ಮಥುರಾದಲ್ಲಿ ಸ್ವಚ್ಛತಾ ಕಾರ್ಮಿಕರೊಂದಿಗೆ ಕಸ ಬೇರ್ಪಡಿಸಿದ ಮೋದಿ! ಪ್ಲಾಸ್ಟಿಕ್ ಬಳಕೆಗೆ ಅಂತ್ಯ ಹಾಡುವಂತೆ ಸಂದೇಶ ರವಾನಿಸಿದ ಪ್ರಧಾನಿ…

ಇಡೀ ವಿಶ್ವ ಮೆಚ್ಚುವ ನಾಯಕ ಮೋದಿ… ಎಲ್ಲೇ ಹೋದರೂ ಮೋದಿಜೀಯನ್ನು ಸ್ವಾಗತಿಸುವ ಪರಿ ನಿಜಕ್ಕೂ ಹೆಮ್ಮೆ ಅನಿಸುತ್ತೆ.. ಅವರ ಮಾತು ಕೇಳಬೇಕೆಂದು ಅದೆಷ್ಟೋ ಕೋಟ್ಯಾಂತರ ಜನರು ಕಾತರದಲ್ಲಿರುತ್ತಾರೆ. ಇಷ್ಟೆಲ್ಲಾ ಪ್ರಸಿದ್ಧಿ ಹೊಂದಿದ ಮೋದಿ ಮಾತ್ರ ಸಾಮಾನ್ಯ ವ್ಯಕ್ತಿಯಂತೆಯೇ ಎಲ್ಲರೊಂದಿಗೆ ಬೆರೆಯುತ್ತಾರೆ. ನಾನೊಬ್ಬ ದೇಶದ ಪ್ರಧಾನಿ ಇಡೀ ವಿಶ್ವ ಮೆಚ್ಚುವ ನಾಯಕ ಎನ್ನುವ ಒಂದು ಚೂರೂ ಅಹಂ ಅವರಲ್ಲಿಲ್ಲ! ಇಂತಹ ಪ್ರಧಾನಿಯನ್ನು ಎಲ್ಲೂ ಇದುವರೆಗೆ ನಾ ಕಂಡಿಲ್ಲ… ಸದಾ ಸ್ವಚ್ಛತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಮೋದಿ ಕೇವಲ ಬಾಯಿ ಮಾತಲ್ಲಿ ಹೇಳಲ್ಲ ಸ್ವತಃ ಅವರೇ ಪೊರಕೆ ಹಿಡಿದು ಸ್ವಚ್ಛತೆಯನ್ನು ಮಾಡುತ್ತಾರೆ. ಇದೀಗ ಉತ್ತರ ಪ್ರದೇಶ ಮಥುರಾಕ್ಕೆ ಭೇಟಿ ನೀಡಿದ ಇವರು ಸ್ವಚ್ಛತಾ ಕಾರ್ಮಿಕರೊಂದಿಗೆ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸುವ ಕೆಲಸದಲ್ಲಿ ತೊಡಗುವ ಮೂಲಕ ಮತ್ತೊಮ್ಮೆ ಸ್ವಚ್ಛತೆಯ ಮಹತ್ವವನ್ನು ದೇಶಕ್ಕೆ ತಿಳಿಸಿದ್ದಾರೆ.

ಹೌದು… ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಮಥುರಾಕ್ಕೆ ಭೇಟಿ ನೀಡಿ ಅಲ್ಲಿ ಸ್ವಚ್ಛತಾ ಕಾರ್ಮಿಕರೊಂದಿಗೆ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸುವ ಮೂಲಕ ದೇಶಕ್ಕೆ ಸ್ಪಷ್ಟವಾದ ಸಂದೇಶವನ್ನು ರವಾನೆ ಮಾಡಿದ್ದಾರೆ. ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿರುವ ಪ್ರಧಾನಮಂತ್ರಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಮಥುರಾದ ಸ್ವಚ್ಛತೆಯ ಪರಿಶೀಲನೆ ನಡೆಸಿದರು. ಚಿಂದಿ ಆಯುವ 25 ಮಹಿಳೆಯರನ್ನು ಭೇಟಿಯಾಗಿ ಅವರ ಕೆಲಸದಲ್ಲಿ ಸಹಾಯ ಮಾಡಿ ಆ ಮಹಿಳೆಯರನ್ನು ಪುರಸ್ಕರಿಸಿದ್ದಾರೆ… ಇಂತಹ ಸಿಂಪ್ಲಿಸಿಟಿಗೆ ಮೋದಿಜೀಯನ್ನು ಕಂಡರೆ ಎಲ್ಲರಿಗೂ ಇಷ್ಟವಾಗೋದು…

ಮಥುರಾದಲ್ಲಿ ರಾಷ್ಟೀಯ ಜಾನುವಾರ ರೋಗ ನಿಯಂತ್ರಣ ಕಾರ್ಯಕ್ರಮ ಗೋವುಗಳಿಗೆ ಕೃತಕ ಗರ್ಭಧಾರಣೆಯ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ ಪ್ರಧಾನಿ ಮೋದಿ ಹಸುಗಳಲ್ಲಿನ ಕಾಲು ಬಾಯಿ ರೋಗ ಮತ್ತು ಬ್ರುಸೆಲೋಸೊಸ್ ತಡೆಗೆ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಥುರಾ ಸಂಸದ ಹೇಮಾ ಮಾಲಿನಿ ಕೂಡಾ ಉಪಸ್ಥಿತರಿದ್ದರು. ಸ್ವಾತಂತ್ರ್ಯ ದಿನಾಚರಣೆಯಂದು ತನ್ನ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಏಕಬಳಕೆಯ ಪ್ಲಾಸ್ಟಿಕ್ ನ್ನು ಅಕ್ಟೋಬರ್ ಎರಡರಿಂದ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕರೆ ನೀಡಿದ್ದರು. ಅದೇ ರೀತಿ ಪ್ಲಾಸ್ಟಿಕ್ ಬಳಕೆಯ ಸಂಪೂರ್ಣ ನಿಷೇಧಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು.

Be the first to comment