ಐತಿಹಾಸಿಕ ಭಾರತ-ನೇಪಾಳ ಪೆಟ್ರೋಲಿಯಂ ಪೈಪ್ ಲೈನ್ ಉದ್ಘಾಟಿಸಿದ ಮೋದಿ! ನೇಪಾಳದ 2 ನಗರಗಳ ಮರು ನಿರ್ಮಾಣಕ್ಕೆ ಭಾರತ ಸಾಥ್…

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ಬಳಿಕ ಭಾರತದ ಚಿತ್ರಣ ನಿಜಕ್ಕೂ ಬದಲಾಗಿದೆ. ಈ ದೇಶ ಇದುವರೆಗೆ ಕಂಡು ಕೇಳದ ನಾನಾ ಜನಪರ ಯೋಜನೆಗಳು ಜಾರಿಗೆ ತಂದು ಇಡೀ ದೇಶವನ್ನೇ ಬದಲಿಸಿಬಿಟ್ಟರು. ಇದರಿಂದ ಇಡೀ ದೇಶ ಭಾರತದ ಅಭಿವೃದ್ಧಿಯನ್ನು ಕಂಡು ಮೂಗಿನ ಮೇಲೆ ಬೆರಳಿಡುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತ ಇತರ ದೇಶಗಳೊಂದಿಗೆ ಸಾಲಪಡೆಯುತ್ತಿದ್ದ ದೇಶವಾಗಿತ್ತು. ಆದರೆ ಈಗ ಇತರ ರಾಷ್ಟ್ರಗಳಿಗೆ ಸಾಲ ನೀಡುವ ದೇಶ ಭಾರತವಾಗಿದೆ. ಹಾಗಾದರೆ ಜಸ್ಟ್ ಇಮ್ಯಾಜಿನ್ ಮೋದಿಜೀಯ ಆಡಳಿತ ಎಷ್ಟು ಪವರ್‍ಫುಲ್ ಆಗಿದೆ ಎಂದು… ಮೋದಿ ಒಬ್ಬ ವ್ಯಕ್ತಿಯಲ್ಲ ಅದೊಂದು ಶಕ್ತಿ ಎಂದು ಪದೇ ಪದೇ ಹೇಳೋಕೆ ಹೆಮ್ಮೆ ಅನಿಸುತ್ತೆ!

ಭಾರತ-ನೇಪಾಳ ಪೈಪ್ ಲೈನ್ ಉದ್ಘಾಟಿಸಿದ ಮೋದಿಜೀ…

ಬಿಹಾರದ ಮೋತಿಹಾರಿ ಹಾಗೂ ನೇಪಾಳದ ಅಮ್ಲೆಖ್‍ಗಂಜ್ ನಡುವಿನ 60 ಕಿಮೀ ಉದ್ದದ ಪೆಟ್ರೋಲಿಯಂ ಉತ್ಪನ್ನಗಳ ಪೈಪ್‍ಲೈನ್ ಅನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಇಂದು ಜಂಟಿಯಾಗಿ ಉದ್ಘಾಟಿಸಿದ್ದಾರೆ. ದಕ್ಷಿಣ ಏಷ್ಯಾದ ಮೊಟ್ಟ ಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಉತ್ಪನ್ನಗಳ ಪೈಪ್ ಲೈನ್ ಎಂದು ಇದು ಖ್ಯಾತಿ ಪಡೆದಿದ್ದು ಈ ಹಿಂದೆ 1973ರಿಂದ ಜಾರಿಯಲ್ಲಿರುವ ವ್ಯವಸ್ಥೆಯ ಒಂದು ಭಾಗವಾಗಿ ನೇಪಾಳಕ್ಕೆ ಭಾರತದಿಂದ ಟ್ಯಾಂಕರ್ ಗಳ ಮೂಲಕ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲಾಗುತ್ತಿತ್ತು. ಇದು ದುಬಾರಿಯಾಗಿದ್ದ ಕಾರಣ ಎರಡೂ ದೇಶಗಳು ಜಂಟಿಯಾಗಿ ಈ ಯೋಜನೆಗೆ ಕೈ ಹಾಕಿತ್ತು. ಈ ಕುರಿತು ಸೋಮವಾರವೇ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದ ಪ್ರಧಾನಿ ಸಚಿವಾಲಯ, ಭಾರತ-ನೇಪಾಳ ಇಂಧನ ಸಹಕಾರ ಯೋಜನೆಯು ಎರಡೂ ದೇಶಗಳ ನಿಕಟ ದ್ವಿಪಕ್ಷೀಯ ಸಂಬಂಧಗಳ ಸಂಕೇತವಾಗಿದೆ. ಈ ಯೋಜನೆ ಇಂಧನದ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ಸಾರಿಗೆ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಲು ಸಹಕಾರಿಯಾಗಿದೆ” ಎಂದು ಅಭಿಪ್ರಾಯಪಟ್ಟಿದೆ.

ನೇಪಾಳದ ಎರಡು ಪ್ರಮುಖ ನಗರಗಳ ಮರು ನಿರ್ಮಾಣಕ್ಕೆ ಭಾರತ ಸಾಥ್…

ಅಲ್ಲದೆ ಭೂಕಂಪನದಿಂದಾಗಿ ತೀವ್ರ ಹಾನಿಗೊಳಗಾದ ನೇಪಾಳ ಎರಡು ಪ್ರಮುಖ ನಗರಗಳ ಪುನರ್ ನಿರ್ಮಾಣ ಕಾರ್ಯದಲ್ಲೂ ಭಾರತ-ನೇಪಾಳ ಸರ್ಕಾರದೊಂದಿಗೆ ಕೈ ಜೋಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2015ರ ಭೀಕರ ಭೂಕಂಪನ ಇಡೀ ನೇಪಾಳ ಜನರ ಆತ್ಮಸ್ಥೈರ್ಯವನ್ನೇ ಕಸಿದಿದೆ. ಆದರೆ ಭಾರತ ನೇಪಾಳದ ಆಪ್ತ ರಾಷ್ಟ್ರ. ನೇಪಾಳದ ಸಂಕಷ್ಟದ ಸಂದರ್ಭದಲ್ಲಿ ಎಂದಿಗೂ ಕೈ ಬಿಟ್ಟಿಲ್ಲ. ನೇಪಾಳದೊಂದಿಗಿನ ಸೌಹಾರ್ಧ ಸಂಬಂಧ ಭವಿಷ್ಯದಲ್ಲೂ ಮುಂದುವರೆಯಲಿದ್ದು, ನಮ್ಮ ಸಹೋದರ ರಾಷ್ಟ್ರ ನೇಪಾಳದ ಗೂರ್ಖಾ ಮತ್ತು ನುವಾಕೋಟ್ ಜಿಲ್ಲೆಗಳ ಮರು ನಿರ್ಮಾಣ ಕಾರ್ಯದಲ್ಲಿ ಭಾರತ ನೇಪಾಳ ಸರ್ಕಾರಕ್ಕೆ ಸಾಥ್ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.

Be the first to comment