ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಬಿಎಸ್‍ಎಫ್ ಶ್ವಾನದಳ…!

ಸ್ವಚ್ಛ ಭಾರತ ಮಹಾತ್ಮ ಗಾಂಧಿಯ ಕನಸಾಗಿದ್ದರೂ, ಅದನ್ನು ನನಸು ಮಾಡಿದ್ದು ಮೋದಿಜೀ… ಈ ಅಭಿಯಾನವು ಅಧಿಕೃತವಾಗಿ 2 ಅಕ್ಟೋಬರ್ 2014 ನವದೆಹಲಿಯಲ್ಲಿ ಪ್ರಧಾನಮಂತ್ರಿ ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಈ ಮಹತ್ತರವಾದ ಯೋಜನೆಯನ್ನು ಆರಂಭಿಸಿದರು. ಹೆಚ್ಚಿನ ಸಾರ್ವ­­ಜನಿಕ ಪ್ರದೇಶಗಳಲ್ಲಿ ಕೊಳೆ, ಕಸ­ಗಳನ್ನು ನೋಡಿ ತಾವೇನೂ ಮಾಡ­ಲಾ­ಗದೇ, ಅವು­ಗಳಿಗೆ ಅನಿವಾರ್ಯವಾಗಿ ಹೊಂದಿ­ಕೊಂಡಂತಿದ್ದ ಬಹ­ಳಷ್ಟು ಜನರಲ್ಲಿ ಆಶಾ­ಭಾವನೆಗಳು ಚಿಗುರೊಡೆದಿವೆ. ಪ್ರಧಾನಿ ಹುದ್ದೆಗೇರಿದ ಅನಂತರ ಮೋದಿಜೀ ಆರಂಭಿಸಿದ ಅತಿದೊಡ್ಡ ಆಂದೋಲನವೇ ಸ್ವತ್ಛ ಭಾರತ. ಈ ಆಂದೋಲನ ಆರಂಭವಾದಾಗಿನಿಂದ ಭಾರತದ ಪ್ರತೀಯೊಬ್ಬರು ಈ ಬಗ್ಗೆ ಹೆಚ್ಚು ಗಮನಹರಿಸಿ ಸ್ವಚ್ಛ ಭಾರತದತ್ತ ದೃಷ್ಟಿಕೋನವನ್ನಿಟ್ಟುಕೊಂಡಿದ್ದಾರೆ. ನಿನ್ನೆ ಗಾಂಧಿಜೀಯ 150ನೇ ಜನ್ಮ ದಿನಾಚರಣೆ ಇದರ ಪ್ರಯುಕ್ತ ಎಲ್ಲೆಡೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಸ್ವಚ್ಛತಾ ಅಭಿಯಾನದಲ್ಲಿ ಬಿಎಸ್‍ಎಫ್ ನ ವಿಶೇಷ ಶ್ವಾನದಳಗಳು ಸ್ವಚ್ಛತೆ ಮಾಡುವ ಮೂಲಕ ಇಡೀ ದೇಶಕ್ಕೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದೆ.

ಸ್ವಚ್ಛತಾ ಅಭಿಯಾನದಲ್ಲಿ ಬಿಎಸ್‍ಎಫ್ ಶ್ವಾನದಳ ಭಾಗಿ…

ಹೌದು… ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಪ್ರಯುಕ್ತ ನಿನ್ನೆ ಜಮ್ಮುವಿನ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದಲ್ಲಿ ಬಿಎಸ್‍ಎಫ್ ನ ಶ್ವಾನದಳ ಕೂಡ ಭಾಗಿಯಾಗಿತ್ತು. ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದ ಶ್ವಾನಗಳು ವಿಶೇಷ ತರಬೇತಿಯನ್ನು ಹೊಂದಿದ ಶ್ವಾನಗಳಾಗಿದ್ದು, ಗಡಿಯನ್ನು ಕಾಯಲು ಬಿಎಸ್‍ಎಫ್ ಯೋಧರಿಗೆ ಸಹಾಯ ಮಾಡುತ್ತದೆ. ಮಾತ್ರವಲ್ಲದೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತವೆ. ಇವುಗಳು ನಿನ್ನೆ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು ಮಾನವರಿಗೆ ಮಾದರಿಯಾದವು.

ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಹಿನ್ನಲೆಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯಂದು ಬಿಎಸ್‍ಎಫ್ ಸ್ವಚ್ಛತೆಯನ್ನು ಪ್ರಚುರ ಪಡಿಸುತ್ತಿದೆ. ಅಭಿಯಾನದ ಭಾಗವಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಯೋಧರು ಕೂಡಾ ಅಭಿಯಾನದಲ್ಲಿ ಭಾಗಿಯಾಗುತ್ತಿದ್ದಾರೆ, ನಮ್ಮ ಶ್ವಾನಗಳು ಕೂಡ ಈ ಅಭಿಯಾನದ ಅವಿಭಾಜ್ಯ ಭಾಗವಾಗಿದೆ ಎಂದು ಶ್ವಾನದಳದ ಮುಖ್ಯಸ್ಥ ಜಿಎಸ್ ನಾಗ್ ಹೇಳಿದ್ದಾರೆ. ಕಸಗಳನ್ನು ಹೆಕ್ಕಿ ಅವುಗಳನ್ನು ಕಸದ ಬುಟ್ಟಿಗೆ ಹಾಕುವ ತರಭೇತಿಯನ್ನು ಶ್ವಾನಗಳಿಗೆ ನೀಡಲಾಗಿದೆ.. ಶ್ವಾನಗಳಾದ ನಾವೇ ಕಸಗಳನ್ನು ತೆಗದು ಸ್ವಚ್ಛತೆಯಲ್ಲಿ ಭಾಗವಹಿಸಿರುವಾಗ ಮನುಷ್ಯರಾದ ನೀವು ಕೂಡಾ ಸ್ವಚ್ಛತೆಯಲ್ಲಿ ಭಾಗವಹಿಸಿ ಎಂಬ ಸಂದೇಶವನ್ನು ಶ್ವಾನಗಳು ರವಾನಿಸಿವೆ ಎಂದು ಹೇಳಿದ್ದಾರೆ.

Be the first to comment