ಪಿಓಕೆಯನ್ನು ವಶಪಡಿಸಿಕೊಳ್ಳುವುದೇ ನಮ್ಮ ಮುಂದಿನ ಗುರಿ – ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಅತ್ತ ಆರ್ಟಿಕಲ್ 370 ರದ್ದಾಗುತ್ತಿದ್ದಂತೆಯೇ ಇತ್ತ ಪಾಕ್ ಅರಚಾಡಲು ಶುರು ಮಾಡಿತ್ತು. ಆದರೂ ಇಡೀ ವಿಶ್ವ ಭಾರತದ ಬೆನ್ನಿಗೆ ನಿಂತು ಪಾಕಿಸ್ತಾನವನ್ನು ಮೂಲೆಗುಂಪು ಮಾಡಿತು. ಆದರೂ ಬುದ್ಧಿ ಬರದ ಪಾಕ್ ಭಾರತ ಜೊತೆ ಯುದ್ಧ ಮಾಡುತ್ತೇವೆ ಎಂದು ಟೊಳ್ಳು ಬೆದರಿಕೆ ಬೇರೆ ಹಾಕುತ್ತಿವೆ. ಆದರೆ ಭಾರತ ಯಾವತ್ತಿಗೂ ಯಾರ ಬೆದರಿಕೆಗೂ ಜಗ್ಗುವುದಿಲ್ಲ ಎಂಬುವುದು ಇಡೀ ವಿಶ್ವಕ್ಕೆ ಗೊತ್ತಿರುವ ವಿಚಾರ. ಕಾಶ್ಮೀರಕ್ಕೆ ಅಂಟಿದ್ದ ಶಾಪವನ್ನು ಮೋದಿ ವಿಮೋಚನೆಗೊಳಿಸಿದರು… ಇನ್ನು ಏನಿದ್ದರೂ ಪಾಕ್ ಆಕ್ರಮಿತ ಕಾಶ್ಮೀರವನ್ನು ನಾವು ವಾಪಸ್ಸು ಪಡೆದುಕೊಳ್ಳುವುದೇ ನಮ್ಮ ಮುಂದಿನ ಗುರಿ ಎಂದು ಇದೀಗಾಗಲೇ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸಿದ್ದರು. ಇದೀಗ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕೂಡಾ ಪುನರುಚ್ಛರಿಸಿದ್ದಾರೆ.

ಹೌದು… ಪಾಕ್ ಆಕ್ರಮಿತ ಕಾಶ್ಮೀರವನ್ನು ಮರುವಶಪಡಿಸಿಕೊಂಡು ಭಾರತದ ಭಾಗವಾಗಿಸುವುದು ಕೇಂದ್ರ ಸರ್ಕಾರದ ಮುಂದಿನ ಗುರಿ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಸೇರಿಸಬೇಕೆನ್ನುವುದು ಕೇವಲ ನಮ್ಮ ಪಕ್ಷದ ಬೇಡಿಕೆಯಲ್ಲ. ಈ ಪ್ರಸ್ತಾವನೆವನ್ನು 1994ರಲ್ಲಿ ಪ್ರಧಾನ ಮಂತ್ರಿ ನರಸಿಂಹ ರಾವ್ ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿತ್ತು. ಇದಕ್ಕೆ ಸರ್ವಾನುಮತದಿಂದ ಅಂಗೀಕಾರ ದೊರೆತಿತ್ತು ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಮೂಲಕ ಕಣಿವೆ ರಾಜ್ಯವನ್ನು ಭಾರತದ ಅವಿಭಾಜ್ಯ ಅಂಗವಾಗಿ ಸೇರಿಸಲಾಗಿತ್ತು. ಆ ನಂತರ ಕೇಂದ್ರ ಸರ್ಕಾರ ಪಾಕ್ ಆಕ್ರಮಿತ ಕಾಶ್ಮೀರವನ್ನು ಪುನಃ ವಶಕ್ಕೆ ಪಡೆಯುವ ಕುರಿತು ಚಿಂತಿಸುತ್ತಿರುವ ಕುರುಹನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೀಡಿದ್ದರು. ಇದೇ ವಿಷಯವನ್ನು ಈಗ ಜಿತೇಂದ್ರ ಸಿಂಗ್ ಅವರೂ ಪುನರುಚ್ಚರಿಸಿದ್ದಾರೆ. ಖಂಡಿತವಾಗಿಯೂ ಮೋದಿಯಂತಹ ಪ್ರಧಾನಿ ಪ್ರಧಾನಿ ಪಟ್ಟದಲ್ಲಿರುವವರೆಗೂ ಪಾಕಿಸ್ತಾನ ಆಟ ಎಂದೂ ನಡೆಯಲ್ಲ…

Be the first to comment