ದೇಶದ ಆರ್ಥಿಕ ಕುಸಿತಕ್ಕೆ ಚಿದಂಬರಂ ಕಾರಣ, ಡೆತ್ ನೋಟ್ ಬರೆದಿಟ್ಟು ಉದ್ಯಮಿಯ ಆತ್ಮಹತ್ಯೆ!

ದೇಶದಲ್ಲಿ ಆರ್ಥಿಕ ಕುಸಿತವಾಗಿದೆ ಎಂದು ಬೊಬ್ಬೆ ಹಾಕುವವರ ಸಂಖ್ಯೆ ಜಾಸ್ತಿಯಾಗಿದೆ. ನರೇಂದ್ರ ಮೋದಿ ಅವರನ್ನು ಟೀಕಿಸಬೇಕು, ತೆಗಳಬೇಕು ಎಂಬ ಒಂದೇ ಒಂದು ಕಾರಣಕ್ಕೆ ಹೀಗೆಲ್ಲ ಆರೋಪ ಮಾಡಲಾಗುತ್ತದೆ. ಆದ ತುಸು ಹಿನ್ನಡೆಯನ್ನೇ ಯಾವುದೂ ಮುನ್ನಡೆಯೇ ಸಿಕ್ಕಿಲ್ಲ, ದೇಶದ ವಿತ್ತೀಯ ವ್ಯವಸ್ಥೆ ಹಾಳಾಗಿದೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ, ಈ ಸುಖಾಸುಮ್ಮನೆ ಟೀಕಿಸುವವರ ಬಾಯಿ ಮುಚ್ಚಲೆಂದೇ ಘಟನೆಯೊಂದು ನಡೆದಿದೆ.

ಹೌದು, ಉತ್ತರಪ್ರದೇಶದ ಪ್ರಯಾಗದಲ್ಲಿನ ಹೊಟೇಲ್’ನಲ್ಲಿ ಉದ್ಯಮಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ದೇಶದ ಆರ್ಥಿಕ ಕುಸಿತಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೋಟು ನಿಷೇಧ ಅಥವಾ ಸರಕು ಮತ್ತು ಸೇವಾ ಯೋಜನೆ ಕಾರಣವಲ್ಲ. ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಆರ್ಥಿಕ ನೀತಿಯೇ ಕಾರಣ ಎಂದು ಉಲ್ಲೇಖಿಸಿದ್ದಾರೆ.
ಅಸ್ಸಾಂ ಮೂಲದ 55 ವರ್ಷದ ನಿವೃತ್ತ ವಾಯುಪಡೆ ಅಧಿಧಿಕಾರಿಯಾಗಿರುವ ಬಿಜಾನ್‌ ದಾಸ್‌ ಅವರು, ಸೆ.6ರಂದು ಪ್ರಯಾಗದ ಖುಲ್ದಾಬಾದ್‌ ಪ್ರದೇಶದ ಹೊಟೇಲೊಂದರಲ್ಲಿ ಕೊಠಡಿ ಪಡೆದುಕೊಂಡಿದ್ದು, ಭಾನುವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭ ಅವರು ತಮ್ಮ ಬದುಕು ಮತ್ತು ದೇಶದ ಪರಿಸ್ಥಿತಿಯ ಬಗೆಗೆ 5 ಪುಟಗಳ ಸುದೀರ್ಘ ಡೆತ್‌ ನೋಟ್‌ ಒಂದನ್ನು ಬರೆದಿಟ್ಟಿದ್ದಾರೆ.

ಆ ಪತ್ರದಲ್ಲಿ ದೇಶದ ಸದ್ಯದ ಆರ್ಥಿಕ ಸ್ಥಿತಿ ಬಗೆಗೂ ಪ್ರಸ್ತಾಪಿಸಿದ್ದಾರೆ. ಇಂತಹ ಸ್ಥಿತಿಗೆ ಮತ್ತು ದೇಶದ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಮೋದಿ ಸರ್ಕಾರವನ್ನು ದೂಷಿಸಬಾರದು. ಬದಲಿಗೆ ಇದಕ್ಕೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರೇ ಕಾರಣ ಎಂಬುದಾಗಿ ಒತ್ತಿ ಹೇಳಿದ್ದಾರೆ.ನಾವು ಹಿಂದೆ ಮಾಡಿದ ಪ್ರಮಾದಗಳಿಂದಾಗಿ ಇಂದು ದೇಶದ ಆರ್ಥಿಕ ವ್ಯವಸ್ಥೆಗೆ ಕೆಡುಕುಂಟಾಗಿದೆ.ಇದಕ್ಕೆ ಮೋದಿ ಸರಕಾರವನ್ನು ಹೊಣೆ ಮಾಡುವ ಹುನ್ನಾರ ನಡೆದಿದೆ. ಆದರೆ ಇದು ಸರಿಯಲ್ಲ. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಈ ಸ್ಥಿತಿಗೆ ಕಾರಣವೆಂದು ಬಿಂಬಿಸಲೂ ಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಲಬೇಕು. ಇದು ಸ್ವರೂಪಾತ್ಮಕ ಬಿಕ್ಕಟ್ಟಲ್ಲ. ಬದಲಿಗೆ ತಾತ್ಕಾಲಿಕ ಹಿನ್ನಡೆ. ವಾಸ್ತವವಾಗಿ ಇದಕ್ಕೆ ಚಿದಂಬರಂ ಅವರೇ ಕಾರಣ ಎಂದು ಅವರು ವಿವರಿಸಿದ್ದಾರೆ.

ಇದೇ ರೀತಿ, ತನ್ನ ವೈಯಕ್ತಿಕ ಬದುಕಿನ ಬಗೆಗೂ ಬರೆದಿರುವ ಅವರು, ತನ್ನ ಚಿಕ್ಕ ಮಗನಿಗಾಗಿ ಏನನ್ನೂ ಮಾಡಿಡಲು ಸಾಧ್ಯವಾಗಿಲ್ಲ. ಗಾಯಕನಾಗಿರುವ ಆತ ರಿಯಾಲಿಟಿ ಶೋ ಸರಿಗಮಪ ಲಿಟಲ್‌ ಚಾಂಫ್ಸ್‌ನಲ್ಲಿ ಪಾಲ್ಗೊಂಡಿದ್ದನ್ನೂ ಉಲ್ಲೇಖಿಸಿದ್ದಾರೆ. ಆತನ ಗಾಯಕನಾಗುವ ಕನಸಿಗೆ ಬೆಂಬಲ ನೀಡುವಂತೆ ಪ್ರಧಾನಿ ಮೋದಿಯವರನ್ನು ಅವರು ಕೇಳಿಕೊಂಡಿದ್ದಾರೆ.

Be the first to comment