ಕಲಂ 370 ದೊಡ್ಡ ಪ್ರಮಾದವಾಗಿತ್ತು ಅದನ್ನು ಮೋದಿ ಸರ್ಕಾರ ಸರಿಪಡಿಸಿದೆ – ಹರೀಶ್ ಸಾಲ್ವೆ

ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ಆರ್ಟಿಕಲ್ 370ಯನ್ನು ಮೋದಿ ಸರ್ಕಾರ ಯಾವಾಗ ರದ್ದು ಮಾಡಿತೋ ಅಂದಿನಿಂದ ಅಲ್ಲಿನ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಮುಂಚೆ ಅಲ್ಲಿನ ಜನತೆ ಕೇಂದ್ರದ ಅನುದಾನಗಳಿಂದ ವಂಚಿತರಾಗಿದ್ದರು. ಯಾಕೆಂದರೆ ಒಂದೇ ದೇಶವಾದರೂ ನೆಹರೂವಿನ ಕೃಪಾಕಟಾಕ್ಷದಿಂದ ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿ ನಮ್ಮಿಂದ ದೂರವಾಗಿಸಿ ಬಿಟ್ಟಿದ್ದರು. ಆದರೆ ಇದಕ್ಕೆಲ್ಲಾ ಈಗ ಮೋದಿ ಸರ್ಕಾರ ಪೂರ್ಣವಿರಾಮವಿಟ್ಟಿದೆ. ದೇಶ ವಿದೇಶಗಳಲ್ಲಿ ಮೋದಿಜೀಯ ಈ ನಿರ್ಧಾರಕ್ಕೆ ಶಬ್ಬಾಶ್ ಎಂದಿದ್ದಾರೆ. ಇದೀಗ ಭಾರತದ ಖ್ಯಾತ ವಕೀಲರಾದ ಹರೀಶ್ ಸಾಲ್ವೆ ಕೂಡಾ ಆರ್ಟಿಕಲ್ 370 ರದ್ಧತಿ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಹೌದು… ಸಂವಿಧಾನದ 370 ನೇ ವಿಧಿ ದೊಡ್ಡ ಪ್ರಮಾದ ಆಗಿದ್ದು ಅದನ್ನು ನರೇಂದ್ರ ಮೋದಿ ಸರ್ಕಾರ ರದ್ದುಪಡಿಸಿ ಪ್ರಮಾದವನ್ನು ಸರಿಪಡಿಸಿದೆ ಎಂದು ಖ್ಯಾತ ವಕೀಲ ಹರೀಶ್ ಸಾಲ್ವೆ ಅಭಿಪ್ರಾಯಿಸಿದ್ದಾರೆ. ಯಾವಾಗ ಮೋದಿ ಸರ್ಕಾರ ಕಲಂ 370 ನ್ನು ರದ್ದು ಮಾಡಿತೋ ಅಂದಿನಿಂದ ಪಾಕಿಸ್ತಾನದ ಹಾರಾಟ ಸ್ವಲ್ಪ ಜಾಸ್ತಿಯಾಗಿದೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪಿಒಕೆ ಭಾರತದ್ದೇ ಆದರೂ ಅದರಲ್ಲಿ ಪಾಕಿಸ್ತಾನ ಅಕ್ರಮವಾಗಿ ನೆಲೆಯೂರಿದೆ. ಯಾವುದಾದರೂ ವಿವಾದಿತ ಪ್ರದೇಶ ಇದ್ದರೆ ಅದು ಪಿಒಕೆ ಮಾತ್ರ. ಕಾಶ್ಮೀರದ ಸಂವಿಧಾನವೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹೇಳುತ್ತದೆ. ಕಾಶ್ಮೀರ ಭಾರತದ್ದು ಎಂಬ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ಕೆಲವು ಪಾಕಿಸ್ತಾನಿ ಮನಸ್ಥಿತಿಗಳಲ್ಲಿ ಮಾತ್ರ ಅನುಮಾನವಿದೆ ಎಂದಿದ್ದಾರೆ.

ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ಕಲಂ 370 ವಿಧಿ ರದ್ಧತಿ ಬಗ್ಗೆ ನಾನು ಮೋದಿ ಸರ್ಕಾರಕ್ಕೆ ಸದಾ ಬೆಂಬಲಿಸುತ್ತೇನೆ. ಆದರೆ ಆ ವಿಧಿಗೆ ಅನುಮತಿಯನ್ನು ನೀಡಿದ್ದೇ ತಪ್ಪು. ಇದರಿಂದ ಇಷ್ಟು ವರ್ಷಗಳ ಕಾಲ ಕಾಶ್ಮೀರದ ಜನತೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂದಿದ್ದಾರೆ. ಕೆಲವರು ಮೋದಿ ಸರ್ಕಾರ 370 ವಿಧಿಯನ್ನು ರದ್ದು ಮಾಡಿರುವುದಕ್ಕೆ ಬೇಕಾ ಬಿಟ್ಟಿ ಮಾತುಗಳನ್ನಾಡಿವೆ. 370 ರದ್ಧತಿ ಮಾಡುವ ಮೊದಲು ಸರ್ಕಾರ ಮಾತು ಕತೆ ನಡೆಸಬೇಕಿತ್ತು ಎನ್ನುವುದು ಕೆಲವರ ವಾದ. ಆದರೆ ಈ ವಾದ ಅರ್ಥಹೀನ. ಒಂದೇ ಬಾರಿ ಈ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಮೋದಿ ಸರ್ಕಾರದ ಉತ್ತಮ ನಿರ್ಧಾರ ಎಂದಿದ್ದಾರೆ.

Be the first to comment