ಟ್ವಿಟರ್ ನಲ್ಲಿ 5 ಕೋಟಿ ಫಾಲೋವರ್ಸ್‍ಗಳನ್ನು ಪಡೆದು ವಿಶ್ವದ ಮೂರನೇ ಹಾಗೂ ಭಾರತದ ಏಕೈಕ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೋದಿ…

ಇಡೀ ವಿಶ್ವವೇ ಮೋದಿಜೀಯನ್ನು ಕಾಣಬೇಕು ಅವರ ಮಾತನ್ನು ಕೇಳಬೇಕು ಎಂದು ಹಾತೊರೆಯುತ್ತಿರುತ್ತೆ. ಯಾಕೆಂದರೆ ಅವರ ಯೋಚನಾ ಲಹರಿನೇ ಡಿಫರೆಂಟ್!! ಅವರು ಮಾತಾಡೋ ಒಂದೊಂದು ಪದಕ್ಕೂ ಅಷ್ಟೇ ಗಟ್ಟಿತನ ಇದೆ. ದೇಶಕ್ಕಾಗಿ ತೆಗೆದುಕೊಳ್ಳೋ ನಿರ್ಧಾರ ನಿಜಕ್ಕೂ ಹೇಳತೀರದು. ದಿನಕ್ಕೆ 18 ಗಂಟೆಗಳ ಕಾಲ ದೇಶಕ್ಕಾಗಿ ಕೆಲಸ ಮಾಡುವ ಮೋದಿಜೀ ಸದಾ ಬಿಡುವಿಲ್ಲದೆ ದೇಶ ಅಭಿವೃದ್ಧಿಗಾಗಿಯೇ ಚಿಂತಿಸುತ್ತಿರುತ್ತಾರೆ. ದೇಶಕ್ಕಾಗಿ ತಾನೂ ಏನು ನಿರ್ಧಾರ ಕೈಗೊಂಡರೂ ಅದರಲ್ಲಿ ಹುಳುಕಿರಲ್ಲ. ಹೇಗೋ ಇದ್ದ ಭಾರತವನ್ನು ಇಡೀ ವಿಶ್ವದೆತ್ತರಕ್ಕೆ ಬೆಳೆಸಿದ ಕೀರ್ತಿ ಸಲ್ಲೋದು ನಮ್ಮ ಪ್ರಧಾನ ಸೇವಕ ಮೋದಿಜೀ. ಯುಪಿಎ ಸರಕಾರದ ಅವಧಿಯಲ್ಲಿ ಇಡೀ ವಿಶ್ವ ಹೇಳಿದ್ದನ್ನು ನಾವು ಕೈ ಕಟ್ಟಿ ಕೇಳಬೇಕಿತ್ತು. ಆದರೆ ಇಂದು ನಮ್ಮ ದೇಶದ ಚಿತ್ರಣವೇ ಬದಲಾಗಿದೆ. ಇಂದು ಭಾರತ ಹೇಳಿದ್ದನ್ನು ಇಡೀ ಪ್ರಪಂಚವೇ ಕೇಳುತ್ತೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಮೋದಿಯದ್ದೇ ಹವಾ! ಸಾಮಾಜಿಕ ಜಾಲತಾಣಗಳ ಸದ್ಭಳಕೆ ಮಾಡಿಕೊಂಡು ಜನರನ್ನು ತಲುಪುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಫಾಲೋವರ್ಸ್ ಸಂಖ್ಯೆ ಇದೀಗ 5 ಕೋಟಿ ದಾಟಿದೆ.

ಹೌದು… ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಜಾಸ್ತಿಯಾಗುತ್ತಿದ್ದು ಇತ್ತೀಚಿನ ಮಾಹಿತಿಯ ಪ್ರಕಾರ ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಅವರ ಫಾಲೋಯರ್ಸ್ ಕುಟುಂಬ 5 ಕೋಟಿ ದಾಟಿದೆ. ತನ್ಮೂಲಕ ಅವರು ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ ಮೂರನೇ ಹಾಗೂ ಭಾರತದ ಏಕೈಕ ರಾಜಕಾರಣಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಟ್ಟಾರೆ 64 ದಶಲಕ್ಷ ಫಾಲೋಯರ್ಸ್‍ನೊಂದಿಗೆ 2ನೇ ಸ್ಥಾನದಲ್ಲಿದ್ದರೆ @narendramodi ಟ್ವಿಟರ್  ಹ್ಯಾಂಡಲ್ ಅದರ ನಂತರದ ಸ್ಥಾನದಲ್ಲಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 108 ದಶಲಕ್ಷ ಫಾಲೋಯರ್ಸ್‍ನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಇಲ್ಲಿಯವರೆಗೆ ಭಾರತದ ರಾಜಕಾರಣಿಗಳ ಪೈಕಿ ಮೋದಿಜೀಯ ಸನಿಹಕ್ಕೂ ಬಂದಿಲ್ಲ ಎಂಬುವುದು ಗಮನಾರ್ಹ ಸಂಗತಿ. ಪ್ರಧಾನಮಂತ್ರಿ ಕಾರ್ಯಾಯಲಯದ ಟ್ವಿಟರ್ ಹ್ಯಾಂಡಲ್ ಕೂಡ 30 ದಶಲಕ್ಷ ಫಾಲೋಯರ್ಸ್ ಅನ್ನು ಹೊಂದಿದೆ.

Be the first to comment