ಸೈನ್ಯವನ್ನು ಹೊಂದಿದ್ದನಲ್ಲದೆ ಅವರ ಸೈನ್ಯದಲ್ಲಿ ಕುದುರೆಗಳು, ಆನೆಗಳು ಮತ್ತಿತರ ಯುದ್ಧಕ್ಕೆ ಅನುಕೂಲವಾಗುವಂತಹ ಎಲ್ಲಾ ವ್ಯವಸ್ಥೆಯನ್ನು ಹೊಂದಿದ್ದನು.

ಸುಖದೇವ್ ಸೈನ್ಯದ ಬಗ್ಗೆ ಅಥವಾ ರಾಜ ಸುಖದೇವ್‍ನ ಬಗ್ಗೆ ತಿಳಿದುಕೊಳ್ಳದ ಸೈಯದ್ ಸಲಾರ್ ಮಸೂದ್ ಅವರ ವಿಜಯದ ಮೆರವಣಿಗೆಯನ್ನು ಮುಂದುವರಿಸಿ ಸತ್ರಿಕ್ ಅಂದರೆ ಈಗಿನ ಯುಪಿ ಯನ್ನು ತಲುಪುತ್ತಾನೆ. ಅಲ್ಲಿ ಈತ ಶಿಬಿರವನ್ನು ಸ್ಥಾಪಿಸಿ ಆ ಸ್ಥಳವನ್ನು ತನ್ನ ರಾಜಧಾನಿ ಎಂದು ಕರೆದನು. ಆತ ಭಾರತದಲ್ಲಿ ಯಾವುದೇ ರಾಜನು ತನ್ನಲ್ಲಿರುವಷ್ಟು ಸೈನ್ಯವನ್ನು ಯಾರೂ ಹೊಂದಿಲ್ಲ ಎಂಬ ಅಗಾಧ ನಂಬಿಕೆ ತನ್ನಲ್ಲಿಟ್ಟುಕೊಂಡಿದ್ದನು. ಅದಲ್ಲದೆ ಇಲ್ಲಿನ ಹಿಂದುಗಳನ್ನು ಸುಲಭವಾಗಿ ಇಸ್ಲಾಮ್ ಧರ್ಮಕ್ಕೆ ಪರಿವರ್ತಿಸಬಹುದು ಎಂದು ತಿಳಿದುಕೊಂಡು ಬಾರೀ ಖುಷಿಯಲ್ಲಿದ್ದನು.

ಯಾಕೆಂದರೆ ಭಾರತೀಯ ಹಿಂದೂಗಳಲ್ಲೇ ಪರಸ್ಪರ ಹೊಂದಾಣಿಕೆ ಇಲ್ಲದಿರುವುದನ್ನು ಮನಗಂಡಿದ್ದನು. ತನ್ನ ಮನಸ್ಸಿನಲ್ಲಿ ಇದೇ ಊಹೆಗಳೊಂದಿಗೆ ಸೈಯ್ಯದ್ ಸಲಾರ್ ಮಸೂದ್ ಸಂದೇಶವನ್ನು ಬಹ್ರೈಚ್‍ಗೆ ಕಳುಹಿಸಿದನು. (ಇದು ಯುಪಿಯ ಒಂದು ಭಾಗ ಈಗ ಲಕ್ನೊ ಆಗಿದೆ) ಅಲ್ಲಿನ ರಾಜನನ್ನು ಶರಣಾಗುವಂತೆ ಸಂದೇಶದಲ್ಲಿ ಬರೆದಿದ್ದನು. ರಜಪೂತ ರಾಜರಿಂದ ಈ ಸಂದೇಶ ವಾಹಕವನ್ನು ಬಹ್ರೈಚ್‍ನಿಂದ ಹೊರಹಾಕಲಾಯಿತು. ಹಿಂದೂ ದೊರೆಗಳಿಗೆ ಐಕ್ಯತೆ ಇಲ್ಲ ಎಂಬ ಪೂರ್ವಕಲ್ಪನೆಯು ರಾಜ ಸುಖದೇವ್ ಅವರ ಅಡಿಯಲ್ಲಿ ಸೇವೆ ಸಲ್ಲಿಸಿದ ಶ್ರಾವಸ್ತಿಯ ಏಕೈಕ ರಜಪೂತ ಆಡಳಿತಗಾರರಿಂದ ಅದನ್ನು ತಳ್ಳಿ ಹಾಕುತ್ತಾರೆ. ರಜಪೂತ ದೊರೆಗಳು ಹೇಗೆ ಶೌರ್ಯ, ಸಾಹಸ, ಒಗ್ಗಟ್ಟಿಗೆ ಹೆಸರುವಾಸಿ ಎಂಬುವುದನ್ನು ಅವರು ಮತ್ತೊಮ್ಮೆ ಬಹ್ರೈಚ್ ಯುದ್ಧದಲ್ಲಿ ತೋರಿಸಿ ಕೊಡುತ್ತಾರೆ.

ತನ್ನ ಸೈನ್ಯನೇ ದೊಡ್ಡದು ಅಂತಾ ಬೀಗಿದ್ದದವನಿಗೆ ರಜಪೂತರ ಸೈನಿಕರನ್ನು ಕಂಡು ದಂಗಾಗಿದ್ದ!!

ತಾನೇನು ಮನದಲ್ಲಿ ಅಂದುಕೊಂಡಿದ್ದನೋ ಅದೆಲ್ಲಾ ಸೈಯದ್ ಸಲಾರ್ ಮಸೂದ್‍ಗೆ ಉಲ್ಟಾ ಆಗಿತ್ತು. ಸೈಯದ್ ಸಲಾರ್ ಮಸೂದ್ ತನ್ನ 10,000 ಸೈನ್ಯದೊಂದಿಗೆ ಸತ್ರಿಕ್‍ನ ರಾಜನನ್ನು ಆಕ್ರಮಿಸಲು ಬಂದಾಗ ಅವನಿಗೆ ದೊಡ್ಡ ಆಘಾತವೊಂದು ಎದುರಾಗುತ್ತದೆ. ಇಲ್ಲಿ ನೋಡಿದರೆ ಸುಖದೇವ್‍ನ ಸೈನ್ಯ 1,20000 ಬಲಾಡ್ಯ ಸೈನಿಕರನ್ನು ಹೊಂದಿದ್ದರು!! ರಜಪೂತರು ನಿಷ್ಠೆಯಿಂದ ಸುಖದೇವ್ ಜೊತೆ ಸೇರಿಕೊಂಡು ಸೈಯ್ಯದ್‍ನ ಸೈನ್ಯವನ್ನು ಛಿದ್ರಗೊಳಿಸುತ್ತಾರೆ. ಯಾವಾಗ ಹಿಂದೂ ರಾಜರುಗಳಲ್ಲಿ ಐಕ್ಯತೆ ಇಲ್ಲ ಎಂದು ಬೀಗಿದ್ದ ಸಯ್ಯದ್‍ಗೆ ಹಿಂದೂ ರಾಜರು ಸರಿಯಾಗಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿ ಮತ್ತು ಅವನ ಜುಜಿಬಿ 10,000 ಸಾವಿರ ಸೈನ್ಯವನ್ನು ಭಾರತದಿಂದ ಅಟ್ಟಾಡಿಸಿ ಓಡಿಸುತ್ತಾರೆ. ಈ ಯುದ್ಧದಲ್ಲಿ ಮೊಘಲರು ಹೀನಾಯ ಸೋಲನ್ನು ಕಂಡು ಈ ಯುದ್ಧದಲ್ಲಿ ಆದ ನಷ್ಟದಿಂದಾಗಿ ಭಾರತದತ್ತ ಮುಖ ಮಾಡಲು ಮೊಘಲರಿಗೆ ಸುಮಾರು 150 ವರ್ಷಗಳೇ ಆಗಬೇಕಾಯಿತು. ಅಷ್ಟು ಘೋರವಾಗಿತ್ತು ಆ ಯುದ್ಧ. ಅದಲ್ಲದೆ ಆ ಯುದ್ಧದಲ್ಲಿ ಅನುಭವಿಸಿದ ನಷ್ಟ ಕೂಡಾ ಹೇಳತೀರದು.

ಸೈಯ್ಯದ್ ಹಿಂದೂ ದೇವಾಲಯಗಳನ್ನು ನಾಶ ಮಾಡಿದ್ದಲ್ಲದೆ ಹಿಂದೂಗಳನ್ನು ಬಲವಾದ ಪರಿವರ್ತನೆಗಳನ್ನು ಬಹ್ರೈಚ್ ಯದ್ಧ ಭೂಮಿಯಲ್ಲಿ ರಜಪೂತರು ಹೊರತಂದರು. ಸೈಯ್ಯದ್ ಸಲಾರ್ ಮಸೂದ್‍ನನ್ನು ರಾಜ ಸುಖದೇವ್ ಸ್ವತಃ ತಳ್ಳಿ ಹಾಕಿದರು. ಬಹ್ರೈಚ್ ಯುದ್ಧದಲ್ಲಿ ರಜಪೂತರ ಅದ್ಧುತ ವಿಜಯಕ್ಕಾಗಿ ಪ್ರಶಂಸಿಸಲಾಯಿತು. ಆದರೆ ದುಃಖದಿಂದ ಹೇಳುವುದಾದರೆ ಇಂತಹ ವಿಚಾರಗಳು ನಮ್ಮ ಪಠ್ಯ ಪುಸ್ತಕದಲ್ಲಿ ಕಾಣೆಯಾಗಿವೆ. ಇತಿಹಾಸ ಇದನ್ನು ಪ್ರಸ್ತುತ ಜನರಿಗೆ ತಿಳಿಸಲು ಮುಂದಾಗುತ್ತಿಲ್ಲ. ಇಂತಹ ಘೋರ ಯುದ್ಧದಲ್ಲಿ ಹಿಂದೂ ರಾಜರುಗಳು ವಿಜಯಶಾಲಿಯಾದರೆ ಯಾಕೆ ಇತಿಹಾಸ ಮರೆಮಾಚುತ್ತದೆ ಎಂಬುವುದಕ್ಕೆ ಎಲ್ಲರಿಗೂ ಅನುಮಾನ ಕಾಡುತ್ತಿದೆ.

Be the first to comment