ಇಸ್ಲಾಂ ರಾಷ್ಟ್ರವಾದರೂ ಪಾಲಿಸೋದು ಹಿಂದೂ ಧರ್ಮ! ಇಂಡೋನೇಷಿಯಾದ ಬಾಲಿಯಿಂದ ನಾವು ಕಲಿಯ ಬೇಕಾದದ್ದು ಸಾಕಷ್ಟಿದೆ…

ಮೊದಲು ಹಿಂದೂ ರಾಷ್ಟ್ರವಾಗಿದ್ದ ಇಂಡೋನೇಷ್ಯಾ ಈಗ 23 ಕೋಟಿ ಮುಸ್ಲಿಂ ಜನಸಂಖ್ಯೆ ಹೊಂದಿರುವ ಜಗತ್ತಿನ ಅತೀ ದೊಡ್ಡ ಮುಸ್ಲಿಂ ರಾಷ್ಟ್ರ. ಸುಮಾರು 800 ವರ್ಷಗಳ ಹಿಂದೆ ಹಿಂದೂ ರಾಜನನ್ನು ಸೋಲಿಸಿ ಮುಸ್ಲಿಂ ದೊರೆಯೊಬ್ಬ ಇಸ್ಲಾಂ ರಾಷ್ಟ್ರವನ್ನಾಗಿ ಪರಿವರ್ತಿಸಿದ್ದ. ಆದರೂ ಕೂಡಾ ಇಂಡೋನೇಷ್ಯಾದ ಜನ ಹಿಂದೂ ಸಂಸ್ಕøತಿಯನ್ನು ಇಂದಿಗೂ ಪಾಲನೆ ಮಾಡುತ್ತಾರೆ. ಹಿಂದೂ ದೇವರುಗಳ ಆರಾಧನೆಯನ್ನು ಮಾಡುತ್ತಿರುತ್ತಾರೆ. ಬಾಲಿಯಿಂದ ಭಾರತೀಯರಾದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ. ಭಾರತೀಯರಾದ ನಾವು ಹಿಂದೂ ಸಂಸ್ಕøತಿಯನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುವುದು ಈಗಾಗಲೇ ಎಲ್ಲರಿಗೂ ತಿಳಿದಿರುವಂತಹದ್ದು. ಮಾರ್ಕಾಂಡೇಯ, ಭರಧ್ವಾಜ ಮತ್ತು ಅಗಸ್ತ್ಯರ ಹೆಸರನ್ನು ದಿನಾ ಇಂಡೋನೇಷಿಯಾದ ಶಾಲೆಗಳಲ್ಲಿ ಬೋಧಿಸಲಾಗುತ್ತದೆ. ಆದರೆ ಭಾರತದಲ್ಲಿ ಯಾವ ಪಠ್ಯಪುಸ್ತಕದಲ್ಲಿ ಇವರುಗಳ ಹೆಸರನ್ನು ಕಾಣಬಹುದು? ಒಂದು ಬಾರಿ ಯೋಚಿಸಿ ಎಷ್ಟು ಜನ ಋಷಿಗಳು ನಮಗೆ ಗೊತ್ತು? 402 ಋಷಿ ಮುನಿಗಳು ಅಂದರೆ ಪುರುಷ ಮತ್ತು ಮಹಿಳೆ ಋಗ್ವೇದದ ಋಷಿವರ್ಯರಲ್ಲಿ ನಮಗೆ ಒಬ್ಬರ ಹೆಸರಾದರೂ ನೆನಪಿದೆಯೇ? ನಿಜಕ್ಕೂ ನಮಗೆ ನಾಚಿಕೆಯಾಗಬೇಕು..

ನೋಟಿನಲ್ಲೂ ಗಣಪತಿ ಚಿತ್ರ!!

ಇಂಡೋನೇಷ್ಯಾದ ನೋಟಿನ ಮೇಲೂ ಗಣಪತಿಯ ಚಿತ್ರವಿದೆ. ಇಲ್ಲಿ ಗಣಪತಿಯನ್ನು ವಿದ್ಯೆ ನೀಡುವ ದೇವರು ಎಂದು ಪೂಜಿಸುತ್ತಾರೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆ ಮಾಡಿದ ಹಜರ ದೇವಂತರ ಹುಟ್ಟಿದ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸುತ್ತಾರೆ. ಹಜರ ದೇವಂತರ ಚಿತ್ರದ ಜೊತೆಗೆ ಗಣಪತಿಯ ಚಿತ್ರವನ್ನು ಕೂಡಾ ನೋಟಿನ ಮೇಲೆ ಕಾಣಬಹುದು.

ಸಾಂಪ್ರಾದಾಯಿಕ ಉಡುಗೆಯಲ್ಲೇ ಹಿಂದೂ ದೇವಾಲಯಗಳಿಗೆ ಎಂಟ್ರಿ…

ಅದಲ್ಲದೆ ಮಹಿಳೆಯರು, ಪುರುಷರು, ಹುಡುಗಿಯರು ಮತ್ತು ಹುಡುಗರ ರಾಷ್ಟ್ರೀಯ ಉಡುಪು ಎಂದರೆ ಧೋತಿ. ಯಾರೇ ಆದರೂ ಧೋತಿ ಧರಿಸದೆ ದೇವಸ್ಥಾನದ ಒಳಗೆ ಪ್ರವೇಶಿಸುವಂತಿಲ್ಲ. ದಕ್ಷಿಣ ಭಾರತವನ್ನು ಹೊತರುಪಡಿಸಿ ಕೆಲವೊಂದು ಕಡೆ ಧೋತಿ ಹಾಕುವುದು ಎಂದರೆ ಕೆಲವರು ನಾಚಿಕೆ ಪಡುತ್ತಾರೆ.. ಕೆಲವರಿಗೆ ಈ ಧೋತಿಯ ಮಹತ್ವವೇ ಇನ್ನೂ ತಿಳಿದಿಲ್ಲ ಎಂದನಿಸುತ್ತದೆ. ನಮ್ಮ ಪರಂಪರೆಯನ್ನು ಉಳಿಸುವುದರಲ್ಲಿ ಅದರಲ್ಲಿ ಯಾವುದೇ ನಾಚಿಕೆ ಪಡಬೇಕಾಗಿಲ್ಲ. ಇದೇ ರೀತಿ ಭಾರತದಲ್ಲಿ ನಮ್ಮ ಸಂಸ್ಕøತಿಯನ್ನು ಉಳಿಸಲು ನಾಚಿಕೆ ಪಟ್ಟರೆ ನಿಜಕ್ಕೂ ಒಂದು ಈ ಸಂಸ್ಕøತಿಯೇ ಮಾಯವಾಗುವುದು ಖಂಡಿತ.

ದಿನಕ್ಕೆ ಮೂರು ಬಾರಿ ಗಾಯತ್ರಿಮಂತ್ರ ಪಠಣೆ…

ಭಾರತೀರಿಗೆ ಈ ವಿಚಾರ ಕೇಳಿದರೆನೇ ನಾಚಿಕೆಯಾಗಬೇಕು ಯಾಕೆಂದರೆ ದಿನಕ್ಕೆ ಮೂರು ಬಾರಿ ಸೂರ್ಯನ ಪೂಜೆ ಪ್ರತೀ ಇಂಡೋನೇಷಿಯಾದ ಶಾಲೆಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ. ಗಾಯತ್ರೀ ಮಂತ್ರವನ್ನು ಪ್ರತೀ ಮಗು ದಿನಕ್ಕೆ ಮೂರು ಬಾರಿ ಓದಿಸಲಾಗುತ್ತದೆ. ಅನೇಕ ಸ್ಥಳೀಯ ರೇಡಿಯೋ ಕೇಂದ್ರಗಳು ತ್ರಿಕಾಲ ಸಂಧ್ಯಾವನ್ನು ದಿನಕ್ಕೆ ಮೂರು ಬಾರಿ ಪ್ರಸಾರ ಮಾಡುತ್ತದೆ. ಆದರೆ ಭಾರತೀಯರಾಗಿ ನಾವು ನಮ್ಮ ಶಾಲೆಗಳಲ್ಲಿ ಇದೇ ರೀತಿಯ ಸಂಸ್ಕಾರವನ್ನು ಯಾಕೆ ಹೇಳಿ ಕೊಡಲಾಗುತ್ತಿಲ್ಲ. ತ್ರಿಕಾಲ ಸಂಧ್ಯಾದ ಬಗ್ಗೆ ನಮ್ಮ ಭಾರತದಲ್ಲಿ ಎಷ್ಟು ಹಿಂದೂಗಳು ತಿಳಿದುಕೊಂಡಿದ್ದಾರೆ. ಇಂದಿಗೂ ಇಂಡೋನೇಷಿಯಾದಲ್ಲಿ ಇಸ್ಲಾಮ್ ಧರ್ಮದಲ್ಲಿ ದಿನಕ್ಕೆ ಐದು ಬಾರಿ ಮುಸ್ಲಿಮರು ನಮಾಝ್ ಮಾಡುತ್ತಿದ್ದಾರೆ. ಆದರೆ ಭಾರತೀಯರಾದ ನಾವು ನಮ್ಮ ಸಂಸ್ಕøತಿಯನ್ನು ಬಿಟ್ಟು ಪಾಶ್ಚಾತ್ಯರೆಡೆ ವಾಲುತ್ತಿದ್ದೇವೆ.

ಮುಸ್ಲಿಂ ರಾಷ್ಟ್ರವಾದ ಇಂಡೋನೇಷಿಯಾದಲ್ಲೇ ನಮ್ಮ ಹಿಂದೂ ಸಂಸ್ಕøತಿಯನ್ನು ಇನ್ನೂ ಮರೆಯದೇ ಪಾಲಿಸುತ್ತಾ ಬರುತ್ತಿದ್ದಾರೆ ಎಂದರೆ ನಾವು ಭಾರತೀಯರಾಗಿ ನಮ್ಮ ತನವನ್ನು ನಾವು ಏಕೆ ಉಳಿಸಿಕೊಂಡಿಲ್ಲ. ನಾವು ನಮ್ಮ ಆಚಾರ ವಿಚಾರವನ್ನು ಏಕೆ ಮರೆತಿದ್ದೇವೆ. ಇಂಡೋನೇಷಿಯಾದಂತಹ ದೇಶವನ್ನು ನೋಡಿಯಾದರೂ ಆಚಾರ-ವಿಚಾರಗಳನ್ನು ಕಲಿಯೋಣ.. ಭಾರತದ ಸಂಸ್ಕøತಿಯನ್ನು ಉಳಿಸೋಣ.

Be the first to comment