ಆಯುಷ್ಮಾನ್ ಭಾರತ್ ಯೋಜನೆಯಿಂದ 11 ಲಕ್ಷ ಜನರಿಗೆ ಹೊಸ ಉದ್ಯೋಗ ಸೃಷ್ಟಿಯಾಗಲಿದೆ- ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದಾಗಿನಿಂದ ದೇಶ ಪ್ರಗತಿಯಾಗುತ್ತನೇ ಬರುತ್ತಿದ್ದು ಪ್ರತೀಯೊಂದು ಕ್ಷೇತ್ರದಲ್ಲಿಯೂ ಮೋದಿ ಮೋಡಿ ನಿಜವಾಗಿಯೂ ವಿರೋಧ ಪಕ್ಷದವರನ್ನೂ ತಲ್ಲಣಗೊಳಿಸುವಂತೆ ಮಾಡುತ್ತದೆ. ಒಂದು ಬಾರಿ ದೇಶದ ಅಭಿವೃದ್ಧಿಗಾಗಿ ದೃಢ ನಿರ್ಧಾರ ಮಾಡಿದರೆ ಆ ಕೆಲಸವಾಗದೆ ಅದನ್ನು ಕೈ ಬಿಟ್ಟವರವೇ ಅಲ್ಲ.. ನೋಟ್ ಬ್ಯಾನ್ ಹಾಗೂ ಜಿಎಸ್‍ಟಿ ಯಂತಹ ಮಹತ್ವದ ಆದೇಶಗಳನ್ನು ಜಾರಿಗೊಳಿಸಿದ ಮೋದಿ ಸರ್ಕಾರದ ಮೇಲೆ ಭರವಸೆಯ ಮಹಾಪೂರವನ್ನೇ ಜನತೆ ಇಟ್ಟುಕೊಂಡಿದೆ. ಇದನ್ನು ಹುಸಿ ಮಾಡದ ಮೋದಿ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಜನತೆಗೆ ಘೋಷಿಸಿತ್ತು… ಈ ಮೊದಲು ಹಲವಾರು ಕಡೆಗಳಲ್ಲಿ ಆರೋಗ್ಯ ಸಮಸ್ಯೆ ಬಂದಾಗ ಬಡ ಜನರು ಸರಿಯಾದ ಚಿಕಿತ್ಸೆಯನ್ನು ಪಡೆಯಲು ಹಣವಿಲ್ಲದೆ ಭಿಕ್ಷೆ ಬೇಡುವ ಪರಿಸ್ಥಿತಿಯಿತ್ತು. ಅದಲ್ಲದೆ ಹಲವರು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇದನ್ನೆಲ್ಲಾ ಗಮನಿಸುತ್ತಿದ್ದ ನರೇಂದ್ರ ಮೋದಿಯವರು ಇದಕ್ಕೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆಂದು ನಿರ್ಧರಿಸಿ ಇಡೀ ವಿಶ್ವದಲ್ಲೇ ಇರದ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಬಡ ಜನರ ಮನದಲ್ಲಿ ಮಂದಹಾಸವನ್ನುಂಟು ಮಾಡಿದ್ದರು. ಈ ಯೋಜನೆ ವಿಶ್ವದಲ್ಲೇ ಮೊದಲ ಬಾರಿಗೆ ಜಾರಿಗೆ ಬಂದಿದ್ದು ಪ್ರಧಾನಿ ನರೇಂದ್ರ ಮೋದಿ ಸರಕಾರದ ಈ ಮಹತ್ವದ ಹೆಜ್ಚೆ ವಿಶ್ವ ದಾಖಲೆಯಾಗಿದೆ… ಬಡ ಜನತೆ ಇದರಿಂದ ಉಪಯೋಗವಾವುದಲ್ಲದೆ ಅದೆಷ್ಟೋ ಲಕ್ಷಾಂತರ ಜನರಿಗೆ ಉದ್ಯೋಗ ಲಭಿಸುತ್ತಿದೆ.

ಹೌದು… ಆಯುಷ್ಮಾನ್ ಭಾರತ್ ಜನ ಆರೋಗ್ಯ ಯೋಜನೆ ಅನ್ನು ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ ಎಂದು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನು 5-7 ವರ್ಷಗಳ ಅವಧಿಯಲ್ಲಿ ಈ ಯೋಜನೆಯೂ ಆರೋಗ್ಯ ಕ್ಷೇತ್ರದಲ್ಲಿ 11 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದಿದ್ದಾರೆ. ಅಂದಾಜಿನ ಪ್ರಕಾರ ಮುಂದಿನ 5-7 ವರ್ಷಗಳಲ್ಲಿ ಈ ಯೋಜನೆಯಿಂದಾಗಿ ಸೃಷ್ಟಿಯಾಗುವ ಬೇಡಿಕೆಗಳಿಂದಾಗಿ ಸುಮಾರು 11 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಇಷ್ಟೊಂದು ಪ್ರಮಾಣದ ಉದ್ಯೋಗವನ್ನು ಕೇವಲ ರೈಲ್ವೆಗೆ ಮಾತ್ರ ಇದುವರೆಗೆ ಸೃಷ್ಟಿಸಲು ಸಾಧ್ಯವಾಗುತ್ತಿತ್ತು ಎಂದಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆಯು ಒಂದು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭಾರತದ ಆರೋಗ್ಯ ರಕ್ಷಣೆಯ ಮಾದರಿ ಜಗತ್ತಿಗೆ ಒಂದು ಉದಾಹರಣೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ 46 ಲಕ್ಷ ಜನರು ಕಾರ್ಯಕ್ರಮದಡಿಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ಹೇಳಿದ ಮೋದಿ ಯೋಜನೆಯ ಅನುಷ್ಠಾನಕಾರರಿಗೆ ಅಭಿನಂದನೆಗಳನ್ನು ತಿಳಿಸಿದರು. ಫಲಾನುಭವಿಗಳನ್ನು ರೋಗದ ಕೂಪದಿಂದ ಯಶಸ್ವಿಯಾಗಿ ಹೊರ ತೆಗೆಯಲಾಗಿದೆ ಎಂದು ಅವರು ಘೋಷಿಸಿದರು. ಈ ಯೋಜನೆಯನ್ನು ಬಡವರ ಗೆಲುವು ಎಂದು ಕರೆದ ಮೋದಿ ವೈದ್ಯಕೀಯ ಚಿಕಿತ್ಸೆಗಾಗಿ ಯಾವುದೇ ವ್ಯಕ್ತಿಯ ಭೂಮಿ, ಮನೆ ಆಭರಣಗಳು ಅಥವಾ ಇನ್ನಾವುದೇ ಅಮೂಲ್ಯ ವಸ್ತು ಅಡವಿಡುವುದರಿಂದ ತಪ್ಪಿದೆ ಎಂದರೆ ಅದುವೇ ಆಯುಷ್ಮಾನ್ ಯೋಜನೆಯ ಅತೀದೊಡ್ಡ ಜಯ ಎಂದು ಮೋದಿ ಬಣ್ಣಿದ್ದಾರೆ. ಒಟ್ಟಾರೆಯಾಗಿ ಮೋದಿ ಸರ್ಕಾರ ಈ ಯೋಜನೆ ಖಂಡಿತ ಬಡ ಜನರ ಪಾಲಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

Be the first to comment