ಭಾರತೀಯ ಸೇನಾ ಕ್ಯಾಂಪ್‍ಗಳ ಮೇಲೆ ವಿಧ್ವಂಸಕ ದಾಳಿ ನಡೆಸಲು ಪಾಕಿಸ್ತಾನ ಸಂಚು! ಮಸೂದ್ ಅಜರ್ ನನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದ ಪಾಕ್…

ಇತ್ತೀಚೆಗೆ ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳದ ಪಾಕಿಸ್ತಾನವನ್ನು ಹಣಕಾಸು ಕಾರ್ಯ ಪಡೆ ಕಪ್ಪು ಪಟ್ಟಿಗೆ ಸೇರಿಸಿತ್ತು. ಈ ಹಿನ್ನೆಲೆಯಲ್ಲಿ ತನಗೆ ಮನಸಿಲ್ಲದಿದ್ದರೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಇತ್ತೀಚೆಗೆ ಮಸೂದ್ ಅಜರ್ ನನ್ನು ಪಾಕಿಸ್ತಾನ ಬಂಧಿಸಿತ್ತು. ಭಾರತದ ಸೇನಾ ಕಾರ್ಯಾಚರಣೆ ಅಥವಾ ಉಗ್ರರ ಮೂಲಕ ದಾಳಿ ನಡೆಸಲು ಪಾಕಿಸ್ತಾನ ಯೋಜನೆ ರೂಪಿಸುತ್ತಿದೆ. ಇದರ ಭಾಗವಾಗಿ ಜಮ್ಮು ಮತ್ತು ರಾಜಸ್ಥಾನದ ಗಡಿ ಭಾಗದಲ್ಲಿ ಹೆಚ್ಚಿನ ಯೋಧರನ್ನು ನಿಯೋಜಿಸುತ್ತಿದೆ. ದೊಡ್ಡಮಟ್ಟದಲ್ಲಿ ದಾಳಿ ನಡೆಸುವ ಯೋಜನೆಯ ಭಾಗವಾಗಿಯೇ ಮಸೂದ್ ಅಜರ್ ನನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ ಎನ್ನಲಾಗಿದೆ. ಅಲ್ಲದೆ ಭಾರತೀಯ ಸೇನಾ ಕ್ಯಾಂಪ್‍ಗಳ ಮೇಲೆ ವಿದ್ವಂಸಕ ದಾಳಿ ನಡೆಸಲೂ ಪಾಕಿಸ್ತಾನ ಸಂಚು ರೂಪಿಸುತ್ತಿದೆ ಎಂದು ಗುಪ್ತಚರ ಮಾಹಿತಿ ಕೂಡಾ ಹೊರಬಿದ್ದಿತು. ಇತ್ತೀಚೆಗೆ ಆರ್ಟಿಕಲ್ 370 ರದ್ದಾದ ಬಳಿಕ ಪಾಕಿಸ್ತಾನದ ಹಾರಾಟ ಜಾಸ್ತಿಯಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೋಲನ್ನುನುಭವಿಸುತ್ತಿದೆ. ಇದಕ್ಕೆ ಭಾರತದ ವಿರುದ್ಧ ತನ್ನ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ಮತ್ತೆ ವಾಮ ಮಾರ್ಗ ಹಿಡಿಯುತ್ತಿದೆ.

ವಿದ್ವಂಸಕ ದಾಳಿಗೆ ಪಾಕಿಸ್ತಾನ ಸಂಚು!

ಹೌದು… ಭಾರತೀಯ ಸೇನಾ ಕ್ಯಾಂಪ್ ಗಳ ಮೇಲೆ ವಿಧ್ವಂಸಕ ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯ ನಾಲ್ಕು ಉಗ್ರರು ಗಡಿಯಲ್ಲಿ ಹೊಂಚು ಹಾಕಿ ಕುಳಿತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಮೂಲಗಳ ಪ್ರಕಾರ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಭಾರತದ ಗಡಿಯೊಳಗೆ ನುಸುಳಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ ದ ನಾಲ್ಕು ಉಗ್ರರು ಹೊಂಚು ಹಾಕಿ ಕುಳಿತಿದ್ದು, ಶೋಪಿಯಾನ್ ಗಡಿಯಲ್ಲಿ ಭಾರತದೊಳಗೆ ಒಳನುಸುಳಲು ಕಾದು ಕುಳಿತಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಗುಪ್ತಚರ ಇಲಾಖೆ ವರದಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಭಾರತೀಯ ಸೇನೆ ಮತ್ತು ಇತರ ಭದ್ರತಾ ಪಡೆಗಳ ಶಿಬಿರಗಳ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದು, ಸಾಂಬಾ ಜಿಲ್ಲೆಯ ಬರಿ ಬ್ರಾಹ್ಮಣ ಶಿಬಿರ ಮತ್ತು ಜಮ್ಮು ಪ್ರದೇಶದ ಸುಂಜವಾನ್ ಮತ್ತು ಕಲ್ಚುಕ್ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಶೋಪಿಯಾನ್ ಪ್ರದೇಶದ ಮೂಲಕ ಒಳನುಸುಳಿ, ನಂತರ ಜಮ್ಮು ತಲುಪಲು ಭಯೋತ್ಪಾದಕರು ಯೋಜಿಸುತ್ತಿದ್ದಾರೆ ಎನ್ನಲಾಗಿದೆ.

Be the first to comment