ಭಾಷಾವೈಷಮ್ಯ ಸೃಷ್ಟಿಸಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಕನ್ನಡಪರ ಸಂಘಟನೆಗಳನ್ನು ಸರ್ಕಾರ ನಿಷೇಧಿಸಬೇಕು…

ಅಬ್ಬಾಬ್ಬಾ ಇಂತಹ ಜನಗಳೂ ಇದ್ದಾರಾ?! ನಿನ್ನೆ ಬಿಬಿಎಂಪಿ ನೂತನ ಮೇಯರ್ ಆಗಿ ಬಿಜೆಪಿಯ ಗೌತಮ್ ಕುಮಾರ್ ಆಯ್ಕೆಯಾದ ಕ್ಷಣದಿಂದ ಇತ್ತ ಬಿಜೆಪಿ ಕುಣಿದು ಕುಪ್ಪಳಿಸಿದರೆ ಅತ್ತ ಕೆಲವರು ಪ್ರತಿಭಟನೆ ಮಾಡಲು ಹೊರಟಿದ್ದಾರೆ. ಬಿಬಿಪಿಎಂಪಿ ಮೇಯರ್ ಪಟ್ಟ ಗೌತಮ್ ಕುಮಾರ್ ಜೈನ್ ರಿಗೆ ದೊರಕ್ಕಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ನಿಮ್ಮಂತವರ ಕನ್ನಡ ಪ್ರೇಮ ಓಕೆ ಆದರೆ ಇದೆಲ್ಲಾ ಬಿಜೆಪಿಯರು ಆಯ್ಕೆಯಾದಾಗ ಮಾತ್ರನಾ ಅಥವಾ ಬೇರೆ ಪಕ್ಷದವರು ಆಯ್ಕೆಯಾದಾಲೂ ಇದೇ ರೀತಿ ಪ್ರತಿಭಟಿಸುತ್ತೀರಾ ಎಂಬುವುದು ನಮ್ಮ ಪ್ರಶ್ನೆ… ಕನ್ನಡದ ಹೆಸರರಲ್ಲಿ ಭಾಷಾವೈಷಮ್ಯತೆ ಸೃಷ್ಟಿಸೋದು ಸರಿಯಲ್ಲ… ಒಬ್ಬ ಮಾರ್ವಾಡಿ ಸಮುದಾಯದವರು ಮೇಯರ್ ಆದಾಕ್ಷಣ ಉರಿದುಕೊಳ್ಳು ನಿಮ್ಮಂತವರಿಗೆ ಈ ಮುಂಚೆ ಕಾಂಗ್ರೆಸ್, ಜೆಡಿಎಸ್ ಪಕ್ಷದ ಹಲವರು ಕನ್ನಡದ ಅ ಆ ಇ ಈ ಬರದವರು ಕರ್ನಾಟಕದಲ್ಲಿ ಉನ್ನತ ಸ್ಥಾನಕ್ಕೆಕ್ಕೇರಿದ್ದರು. ಆ ಸಮಯದಲ್ಲಿ ಅದ್ಯಾವಾ ಕನ್ನಡ ಪ್ರೇಮಿಗಳೂ ತುಟಿಕ್ ಪಿಟಿಕ್ ಅಂದಿಲ್ಲ ಯಾಕೆ? ಆಗ ಎಲ್ಲಿ ಹೋಗಿತ್ತು ನಿಮ್ಮ ಕನ್ನಡ ಪ್ರೇಮ? ಬಿಜೆಪಿ ಯಾವತ್ತೂ ಬೇಧ ಬಾವ ಮಾಡಲ್ಲ. ಇಲ್ಲಿ ಸಾಮಾನ್ಯ ಕಾರ್ಯಕರ್ತನಾದವನು ಪಕ್ಷಕ್ಕಾಗಿ ಈ ದೇಶಕ್ಕಾಗಿ ದುಡಿದವನಿಗೆ ಒಳ್ಳೆಯ ಸ್ಥಾನ ದೊರಕಿಯೇ ದೊರಕುತ್ತದೆ. ಒಬ್ಬ ಸಾಮಾನ್ಯ ಕಾರ್ಯನಾಗಿದ್ದವನನ್ನು ಇಂದು ಬಿಜೆಪಿ ಗುರುತಿಸಿ ಮೇಯರ್ ಮಾಡಿದ್ದಾರೆ. ಅದರೆ ಅದನ್ನು ತಡೆಕೊಳ್ಳದೆ ಕೆಲವರು ಬಿಜೆಪಿ ವಿರುದ್ಧ ಪ್ರತಿಭಟಿಸಲು ಮುಂದಾಗಿದ್ದಾರೆ.

ಹಾಗಾದರೆ ಸಂಪತ್ ರಾಜ್ ಒಬ್ಬ ತಮಿಳಿಗ ಈ ಮುಂಚೆ ಅವರು ಮೇಯರ್ ಆಗಿದ್ರು, ಆಂದ್ರದ ಪದ್ಮಾವತಿ ಎನ್ನುವ ಮಹಿಳೆ ಕೂಡಾ ಮೇಯರ್ ಪಟ್ಟವನ್ನು ಅಲಂಕರಿಸಿದ್ದರು. ಅವರೇನು ಕನ್ನಡವರಾ? ಕರ್ನಾಟಕದಲ್ಲಿ ಹುಟ್ಟಿ ಬೆಳೆದವರಾ? ಆ ಸಮಯದಲ್ಲಿ ಯಾರೂ ಸೊಲ್ಲಿತ್ತಿಲ್ಲ ಯಾಕೆ? ಅವರು ಯಾರೂ ಕಣ್ಣಿಗೂ ಕರ್ನಾಟಕದವರು ಅಲ್ಲ ಎಂಬುವುದು ಕಾಣಿಸಿಲ್ವಾ? ಆಗ ನಿಮ್ಮಂತಹ ಎಡಬಿಡಂಗಿಗಳಿಗೆ ಕನ್ನಡ ಪ್ರೇಮ ಎಲ್ಲಿ ಹೋಗಿತ್ತು….? ಅದು ಬಿಡಿ ನಿಮ್ಮ ಕಣ್ಣಿಗೆ ಆಗ ಪೊರೆ ಬಿದ್ದಿತ್ತು ಅಂದ್ರೆ ಕಳೆದ ಬಾರಿ ಕುಮಾರ ಸ್ವಾಮಿ ಮುಖ್ಯಮಂತ್ರಿಯಾದಾಗ ಕನ್ನಡದ ಗಂದ ಗಾಳಿ ಗೊತ್ತಿರದ ಜಮೀರ್ ಅಹಮ್ಮದ್ ಪ್ರಮಾಣವಚನ ಸ್ವೀಕಾರ ಮಾಡಿದ್ದು ಯಾವ ಭಾಷೆಯಲ್ಲಿ? ಅವರೇನು ಕನ್ನಡದಲ್ಲಿ ಪ್ರಮಾನವಚನ ಸ್ವೀಕಾರ ಮಾಡಿದ್ದಾರಾ? ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದು ಇಂಗ್ಲಿಷ್‍ನಲ್ಲಿ… ಆ ಸಮಯದಲ್ಲಿ ನಿಮ್ಮಂತಹ ಕನ್ನಡ ಪ್ರೇಮಿಗಳ ಕಿವಿಗೆ ಕೇಳಿಸಿಲ್ವಾ? ಅಂದು ಎಲ್ಲಿ ಹೋಗಿತ್ತು ಕನ್ನಡ ಪ್ರೇಮ? ಹಾಗಾದರೆ ನಿಮ್ಮ ಪ್ರಕಾರ ಬಿಜೆಪಿಗೊಂದು ನ್ಯಾಯ ಇತರ ಪಕ್ಷಕೊಂದು ನ್ಯಾಯಾನಾ? ಪ್ರತಿಭಟನೆ ಮಾಡಿ ಆದರೆ ಆ ಪಕ್ಷ ತಪ್ಪು ಮಾಡಿದ್ದರೆ ಮಾಡಿ ಇಲ್ಲದೆ ಇದ್ದರೆ ನಿಮ್ಮ ಇತರ ಪಕ್ಷದ ಪ್ರೇಮವನ್ನಿಟ್ಟುಕೊಂಡು ಸುಖಾಸುಮ್ಮನೆ ಇನ್ನೊಂದು ಪಕ್ಷದ ಬಗ್ಗೆ ವಿರೋಧ ಕಟ್ಟುವುದು ಸರಿಯಲ್ಲ. ನಾವೆಷ್ಟು ಬದ್ಧರಾಗಿದ್ದೇವೆ ಎಂದು ಪ್ರತಿಭಟನೆ ಮಾಡುವುದಕ್ಕಿಂತ ಮುಂಚಿತವಾಗಿ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು.

ಬಳ್ಳಾರಿಯ ಸಿಂಧನೂರು ತಾಲೂಕಿನಲ್ಲಿ ಹುಟ್ಟಿ ಬೆಳೆದ ಕನ್ನಡದ ಸುಪುತ್ರ ಇಂದು ಮೇಯರ್ ಆದಾಗ ಆತ ಒಬ್ಬ ಮಾರ್ವಾಡಿ ಉತ್ತರ ಭಾರತದ ಚೇಲಾ ಅಂತೆಲ್ಲಾ ಬಾಯಿಗೆ ಬಂದ ಹಾಗೆ ಜರಿದಾಗ ಈ ಮುಂಚೆ ಆಗಿ ಹೋದ ಇತಿಹಾಸಗಳನ್ನೆಲ್ಲಾ ಕೆದಕ ಬೇಕಾಗುತ್ತದೆ. ಹಾಗೆ ನೋಡುವುದಾದರೆ ಎ.ಕೆ ಜಾರ್ಜ್ ಕರ್ನಾಟಕದವರೇ… ಅವರು ಕೇರಳದವರು ಆದರೂ ಗೃಹಮಂತ್ರಿಯಾಗಿದ್ದಾರೆ. ಅವರಿಗೂ ಕನ್ನಡ ಓದೋಕು ಬರುತ್ತಿರಲಿಲ್ಲ ಬರೆಯೋಕು ಬರುತ್ತಿರಲಿಲ್ಲ. ಆಗ ಇಲ್ಲದ ಕನ್ನಡ ಪ್ರೇಮ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಒಬ್ಬ ಮೇಯರ್ ಆದಾದ ಯಾಕೆ ಅರೆಚಾಡುತ್ತಿದ್ದೀರಾ? ಸರವನ ಜೆಡಿಎಸ್ ಎಂಎಲ್‍ಸಿ ಆಗಿದ್ರು… ಕನ್ನಡದ ಅ ಇ ಬರದ ಹ್ಯಾರಿಸ್ ಮಂತ್ರಿಯಾದ್ರು ಯಾರೂ ತುಟಿಕ್ ಪಿಟಿಕ್ ಅಂದಿಲ್ಲ…ಅದು ಬಿಡಿ ಒಬ್ಬ ಕನ್ನಡಿಗನ ಮೇಲೆ ಹ್ಯಾರಿಸ್ ಮಗ ಬಾರ್ ನಲ್ಲಿ ಯದ್ವಾತದ್ವಾ ಹೊಡೆದು ಬದುಕುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ಹೊಡೆದಿದ್ರಲ್ವಾ ಆಗ ಎಲ್ಲಿತ್ತು ಕನ್ನಡ ಮೋಹ? ಒಬ್ಬನೇ ಒಬ್ಬ ನರಪಿಳ್ಳೆಯೂ ಈ ಬಗ್ಗೆ ತುಟಿಕ್ ಪಿಟಿಕ್ ಅಂದಿಲ್ಲ… ಇಂತಹ ನಾಟಕೀಯ ವಿಚಿತ್ರ ಅನಿಸಲ್ವಾ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಂಗ್ಲಾದೇಶಿ ಬಂಗಾಳಿ ಮುಸ್ಲಿಮರಿಗೆ ಓಟ್ ಬ್ಯಾಂಕಿನ ಆಸೆಯಿಂದ ಬೆಂಗಳೂರಿನ ಬೇಗೂರಿನಲ್ಲಿ ಎರಡು ಏಕರೆ ಜಾಗ ನೀಡಿದ್ದರು… ಕರ್ನಾಟಕ ಜನತೆಯನ್ನು ನಿರ್ಲಕ್ಷ ಮಾಡಿ ಅಂತವರಿಗೆ ಜಾಗ ನೀಡಿದಾಗಾಗ ಪಾಪ ಆ ಪ್ರತಿಭಟನಾಕಾರಿಗೆ ಸಿದ್ದರಾಮಯ್ಯನವರ ಮೇಲೆ ಕರುಣೆ ಉಕ್ಕಿಬರುತ್ತಿತ್ತೋ ಏನೋ…ಜಾಗ ಕೊಟ್ರೆ ಮುಂದೆ ಕಾಂಗ್ರೆಸ್ ಗೆ ಲಾಭ ಅಂತಾ ಒಳಗೊಳಗೆ ಕುಮ್ಮಕ್ಕೇನೋ ನಿಮ್ಮದು… ಈ ರೀತಿ ಬೇಕಾ ಬಿಟ್ಟಿ ಸುಖಾಸುಮ್ಮನೆ ಪ್ರತಿಭಟನೆ ಮಾಡಿದ್ರೆ ನಿಮ್ಮ ಮುಖಕ್ಕೆ ಜನ ಉಗಿಯುತ್ತಿರುತ್ತಾರೆ… ನಿಮ್ಮಂತವರ ಭಾಷಾ ಪ್ರೇಮ ಎಷ್ಟಿದೆ ಅಂತಾ ಇಡೀ ಕರ್ನಾಟಕಕ್ಕೆ ಗೊತ್ತು… ಸೋನಿಯಾ ಗಾಂಧಿ ಇಟಲಿಯಿಂದ ಬಂದು ಇಂತಹ ಕಾಂಗಿಗಳಿಗೆ ಅಧ್ಯಕ್ಷೆಯಾದಾಗ ನಿಮ್ಮಂತವರಿಗೆ ನಾಚಿಕೆಯಾಗಿಲ್ವಾ?! ಅವರು ಹೇಳಿದ್ದೇ ವೇದವಾಕ್ಯ ಅಂತ ಹೇಳಿಕೊಂಡು ತಿರುಗುವವರಿಗೆ ಕನ್ನಡ ಬೆಲೆ ಗೊತ್ತಾಗ್ತಿಲ್ವಾ?!

ಅಲ್ಪಸಂಖ್ಯಾತ ಜೈನ ಸಮುದಾಯದ ಬಳ್ಳಾರಿಯ ಸಿಂಧನೂರು ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದ ಕನ್ನಡದ ಸುಪುತ್ರ ಗೌತಮ್ ಕುಮಾರ್ ಜೈನ್ ಮಾತ್ರ ಮಾರ್ವಾಡಿ ಉತ್ತರ ಭಾರತದ ಚೇಲಾ ಅಂತೆಲ್ಲಾ ಹೇಳಿತ್ತಿರುವವರು ಅಫ್ಘಾನಿಸ್ತಾನದಿಂದ ಬಂದು ಈ ನಾಡಿನ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಬದಲಾಯಿಸಿ ಪರ್ಶಿಯಾ ಮತ್ತು ಅರೇಬಿಕನ್ನು ಆಡಳಿತ ಭಾಷೆಯಾಗಿಸಿದ ಟಿಪ್ಪು ಕನ್ನಡಿಗನಂತೆ? ಆತ ಕರ್ನಾಟಕದಲ್ಲಿ ಮಾಡಿದ ಅವಾಂತರಕ್ಕೆ ಕಾಂಗ್ರೆಸ್ ಜೆಡಿಎಸ್ ಸೇರಿ ಟಿಪ್ಪು ಜಯಂತಿ ಆಚರಿಸಿದಾಗ ನಿಮ್ಮ ಪ್ರತಿಭಟನೆ ಎಲ್ಲೂ ನಾವು ಕಂಡಿಲ್ಲ! ಇಂದು ಕನ್ನಡದ ಹೆಸರಲ್ಲಿ ಕೆಲವರು ಸಂಘಟನೆಯಲ್ಲಿ ಸೇರಿಕೊಂಡಿದ್ದಾರೆ. ಇಲ್ಲಿರುವ ಕೆಲವರಿಗೆ ಸರಿಯಾಗಿ ಕನ್ನಡ ವರ್ಣಮಾಲೆ ಹೇಳಲು ಕೂಡ ಬರಲ್ಲ. ಇನ್ನೂ ಕೆಲವರು ತಮ್ಮ ಹೆಂಡ, ಜೂಜು, ಮಟ್ಕಾ, ರೊಲ್ಕಾಲ್ ಕಾಳಧಂದೆ ರಕ್ಷಿಸಿಕೊಳ್ಳಲು ಕನ್ನಡದ ಹೆಸರಲ್ಲಿ ಸಂಘಟನೆಗೆ ಸೇರಿಕೊಂಡಿದ್ದಾರೆ. ಕನ್ನಡ ರಕ್ಷಣೆಯ ಹೆಸರಿನಲ್ಲಿ ಹಿಂದುಗಳ ನಡುವೆ ಒಡಕು ಮೂಡಿಸುತ್ತಿರುವ, ಉರ್ದು ಭಾಷಿಗರ ಹಿಡನ್ ಅಜೆಂಡಾ ಜಾರಿಗೆ ತರುತ್ತಿರುವ ಕೆಲವು ಕನ್ನಡ ಸಂಘಟನೆಗಳು ದಾರಿತಪ್ಪುತ್ತಿರುವುದು ಸ್ಪಷ್ಟವಾಗಿ ಗಮನಕ್ಕೆ ಬರುತ್ತಿದೆ. ರಾಜ್ಯದಲ್ಲಿ ಅನಾವಶ್ಯಕವಾಗಿ ಭಾಷಾ ಸಾಮರಸ್ಯ ಕದಡುತ್ತಿರುವ, ಭಾಷಾ ವೈಷಮ್ಯ ಸೃಷ್ಟಿಸಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿರುವ ಇಂತಹ ಕನ್ನಡ ಸಂಘಟನೆಗಳನ್ನು ಸರಕಾರ ತಕ್ಷಣ ನಿಷೇಧಿಸುವುದು ನಾಡಿನ ಮತ್ತು ಒಕ್ಕೂಟದ ಹಿತದೃಷ್ಟಿಯಿಂದ ಯೋಗ್ಯವಾದ ಸಂವಿಧಾನಾತ್ಮಕ ಕ್ರಮ. ಕನ್ನಡ ಪರ ಸಂಘಟನೆಗಳೆಂದ ಮಾತ್ರಕ್ಕೆ ಬೇಕಾ ಬಿಟ್ಟಿ ಹೋರಾಟ ಮಾಡುವರಿಗೆ ಬ್ರೇಕ್ ಬೀಳಬೇಕು…

Be the first to comment