ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಕಂಪನಿಗಳಿಗೆ ನಾವು ಬೆಂಬಲಿಸಲ್ಲ ಎಂದು ಭಾರತಕ್ಕೆ ಭರವಸೆ ನೀಡಿದ ದಕ್ಷಿಣ ಕೊರಿಯಾ…

ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಪ್ರಸ್ತುತ ದಕ್ಷಿಣ ಕೊರಿಯಾ ಹಾಗೂ ಜಪಾನ್ ಪ್ರವಾಸದಲ್ಲಿದ್ದಾರೆ. ದಕ್ಷಿಣ ಕೊರಿಯಾದ ಪ್ರಧಾನಿ ಲೀ-ನಕ್-ಯೋನ್ ರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ದೇಶದ ಕಂಪನಿಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಭಾರತಕ್ಕೆ ಭರವಸೆ ನೀಡಿದೆ. ಹೌದು… ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ದೇಶದ ಕಂಪನಿಗಳಿಗೆ ತನ್ನ ಸರ್ಕಾರ ಯಾವುದೇ ಬೆಂಬಲವನ್ನು ನೀಡುವುದಿಲ್ಲ ಎಂದು ದಕ್ಷಿಣ ಕೊರಿಯಾ ಭಾರತಕ್ಕೆ ಭರವಸೆ ನೀಡಿದೆ. ಪಿಒಕೆ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿದ್ದು ಪಾಕಿಸ್ತಾನವು ಇದನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ. ಈ ಪ್ರದೇಶದಲ್ಲಿ ಶಾಪ್‍ಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಸರ್ಕಾರದ ಸಬ್ಸಿಡಿಗಳು ಮತ್ತು ತೆರಿಗೆ ವಿನಾಯಿತಿಗಳ ರೂಪದಲ್ಲಿ ನೀಡಲಾಗುವ ಬೆಂಬಲವನ್ನು ಹಿಂಪಡೆಯುವ ನಿರ್ಧಾರ 2014ರಿಂದ ಜಾರಿಯಾಗಲಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಈ ಪ್ರದೇಶದಲ್ಲಿ ಹೂಡಿಕೆಗಳು ಮುಂದುವರಿಯಲಿವೆ ಎಂದು ಪಾಕಿಸ್ತಾನದಲ್ಲಿರುವ ದಕ್ಷಿಣ ಕೊರಿಯಾದ ರಾಯಭಾರಿ ಹೇಳಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದ ಬಳಿಕ ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಈ ಭರವಸೆ ನೀಡಿದ್ದಾರೆ..ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಸಿಪಿಇಸಿ ಸೇರಿದಂತೆ ಈ ಪ್ರದೇಶದ ಯೋಜನೆಗಳ ಬಗ್ಗೆ ಭಾರತವು ತನ್ನ ಸ್ನೇಹಪರ ರಾಷ್ಟ್ರಗಳನ್ನು ತಲುಪುವ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತದ ಬೆಂಬಲಕ್ಕೆ ನಾವಿದ್ದೇವೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಒಟ್ಟಾರೆಯಾಗಿ ಪಾಕಿಸ್ತಾನ ಯಾವ ರೀತಿ ಭಾರತದ ವಿರುದ್ಧ ನಿಂತರೂ ಅದಕ್ಕೆ ಉಳಿಗಾಲವಿಲ್ಲ. ಇಡೀ ವಿಶ್ವ ಭಾರತದ ಪರ ನಿಂತಿದೆ. ಪಾಕಿಸ್ತಾನದ ಟೊಳ್ಳು ಬೆದರಿಕೆಗೆ ಭಾರತ ಹಿಂದೆ ಕೂಡಾ ಬೆದರಿಲ್ಲ ಇನ್ನೂ ಬೆದರಲ್ಲ… ಶಾಂತಿಯುತ ರಾಷ್ಟ್ರ ಭಾರತವನ್ನೇನಾದರೂ ಕೆಣಕಿದರೆ ಮುಂದೆ ಪಶ್ಚಾತ್ತಾಪ ಪಡುವುದು ಪಾಕಿಸ್ತಾನ ಹೊರತು ಭಾರತವಲ್ಲ ಎಂಬುವುದನ್ನು ನೆನಪಿಟ್ಟುಕೊಳ್ಳಬೇಕು…

Be the first to comment