“ಜಮ್ಮು ಕಾಶ್ಮೀರ ಭಾರತಕ್ಕೆ ಸೇರಿದ್ದು” ಕೊನೆಗೂ ವಿಶ್ವಸಂಸ್ಥೆಯಲ್ಲಿ ಒಪ್ಪಿಕೊಂಡ ಪಾಕ್!

ಹೇಗಾದರೂ ಸತ್ಯ ಹೊರಗೆ ಬಂದೇ ಬರುತ್ತೆ ಎನ್ನುದಕ್ಕೆ ಇದೇ ಸಾಕ್ಷಿ ನೋಡಿ…ಇಲ್ಲಿಯವರೆಗೆ ಪಾಕಿಸ್ತಾನ ಕಾಶ್ಮೀರ ವಿಚಾರ ಭಾರೀ ಹಾರಾಡುತ್ತಿತ್ತು. ಇದೀಗ ಪಾಕಿಸ್ತಾನದ ಸಚಿವ ಬಾಯಿಯಿಂದನೇ ಸತ್ಯ ಹೊರಬಿದ್ದಿದೆ. ಕಾಶ್ಮೀರ ಪ್ರಾಂತ್ಯ ಭಾರತದ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಸೇರಿದ್ದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಒಪ್ಪಿಕೊಂಡಿದ್ದಾರೆ. ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಮಾನವಹಕ್ಕು ಮಂಡಳಿಯ 42ನೇ ಅಧಿವೇಶನದಲ್ಲಿ ಭಾಗವಹಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ, ಜಮ್ಮು ಮತ್ತು ಕಾಶ್ಮೀರ ಭಾರತದ ರಾಜ್ಯ ಎಂದು ಹೇಳಿದ್ದು ಭಾರತದ ಪರ ಪಾಕಿಸ್ತಾನ ಮಾತನಾಡಿದಂತಾಗಿದೆ.

ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಮಾನವಹಕ್ಕು ಮಂಡಳಿಯ ಸಭೆಯಲ್ಲಿ ಪಾಕಿಸ್ತಾನ ಕಾಶ್ಮೀರ ವಿಚಾರ ಪ್ರಸ್ತಾಪಿಸಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಈ ವಿಚಾರವನ್ನು ಅಂತಾರಾಷ್ಟ್ರೀಯ ವೇದಿಕೆಗೆ ತರಲು ಪಾಕಿಸ್ತಾನ ಸದಾ ಪ್ರಯತ್ನಿಸುತ್ತಲೇ ಇದೆ. ಆದರೆ ಇಡೀ ವಿಶ್ವ ಪಾಕಿಸ್ತಾನವನ್ನು ದೂರ ತಳ್ಳಿ ಭಾರತದ ಪರ ನಿಂತಿದೆ. ಇದನ್ನು ಸಹಿಸದ ಪಾಕಿಸ್ತಾನ ಭಾರತದ ವಿರುದ್ಧ ಪಿತೂರಿಗೆ ವಾಮಮಾರ್ಗ ಹಿಡಿಯುತ್ತಿದೆ. ಭಾರತದ ವಿರುದ್ಧ ಯುದ್ಧಕ್ಕೆ ಗಡಿ ಮೂಲಕ ಉಗ್ರರನ್ನು ಭಾರತದೊಳಗೆ ಪ್ರವೇಶಿಸಿ ವಿಧ್ವಂಸಕ ಕೃತ್ಯ ನಡೆಸಲು ಹೊಂಚುಹಾಕುತ್ತಿದೆ. ಇಂತಹ ದುರ್ಬುದ್ಧಿ ಇರುವ ಪಾಕಿಸ್ತಾನ ಇದೀಗ ಕಾಶ್ಮೀರ ಭಾರತ ಅವಿಭಾಜ್ಯ ಅಂಗವೆಂದು ಪಾಕಿಸ್ತಾನವೇ ಒಪ್ಪಿಕೊಂಡಿದೆ.

Be the first to comment