ಭಾರತದಲ್ಲಿ 100 ಬಿಲಿಯನ್ ಡಾಲರ್ ದೀರ್ಘಾವಧಿ ಹೂಡಿಕೆ ಮಾಡಲು ಸೌದಿ ಅರೇಬಿಯಾ ನಿರ್ಧಾರ…

ಭಾರತದ ಬೆಳವಣಿಗೆಯನ್ನು ಕಂಡ ವಿಶ್ವದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರ ಸೌದಿ ಅರೇಬಿಯಾ ಭಾರತದಲ್ಲಿ ಬರೊಬ್ಬರಿ 100 ಬಿಲಿಯನ್ ಡಾಲರ್ ಹೂಡಿಕೆಗೆ ನಿರ್ಧರಿಸಿದೆ. ಸೌದಿ ಅರೇಬಿಯಾ ಈಗಾಗಲೇ ಭಾರತದಲ್ಲಿ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದು, ಭಾರತದೊಂದಿಗೆ ತೈಲ, ಅನಿಲ ಮತ್ತು ಗಣಿಗಾರಿಕೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ದೀರ್ಘಕಾಲೀನ ಸಹಭಾಗಿತ್ವವನ್ನು ಹೊಂದಿದೆ. ಈ ಸಹಭಾಗಿತ್ವವನ್ನು ಮುಂದುವರೆಸುವ ನಿಟ್ಟಿನಲ್ಲಿ ಭಾರತದಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ಸೌದಿ ಸರ್ಕಾರ ಹೇಳಿದೆ. ಸೌದಿ ಅರೇಬಿಯಾದ ಅರಾಮ್ ಹಾಗೂ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಜತೆಗಿನ ಸಹಭಾಗಿತ್ವ ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಇಂಧನ ಕ್ಷೇತ್ರದ ಸಂಬಂಧಗಳ ಕಾರ್ಯತಂತ್ರದ ಸ್ವರೂಪ ಪ್ರತಿಬಿಂಬಿಸುತ್ತದೆ. ತೈಲ ಪೂರೈಕೆ, ಮಾರುಕಟ್ಟೆ, ಪೆಟ್ರೋಕೆಮಿಕಲ್ಸ್ ಮೇಲೆ ಹೂಡಿಕೆ ಮಾಡುವುದು ಪ್ರಮುಖ ಭಾಗವಾಗಿದೆ ಎಂದು ಮೊಹಮ್ಮದ್ ಬಿನ್ ಅಲ್ ಸತಿ ತಿಳಿಸಿದ್ದಾರೆ.

ಸುದ್ದಿಸಂಸ್ಛೆಗೆ ನೀಡಿರುವ ಸಂದರ್ಶನದಲ್ಲಿ ಮಾಹಿತಿ ನೀಡಿರುವ ಸೌದಿ ರಾಯಭಾರಿ ಇಂಧನ, ಸಂಸ್ಕರಣೆ, ಪೆಟ್ರೋಕೆಮಿಕಲ್ಸ್, ಮೂಲಸೌಕರ್ಯ, ಕೃಷಿ, ಖನಿಜಗಳು ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಭಾರತದಲ್ಲಿ 100 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ಮಾಡಲು ಸೌದಿ ಅರೇಬಿಯಾ ನೋಡುತ್ತಿದೆ. ಸೌದಿ ಅರೇಬಿಯಾದ ಅತಿದೊಡ್ಡ ತೈಲ ದೈತ್ಯ ಅರಾಮ್ಕೊ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೊತೆಗಿನ ಉದ್ದೇಶಿತ ಸಹಭಾಗಿತ್ವವು ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಇಂಧನ ಸಂಬಂಧಗಳ ಕಾರ್ಯತಂತ್ರದ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಅಲ್ಲದೆ ತೈಲ ಪೂರೈಕೆ, ಮಾರ್ಕೆಟಿಂಗ್, ಪೆಟ್ರೋಕೆಮಿಕಲ್ಸ್ ಮತ್ತು ಲೂಬ್ರಿಕಂಟ್‍ಗಳಿಗೆ ಸಂಸ್ಕರಣೆ ಮಾಡುವುದರಿಂದ ಭಾರತದ ಮೌಲ್ಯ ಸರಪಳಿಯಲ್ಲಿ ಹೂಡಿಕೆ ಮಾಡುವುದು ಅರಾಮ್ಕೊದ ಜಾಗತಿಕ ಡೌನ್‍ಸ್ಟ್ರೀಮ್ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಈ ಹಿನ್ನೆಲೆಯಲ್ಲಿ, ಸೌದಿ ಅರಾಮ್ಕೊ ಭಾರತದ ಇಂಧನ ಕ್ಷೇತ್ರದಲ್ಲಿ 44 ಬಿಲಿಯನ್ ಯುಎಸ್ ಡಾಲರ್ ವೆಸ್ಟ್ ಕೋಸ್ಟ್ ರಿಫೈನರಿ ಮತ್ತು ಮಹಾರಾಷ್ಟ್ರದ ಪೆಟ್ರೋಕೆಮಿಕಲ್ ಪ್ರಾಜೆಕ್ಟ್ ಮತ್ತು ರಿಲಯನ್ಸ್ ಜೊತೆಗಿನ ದೀರ್ಘಾವಧಿಯ ಸಹಭಾಗಿತ್ವವು ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ಕಾರ್ಯತಂತ್ರದ ಮೈಲಿಗಲ್ಲುಗಳನ್ನು ಪ್ರತಿನಿಧಿಸುತ್ತದೆ’ ಎಂದು ಅವರು ಹೇಳಿದರು. ಸೌದಿ ಪ್ರಿನ್ಸ್ ಮೊಹಮದ್ ಬಿನ್ ಸಲ್ಮಾನ್ ಅವರ 2030 ದೃಷ್ಟಿಕೋನ ಕೂಡಾ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ವಿವಿಧ ಕ್ಷೇತ್ರಗಳಲ್ಲಿ ವ್ಯವಹಾರವನ್ನು ಗಮನಾರ್ಹವಾಗಿ ವಿಸ್ತರಿಸಲು ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Be the first to comment