ವಿದ್ವಂಸಕ ಕೃತ್ಯ ಎಸಗಲು ಭಾರತದೊಳಗೆ ನುಸುಳಿದ್ದ ಪಾಕಿಸ್ತಾನದ 8 ಉಗ್ರರನ್ನು ಬಂಧಿಸಿದ ಭದ್ರತಾ ಪಡೆ…

ಆರ್ಟಿಕಲ್ 370 ರದ್ದಾಗಿನಿಂದ ಪಾಕಿಸ್ತಾನದ ಹುಚ್ಚಾಟ ಜಾಸ್ತಿಯಾಗಿದ್ದು ವಿದ್ವಂಸಕ ಕೃತ್ಯ ಎಸಗುವ ದುಸ್ಸಾಹಸಕ್ಕೆ ಕೈ ಹಾಕಿದೆ. ಆದರೆ ಭಾರತ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಭಾರತೀಯ ಸೇನಾ ಕ್ಯಾಂಪ್ ಗಳ ಮೇಲೆ ವಿಧ್ವಂಸಕ ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯ ಗಡಿಯಲ್ಲಿ ಹೊಂಚು ಹಾಕಿ ಕುಳಿತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಲಷ್ಕರ್ ಎ ತೊಯ್ಬಾದ 8 ಉಗ್ರರನ್ನು ಭದ್ರತಾಪಡೆಗಳು ಬಂಧಿಸಿದೆ.

ಹೌದು… ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾದ 8 ಉಗ್ರರನ್ನು ಜಮ್ಮು-ಕಾಶ್ಮೀರದ ಪೊಲೀಸರು ಸೋಪೋರ್  ನಲ್ಲಿ ಬಂಧಿಸಿದ್ದಾರೆ. ಭಯೋತ್ಪಾದಕರನ್ನು ಬೆಂಬಲಿಸುವ ಪೋಸ್ಟರ್ ಗಳನ್ನು ಪ್ರಕಟಿಸುವ ಮೂಲಕ ಸ್ಥಳೀಯರನ್ನು ಬೆದರಿಸುವ ಮತ್ತು ಬೆದರಿಸುವಲ್ಲಿ ಭಾಗಿಯಾಗಿದ್ದ ಸೋಪೋರ್  ನಲ್ಲಿ ಎಂಟು ಜನರ ವಿರುದ್ಧ ಕಾನೂನು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅನುಮಾನಾಸ್ಪದವಾಗಿ ಚಲಿಸುತ್ತಿದ್ದ 8 ಮಂದಿಯನ್ನು ವಶಕ್ಕೆ ಪಡೆಯಲಾಯಿತು. ಇವರೆಲ್ಲರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಲಷ್ಕರ್ ಎ ತೊಯ್ಬಾ ಭಯೋತ್ಪಾದನೆ ಸಂಘಟನೆಯ ಉಗ್ರರು ಇವರು ಎಂಬುದು ಸ್ಪಷ್ಟವಾಯಿತು ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಟ್ವೀಟ್ ಮಾಡಿದ್ದಾರೆ. ಸ್ಥಳೀಯ ಭಯೋತ್ಪಾದಕರಾದ ಸಾಜಾದ್ ಮಿರ್ ಅಲಿಯಾಸ್ ಹೈದರ್ ಮತ್ತು ಅವರ ಇತರ ಸಹಚರರಾದ ಮುದಾಸೀರ್ ಪಂಡಿತ್ ಮತ್ತು ಎಲ್‍ಇಟಿಗೆ ಸಂಬಂಧಿಸಿದ ಅಂಗೀಫ್ ಮಕ್ಬೂಲ್ ಭಟ್ ಅವರ ಆದೇಶದ ಮೇರೆಗೆ ಪೋಸ್ಟರ್ ಗಳನ್ನು ಅಂಟಿಸಲಾಗಿದ್ದು, ಪೋಸ್ಟರ್ ಗಳ ಕರಡು ಮತ್ತು ಪ್ರಕಟಣೆಗೆ ಬಳಸಲಾಗಿದ್ದ ಕಂಪ್ಯೂಟರ್ ಮತ್ತು ಇತರ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಉಗ್ರರನ್ನು ಅಯಿಜಾಜ್ ಮಿರ್, ಓಮರ್ ಮಿರ್, ತವ್‍ಸೀಪ್ ನಜರ್, ಇಮಿಟಿಯಾಜ್ ನಜಾರ್, ಓಮರ್ ಅಕ್ಬರ್, ಫೈಜಾನ್ ಲತೀಫ್, ದಣೀಶ್ ಹಬೀಬ್ ಮತ್ತು ಶೋಕಾತ್ ಅಹಮದ್ ಮಿರ್ ಎಂದು ಗುರುತಿಸಲಾಗಿದೆ. ಉಗ್ರರು ಬಳಸಿದ್ದ ಕಂಪ್ಯೂಟರ್, ಪೋಸ್ಟರ್ ಗಳ ತಯಾರಿಕೆಗೆ ಬಳಸಿದ್ದ ಇನ್ನಿತರ ಸಾಮಾಗ್ರಿಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೋಪೋರ್  ನಲ್ಲಿ 2 ದಿನಗಳ ಹಿಂದೆ ಎಲ್‍ಇಟಿ ಉಗ್ರರು ಹಣ್ಣಿನ ವ್ಯಾಪಾರಿ ಮನೆ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ 2 ವರ್ಷದ ಹೆಣ್ಣು ಮಗು ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದರು. ಈಗ ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ಪಾಕಿಸ್ತಾನ ಭಾರತದ ವಿರುದ್ಧ ಪಿತೂರಿ ನಡೆಸಿದರೆ ಪಾಕಿಸ್ತಾನನದ ಅವನತಿ ತುಂಬಾ ಸನಿಹದಲ್ಲಿದೆ ಅಂತನಿಸುತ್ತಿದೆ.

 

Be the first to comment