ಅಸಹಿಷ್ಣುವಾದಿಗಳೇ ಇಲ್ಲಿ ನೋಡಿ, ಶಿವನ ದೇಗುಲದಲ್ಲಿ ಮುಸ್ಲಿಮನಿಂದ ಪೂಜೆ, ಸೇವೆ!

ಭಾರತದಲ್ಲಿ ಹಿಂದೂ-ಮುಸ್ಲಿಮರ ನಡುವೆ ತಂದಿಟ್ಟು ತಮಾಷೆ ನೋಡುವ, ಜಿಹಾದ್ ಸಾರುವ, ಬಲವಂತದ ಮತಾಂತರ ಮಾಡುವ, ಲವ್ ಜಿಹಾದ್ ಹೆಸರಲ್ಲಿ ಹಿಂದೂ ಯುವತಿಯರ ಬಾಳು ಹಾಳು ಮಾಡುವ ಇಸ್ಲಾಮಿಕ್ ಮೂಲಭೂತವಾದಿಗಳ ಸಂಖ್ಯೆ ಜಾಸ್ತಿ ಇದೆ. ಹಿಂದೂಗಳಲ್ಲೇ ಇರುವ ಕೆಲವು ಎಡಬಿಡಂಗಿಗಳು ಹಿಂದೂಗಳು ಇಸ್ಲಾಂ ವಿರೋಧಿಗಳು ಎಂದು ಹುಯಿಲೆಬ್ಬಿಸುತ್ತಾರೆ. ಇಂತಹ ಷಡ್ಯಂತ್ರಕ್ಕೆ ಬುದ್ಧಿಜೀವಿಗಳು, ಸಾಹಿತಿಗಳ ಬೆಂಬಲವೂ ಇದೆ.

ಆದರೆ, ಹಿಂದೂಗಳು ಸಹಿಷ್ಣುಗಳು, ಹಿಂದುತ್ವ ಎಂಬುದು ಅನ್ಯ ಧರ್ಮದ ಬಗ್ಗೆ ಸೈರಣೆ ಹೊಂದಿರುವುದಕ್ಕೆ ಉದಾಹರಣೆ ಎಂಬುದಕ್ಕೆ ಈಗ ನಿದರ್ಶನ ಸಿಕ್ಕಿದ್ದು, ಅಸ್ಸಾಂನ ಮುಸ್ಲಿಂ ಕಟುಂಬವೊಂದು ಉತ್ತರ ಗುವಾಹಟಿಯ ಶತಮಾನದಷ್ಟು ಹಳೆಯ ಶಿವನ ದೇಗುಲಕ್ಕೆ ಧರ್ಮವನ್ನೂ ಮೀರಿ ಸೇವೆ ಸಲ್ಲಿಸುತ್ತಿದೆ.

ಮೋತಿಬಾರ್‌ ರಹಮಾನ್‌ ಕುಟುಂಬದ ಸದಸ್ಯರು ಶಿವನ ದೇಗುಲದಲ್ಲಿ ತಲೆಮಾರುಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ನಗರದ ರಂಗ ಮಹಲ್‌ ಪ್ರದೇಶದಲ್ಲಿರುವ ದೇಗುಲದ ಮೆಟ್ಟಿಲುಗಳನ್ನು ಸ್ವತಃ ತಾವೇ ನಿತ್ಯ ಸ್ವಚ್ಛಗೊಳಿಸುತ್ತಾರೆ. ಅಲ್ಲದೇ ದೂಪದ್ರವ್ಯಗಳನ್ನು ಇಟ್ಟು, ಮೇಣದ ಬತ್ತಿಗಳನ್ನು ಹೊತ್ತಿಸಿ, ಭಕ್ತಿಯಿಂದ ಭಗವಂತನಿಗೆ ನಮಸ್ಕರಿಸುತ್ತಾರೆ.

ತಮ್ಮ ಕಾಯಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ರಹಮಾನ್‌, ಇಲ್ಲಿಗೆ ಹಿಂದೂಗಳು ಬಂದು ಪೂಜಿ ಸಲ್ಲಿಸುತ್ತಾರೆ, ಭಕ್ತಿ ಗೀತೆಗಳನ್ನು ಹಾಡುತ್ತಾರೆ. ಅಲ್ಲದೇ ಮುಸ್ಲಿಂರು ಕೂಡ ದೇಗುಲಕ್ಕೆ ಭೇಟಿ ನೀಡ್ತಾರೆ ಇವೆಲ್ಲವೂ ಪರಮಾತ್ಮನಿಗೆ ಪ್ರಿಯವಾಗಿದೆ. ಆತನ ಒಪ್ಪಿಗೆ ಇಲ್ಲದೆ ಸಣ್ಣ ಗಿಡವನ್ನೂ ದೇಗುಲದಿಂದ ಕೊಂಡೊಯ್ಯಲಾಗುವುದಿಲ್ಲ ತನ್ನ ಸುತ್ತಲಿನ ಪ್ರಪಂಚ ಸ್ವಚ್ಛವಾಗಿರಬೇಕು ಎಂದು ಭಗವಂತ ಬಯಸುತ್ತಾನೆ ಅದನ್ನೇ ನಾವು ನಿರ್ವಹಿಸುತ್ತಿದ್ದೇವೆ ಎನ್ನುತ್ತಾರೆ.

ಇನ್ನು ಸಾಕ್ಷಾತ್‌ ಶಿವನನ್ನು ಪ್ರೀತಿಯಿಂದ ಅಜ್ಜನೆಂದು ರಹಮಾನ್‌ ಸಂಬೋದಿಸುತ್ತಾರೆ. ನಮ್ಮ ಕುಟುಂಬ ಕಳೆದ 500 ವರ್ಷಗಳ ಹಿಂದೆಯೇ ದೇಗುಲಕ್ಕೆ ಸೇವೆ ಸಲ್ಲಿಸುತ್ತಾ ಕಾವಲಾಗಿ ಕಾರ್ಯನಿರ್ವಹಿಸಿದೆ. ನಾನೂ ಕೂಡ ಅದನ್ನೇ ಅನುಸರಿಸಿದ್ದೇನೆ. ಮುಂದೆ ನನ್ನ ಮಗನೂ ಇದನ್ನೇ ಮುಂದುವರಿಸಬೇಕು ಎಂಬ ಆಸೆ ನನ್ನದು ಎಂದು ಹೇಳಿದ್ದಾರೆ. 2006ರಲ್ಲಿ ನಾನು ಮೆಕ್ಕಾದ ಹಜ್‌ ಯಾತ್ರೆಗೆ ತೆರಳಿದ್ದೆ ಆಗ ನನ್ನ ಮಗನೆ ನಿತ್ಯ ದೇಗುಲದ ಸ್ವಚ್ಛತೆ ನೋಡಿಕೊಳ್ಳುತ್ತಿದ್ದ. ನನ್ನಷ್ಟು ಅಚ್ಚುಕಟ್ಟಾಗಿ ಮಾಡಲು ಬರದಿದ್ದರೂ ಶ್ರದ್ಧೆ ಯಿಂದ ಭಗವಂತನಿಗೆ ಸೇವೆ ಸಲ್ಲಿಸುತ್ತಾನೆ ಎಂದು ರೆಹಮಾನ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಮುಸ್ಲಿಂ ಕುಟುಂಬಸ್ಥರ ಈ ಸೇವೆಯು ಧರ್ಮ ಸಹಿಷ್ಣುತೆಗೆ ನಿದರ್ಶನವಾದರೆ, ಅಸಹಿಷ್ಣುಗಳಿಗೆ ಚಾಟಿಯೂ ಆಗಿದೆ.

Be the first to comment