ಕಾಶ್ಮೀರಕ್ಕೆ ಇಂದಿನಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ಸಂಚಾರ! ವೈಷ್ಣೋದೇವಿ ಭಕ್ತರಿಗೆ ನವರಾತ್ರಿ ಗಿಫ್ಟ್ ಎಂದ ಪ್ರಧಾನಿ…

ದೆಹಲಿ ಮತ್ತು ಕಾತ್ರಾ ನಡುವೆ ಸಂಚರಿಸಲಿರುವ ಎರಡನೇ ಅತ್ಯಾಧುನಿಕ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಇಂದು ನವದೆಹಲಿ ಜಂಕ್ಷನ್‍ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಸಿರು ನಿಶಾನೆ ತೋರಿಸಿದ್ದಾರೆ. ದೇಶಿಯವಾಗಿ ತಯಾರಿಸಲಾದ, ದೇಶದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆ ವಂದೇ ಭಾರತ್ ಎಕ್ಸ್‍ಪ್ರೆಸ್ ನದ್ದಾಗಿದೆ. ದೇಶದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ದೆಹಲಿ-ವಾರಣಾಸಿಯ ಮಾರ್ಗದಲ್ಲಿ ಈ ವರ್ಷದ ಫೆಬ್ರವರಿಯಿಂದ ಸಂಚರಿಸುತ್ತಿದೆ. ಇನ್ನು ದೆಹಲಿಯಿಂದ-ಕಾತ್ರಾಗೆ ಇಂದಿನಿಂದ ಇನ್ನೊಂದು ರೈಲು ಸಂಚಾರ ಮಾಡಲಿದೆ.

ರೈಲಿನಲ್ಲಿ ವೈಫೈ, ಜಿಪಿಎಸ್ ಆಧಾರಿತ ಇನ್ಫೋಟೇನ್‍ಮೆಂಟ್ ಸಿಸ್ಟಮ್, ಸಿಸಿ ಕ್ಯಾಮರಾ, ಬಯೋ ವಾಕ್ಯೂಮ್ ಶೌಚಗೃಹ ಇರುತ್ತದೆ. 22439 ನಂಬರ್ ನ ಈ ಟ್ರೇನ್ ದೆಹಲಿಯಿಂದ ಮುಂಜಾನೆ 6 ಗಂಟೆಗೆ ಹೊರಟು, ಮಧ್ಯಾಹ್ನ 2ಗಂಟೆಗೆ ಕಾತ್ರಾ ತಲುಪುತ್ತದೆ. ಹಾಗೇ ಕಾತ್ರಾದಿಂದ ಮಧ್ಯಾಹ್ನ 3ಕ್ಕೆ ಹೊರಟು ರಾತ್ರಿ 11 ಗಂಟೆಗೆ ದೆಹಲಿ ತಲುಪುತ್ತದೆ. ಮಂಗಳವಾರ ಹೊರತುಪಡಿಸಿ ಉಳಿದೆಲ್ಲ ದಿನ ರೈಲು ಸಂಚಾರ ಇರುತ್ತದೆ. ಬೇರೆ ರೈಲಿನಲ್ಲಿ 12 ತಾಸುಗಳ ಕಾಲ ಪ್ರಯಾಣ ಮಾಡಬೇಕಿತ್ತು. ಆದರೆ ವಂದೇ ಭಾರತ್ ಎಕ್ಸ್‍ಪ್ರೆಸ್ ಪ್ರಯಾಣದ ಅವಧಿ 8 ತಾಸಿಗೆ ಕಡಿತಗೊಳ್ಳಲಿದೆ. ದೆಹಲಿ-ಕಾತ್ರಾ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಟಿಕೆಟ್ ನ ಕನಿಷ್ಠ ಶುಲ್ಕ 1,630 ರೂ. ಹಾಗೂ ಗರಿಷ್ಠ ಶುಲ್ಕ 3,014 ರೂಪಾಯಿ.

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಾತನಾಡಿ, ಜಮ್ಮುಕಾಶ್ಮೀರದ ಅಭಿವೃದ್ಧಿಗೆ ಇದೊಂದು ದೊಡ್ಡ ಉಡುಗೊರೆ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ದೇಶಿಯವಾಗಿ ಅಭಿವೃದ್ಧಿ ಪಡಿಸಲಾದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಸಂಚಾರ ಕಾತ್ರಾಕ್ಕೂ ಪ್ರಾರಂಭವಾಗಿದ್ದರ ಬಗ್ಗೆ ಹೆಮ್ಮೆಯೆನಿಸುತ್ತಿದೆ ಎಂದಿದ್ದಾರೆ. ವೈಷ್ಣೋ ದೇವಿ ದೇವಾಲಯಕ್ಕೆ ತೀರ್ಥಯಾತ್ರೆಯನ್ನು ಕೈಗೊಳ್ಳುವ ಭಕ್ತಾದಿಗಳಿಗೆ ಈ ರೈಲಿನಿಂದ ಸಾಕಷ್ಟು ಪ್ರಯೋಜವಾಗಲಿದೆ. ಎರಡನೆಯ ವಂದೇ ಭಾರತ್ ಎಕ್ಸ್ ಪ್ರೆಸ್ ಇದಾಗಿದ್ದು ಮೊದಲನೆಯದಕ್ಕಿಂತ ಹೆಚ್ಚಿನ ಸುಧಾರಣೆಗಳೊಂದಿಗೆ ಕಾರ್ಯಾರಂಭ ಮಾಡಲಿದೆ.

ವೈಷ್ಣೋದೇವಿ ಭಕ್ತರಿಗೆ ನವರಾತ್ರಿ ಗಿಫ್ಟ್ ಎಂದ ಪ್ರಧಾನಿ…

ದೆಹಲಿ-ಕಾತ್ರಾ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಪ್ರಾರಂಭಗೊಂಡಿದ್ದು ಜಮ್ಮು ಕಾಶ್ಮೀರದ ಸಹೋದರ, ಸಹೋದರಿಯರಿಗೆ, ವೈಷ್ಣೋದೇವಿ ಭಕ್ತರಿಗೆ ನವರಾತ್ರಿ ಉಡುಗೊರೆ. ಕತ್ರಾ ಸಂಪರ್ಕ ಹೆಚ್ಚಿಸುವ ಜೊತೆ ಧಾರ್ಮಿಕ ಯಾತ್ರೆಗೂ ಅನುಕೂಲ ಮಾಡಿಕೊಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ವೈಷ್ಣೋ ದೇವಿ ದೇವಾಲಯಕ್ಕೆ ತೀರ್ಥಯಾತ್ರೆಯನ್ನು ಕೈಗೊಳ್ಳುವ ಭಕ್ತಾದಿಗಳಿಗೆ ಈ ರೈಲಿನಿಂದ ಸಾಕಷ್ಟು ಪ್ರಯೋಜವಾಗಲಿದೆ. ಎರಡನೇ ವಂದೇ ಭಾರತ್ ಎಕ್ಸ್‍ಪ್ರೆಸ್ ಇದಾಗಿದ್ದು ಮೊದಲನೆಯದಕ್ಕಿಂತ ಹೆಚ್ಚಿನ ಸುಧಾರಣೆಗಳೊಂದಿಗೆ ಕಾರ್ಯಾರಂಭ ಮಾಡಲಿದೆ.

Be the first to comment