ಸ್ವಚ್ಛ ಭಾರತ ಅಭಿಯಾನ ವಿಶ್ವ ದಾಖಲೆಯಾಗಬೇಕೆಂದು ಶ್ಲಾಘಿಸಿದ ಯುನಿಸೆಫ್ ಅಧಿಕಾರಿ…

ಸ್ವಚ್ಛ ಭಾರತ ಮಹಾತ್ಮ ಗಾಂಧಿಯ ಕನಸಾಗಿದ್ದರು ಅದನ್ನು ನನಸು ಮಾಡಿದ್ದು ಮೋದಿಜೀ… ಈ ಅಭಿಯಾನವು ಅಧಿಕೃತವಾಗಿ 2 ಅಕ್ಟೋಬರ್ 2014 ನವದೆಹಲಿಯಲ್ಲಿ ಪ್ರಧಾನಮಂತ್ರಿ ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಈ ಮಹತ್ತರವಾದ ಯೋಜನೆಯನ್ನು ಆರಂಭಿಸಿದರು. ಹೆಚ್ಚಿನ ಸಾರ್ವ­­ಜನಿಕ ಪ್ರದೇಶಗಳಲ್ಲಿ ಕೊಳೆ, ಕಸ­ಗಳನ್ನು ನೋಡಿ ತಾವೇನೂ ಮಾಡ­ಲಾ­ಗದೇ, ಅವು­ಗಳಿಗೆ ಅನಿವಾರ್ಯವಾಗಿ ಹೊಂದಿ­ಕೊಂಡಂತಿದ್ದ ಬಹ­ಳಷ್ಟು ಜನರಲ್ಲಿ ಆಶಾ­ಭಾವನೆಗಳು ಚಿಗುರೊಡೆದಿವೆ. ಪ್ರಧಾನಿ ಹುದ್ದೆಗೇರಿದ ಅನಂತರ ಮೋದಿಜೀ ಆರಂಭಿಸಿದ ಅತಿದೊಡ್ಡ ಆಂದೋಲನವೇ ಸ್ವತ್ಛ ಭಾರತ. 2014ರಲ್ಲಿ ಈ ಯೋಜನೆಯನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ತಾವು ಎಲ್ಲೇ ಹೋದರೂ ಭಾಷಣದಲ್ಲಿ ಸ್ವಚ್ಛತೆಯ ಕುರಿತು ಒಂದೆರಡು ವಿಚಾರ ಪ್ರಸ್ತಾವಿಸದೇ ಇರಲ್ಲ. ಸ್ವಚ್ಛ ಭಾರತ್ ಅಭಿಯಾನಕ್ಕೆ ಇಡೀ ವಿಶ್ವವೇ ಶಭಾಶ್ ಎನ್ನುತ್ತಿದೆ. ಇದೀಗ ಯುನಿಸೆಫ್ ಉನ್ನತ ಅಧಿಕಾರಿಯೊಬ್ಬರು ಸ್ವಚ್ಛ ಭಾರತ್ ಅಭಿಯಾನವನ್ನು ಶ್ಲಾಘಿಸಿದ್ದಾರೆ.

ನರೇಂದ್ರ ಮೋದಿಜೀ ಆರಂಭಿಸಿದ ಸ್ವಚ್ಚ ಭಾರತ್ ಅಭಿಯಾನವು ಭಾರತೀಯ ಸಮಾಜದ ನೈರ್ಮಲ್ಯದ ಬಗೆಗಿನ ಧೋರಣೆಯನ್ನು ಬದಲಾಯಿಸಿದೆ. ಹೀಗಾಗಿ ಇದು ಜಗತ್ತಿನ ಉದಾಹಣೆಯಾಗಬಲ್ಲ ಕಾರ್ಯಕ್ರಮ ಎಂದು ಯುನಿಸೆಫ್ ನ ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯಿಸಿದ್ದಾರೆ. ಹೌದು… ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಯುನಿಸೆಫ್ ಇಂಡಿಯಾ ಸ್ಯಾನಿಟೇಶನ್ ಮುಖ್ಯಸ್ಥ ನಿಕೋಲಸ್ ಓಸ್ಬರ್ಟ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಸ್ವಾತಂತ್ರ್ಯ ದಿನಾಚರಣೆಯ ಭಾಷಣ 2014ರಲ್ಲಿ ಕೆಂಪು ಕೋಟೆಯ ಮೇಲೆ ನಿಂತು ಘೋಷಣೆ ಮಾಡಿದ ಕಾರ್ಯಕ್ರಮದ ಬಗ್ಗೆ ತೀವ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಐದು ವರ್ಷಗಳ ಹಿಂದೆ ಭಾರತದ ಆಡಳಿತ ಮತ್ತು ಜನರೊಂದಿಗೆ ಬಯಲು ಶೌಚದ ಬಗ್ಗೆ ಮುಕ್ತವಾಗಿ ಮಾತನಾಡುವುದು ಕಷ್ಟ ಎಂದು ಕೊಂಡಿದ್ದು ಆದರೆ ಸ್ವಚ್ಛ ಭಾರತ ಅಭಿಯಾನದ ನಂತರ ಮುಖ್ಯಮಂತ್ರಿಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್‍ಗಳು ಕೂಡಾ ಮುಕ್ತ ಮಲವಿಸರ್ಜನೆ ವಿರುದ್ಧ ಭಾರತದಲ್ಲಿ ಅರಿವನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಗಾತ್ರ ಮತ್ತು ವೈವಿಧ್ಯತೆಯನ್ನು ಪರಿಗಣಿಸಿದರೆ ಸ್ವಚ್ಛ ಭಾರತ ಅಭಿಯಾನದ ಯಶಸ್ಸು ವಿಶ್ವ ದಾಖಲೆಯಾಗಿದೆ. ಖಂಡಿತವಾಗಿಯೂ ಇದು ವಿಶ್ವ ದಾಖಲೆಯೇ ಆಗಬೇಕು ಎಂದು ಓಸ್ಬರ್ಟ್ ಪ್ರತಿಪಾದಿಸಿದ್ದಾರೆ.

Be the first to comment