ಜಮ್ಮು ಕಾಶ್ಮೀರದ ಬೆಳವಣಿಗೆಯಿಂದ 70 ವರ್ಷದ ಪಾಕಿಸ್ತಾನದ ಯೋಜನೆ ಬುಡಮೇಲಾಗುತ್ತಿದೆ- ವಿದೇಶಾಂಗ ಸಚಿವ ಎಸ್. ಜೈ ಶಂಕರ್

ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ಆರ್ಟಿಕಲ್ 370ಯನ್ನು ಮೋದಿ ಸರ್ಕಾರ ಯಾವಾಗ ರದ್ದು ಮಾಡಿತೋ ಅಂದಿನಿಂದ ಅಲ್ಲಿನ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಮುಂಚೆ ಅಲ್ಲಿನ ಜನತೆ ಕೇಂದ್ರದ ಅನುದಾನಗಳಿಂದ ವಂಚಿತರಾಗಿದ್ದರು. ಯಾಕೆಂದರೆ ಒಂದೇ ದೇಶವಾದರೂ ನೆಹರೂವಿನ ಕೃಪಾಕಟಾಕ್ಷದಿಂದ ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿ ನಮ್ಮಿಂದ ದೂರವಾಗಿಸಿ ಬಿಟ್ಟಿದ್ದರು. ಆದರೆ ಇದಕ್ಕೆಲ್ಲಾ ಈಗ ಮೋದಿ ಸರ್ಕಾರ ಪೂರ್ಣವಿರಾಮವಿಟ್ಟಿದೆ. ಈಗಾಗಲೇ ಆರ್ಟಿಕಲ್ 370 ರದ್ದಾಗಿನಿಂದ ಜಮ್ಮು ಕಾಶ್ಮೀರ ಹಾಗೂ ಲಡಾಖನ್ನು ಸಂಪೂರ್ಣವಾಗಿ ಬದಲಾವಣೆ ಮಾಡಬೇಕೆನ್ನುವ ಉದ್ಧೇಶದಿಂದ ನಾನಾ ಯೋಜನೆಗಳನ್ನು ಮಾಡುತ್ತಿದೆ ಕೇಂದ್ರ ಸರ್ಕಾರ… ಜಮ್ಮು ಕಾಶ್ಮೀರದಲ್ಲಿನ ಅಭಿವೃದ್ದಿಯನ್ನು ಭಾರತ ಉನ್ನತ ಮಟ್ಟಕ್ಕೇರಿಸಿದರೆ, 70 ವರ್ಷಗಳಿಂದ ಪಾಕಿಸ್ಥಾನ ಮಾಡುತ್ತಿರುವ ಎಲ್ಲಾ ಯೋಜನೆಗಳು ತಲೆಕೆಳಗಾಗುತ್ತವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ವಾಷಿಂಗ್ಟನ್ ನಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಜೈ ಶಂಕರ್, ಕಾಶ್ಮೀರ ಕಣಿವೆಯಲ್ಲಿ ಮೊಬೈಲ್ ನೆಟ್ ವರ್ಕ್ ಗಳನ್ನು ಸ್ಥಗಿತಗೊಳಿಸಿರುವುದು ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗವನ್ನು ತಡೆಗಟ್ಟಲು ಮತ್ತು ಯಾವುದೇ ರೀತಿಯ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಲು ಈ ರೀತಿಯಾದ ಕ್ರಮವನ್ನು ಕೈಗೊಳ್ಳಲಾಗಿದೆ. ಮೋದಿ ಸರ್ಕಾರದ ಮಾಸ್ಟರ್ ಪ್ಲ್ಯಾನ್ ನಿಂದಾಗಿ ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದು ಮಾಡಿದೆ. ಅಂದಿನಿಂದ ಪಾಕಿಸ್ತಾನದ ಹುಚ್ಚಾಟ ಜಾಸಿಯಾಗಿದೆ. ಕಾಶ್ಮೀರದಲ್ಲಿ 70 ವರ್ಷಗಳಿಂದ ಪಾಕ್ ಪಟ್ಟಾಭದ್ರಾ ಹಿತಾಸಕ್ತಿಯನ್ನು ಬೆಳೆಸಲು ಯತ್ನಿಸುತ್ತಿದೆ. ಯಾವುದೇ ವಿಷಯದಲ್ಲಿ ಯಥಾ ಸ್ಥಿತಿಯನ್ನು ಬದಲಾಯಿಸಿದಾಗ ಬಹಳಷ್ಟು ಅಪಾಯ ಉಂಟಾಗುತ್ತದೆ. ಅದರ ಜೊತೆಗೆ ಅಪಾರ ಪ್ರತಿಕ್ರಿಯೆಗಳು ಬರುತ್ತವೆ ಎಂದು 370 ನೇ ವಿಧಿಯ ರದ್ದತಿಯನ್ನು ಉಲ್ಲೇಖಿಸಿ ಮಾತನಾಡಿದರು. ಕಾಶ್ಮೀರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲಾ ರೀತಿಯಲ್ಲೂ ಶ್ರಮಿಸಿಲಾಗುತ್ತಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನರು ಒಂದಲ್ಲಾ ಒಂದು ದಿನ ಭಾರತದತ್ತ ಮುಖ ಮಾಡುತ್ತಾರೆ. ಗಡಿರೇಖೆಯಯಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ನಿಯಂತ್ರಿಸಲು ಭಾರತ ತಕ್ಕ ಕ್ರಮ ಕೈಗೊಳ್ಳುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಕೇಂದ್ರದ ಮುಂದಿನ ಗುರಿ ಏನಿದ್ದರೂ ಪಿಒಕೆಯನ್ನು ಆಕ್ರಮಿಸುವುದು ಅಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ…

Be the first to comment