ನಿಮ್ಮನ್ನು ಬೆಂಬಲಿಸುವ 58 ರಾಷ್ಟ್ರಗಳಾವುದು ಎಂಬ ಮಾಧ್ಯಮದ ಪ್ರಶ್ನೆಗೆ ಕೆಂಡಾಮಂಡಲವಾದ ಪಾಕ್ ವಿದೇಶಾಂಗ ಸಚಿವ…

ಪಾಕಿಸ್ತಾನ ಎತ್ತ ಮುಖ ಮಾಡಿದರೂ ಬರೀ ಅವಮಾನ ಅವಮಾನ… ಅದರಲ್ಲೂ ಭಾರತದ ವಿರೋಧ ನಿಂತರೆ ಇಡೀ ವಿಶ್ವ ಪಾಕಿಸ್ತಾನಕ್ಕೆ ಛೀ ಥೂ ಅಂತಾ ಉಗಿಯುತ್ತೆ! ಜಮ್ಮು ಕಾಶ್ಮೀರ ವಿಚಾರದಲ್ಲಿ ಇಡೀ ವಿಶ್ವ ಭಾರತದ ಪರ ನಿಂತ ವಿಚಾರ ಎಲ್ಲರಿಗೂ ತಿಳಿದಿರುವಂತಹದ್ದು. ಅಂತಹುದರಲ್ಲಿ ಈ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇತ್ತೀಚೆಗೆ ವಿಶ್ವದ 58 ರಾಷ್ಟ್ರಗಳು ನಮ್ಮ ಬೆಂಬಲಕ್ಕೆ ನಿಂತಿವೆ ಅಂತ ತನ್ನ ಮರಿಯಾದೆ ಉಳಿಸಿಕೊಳ್ಳಲು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ಬರುತ್ತಿದೆ. ಇದನ್ನೇ ಅನುಸರಿಸಿಕೊಂಡು ಬಂದ ಮೊಹಮ್ಮದ್ ಖುರೇಶಿ ಕೂಡಾ ಇದೇ ರೀತಿ ಹೇಳುತ್ತಾ ತಿರುಗುತ್ತಿದ್ದಾರೆ. ನಿಮ್ಮನ್ನು ಬೆಂಬಲಿಸುವ ಆ 58 ದೇಶಗಳು ಯಾವುವು ಎಂಬ ಸಂದೇಹವನ್ನು ಮಾಧ್ಯಮಗಳು ಖುರೇಶಿ ಜೊತೆ ಪ್ರಶ್ನಿಸಿದ್ದಾರೆ. ಆದರೆ ಆ ಪ್ರಶ್ನೆ ಕೇಳುತ್ತಿದ್ದಂತೆಯೇ ಮೊಹಮ್ಮದ್ ಖುರೇಷಿ ತಾಳ್ಮೆ ಕಳೆದುಕೊಂಡು ಮಾಧ್ಯಮಗಳ ಮೇಲೆಯೇ ಹರಿಹಾಯ್ದಿದಿದ್ದಾರೆ.

ಹೌದು… ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯೊಂದು ಖುರೇಷಿಯೊಂದಿಗೆ ಸಂದರ್ಶನ ನಡೆಸಿದ್ದು, ಸಂದರ್ಶನದ ವೇಳೆ ಸಂದರ್ಶನಕಾರ ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ 58 ರಾಷ್ಟ್ರಗಳು ಯಾವುವು ಎಂದು ಕೇಳಿದ್ದಾರೆ. ಆದರೆ ಪ್ರಶ್ನೆಗೆ ಉತ್ತರಿಸದ ಖುರೇಶಿ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದಾರೆ. ಯಾರ ಅಜೆಂಡಾ ಪರವಾಗಿ ನೀವು ಕೆಲಸ ಮಾಡುತ್ತಿದ್ದೀರಾ? ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಯಾವ ರಾಷ್ಟ್ರಗಳು ಬೆಂಬಲಿಸಿವೆ ಅಥವಾ ಇಲ್ಲ ಎಂಬುದನ್ನು ನೀವು ನನಗೆ ಹೇಳಲು ಬರುತ್ತಿದ್ದೀರಾ? ನಿಮಗೆ ಬೇಕಾದದ್ದನ್ನು ನೀವು ಬರೆದುಕೊಳ್ಳಿ ಎಂದು ಹರಿಹಾಯ್ದಿದ್ದಾರೆ. ಇದೇ ವೇಳೆ ಖುರೇಷಿಯವರು ಈ ಹಿಂದೆ ಬರೆದುಕೊಂಡಿದ್ದ ಟ್ವೀಟ್ ಬಗ್ಗೆ ಸಂದರ್ಶನಕಾರ ಹೇಳಿದಾಗ, ಆ ಟ್ವೀಟ್ ನ್ನು ನನಗೆ ತೋರಿಸಿ. ಪ್ರಧಾನಮಂತ್ರಿ ಇಮ್ರಾನ್ ಖಾನ್ ಬರೆದ ಟ್ವೀಟ್ ಅಲ್ಲ, ನಾನು ಬರೆದ ಟ್ವೀಟ್ ನ್ನು ನನಗೆ ತೋರಿಸಿ ಎಂದು ಹೇಳಿದ್ದಾರೆ. ಈ ವೇಳೆ ಟ್ವೀಟ್ ತೋರಿಸಿದ ಬಳಿಕ ಮರೆಮಾಚಿಕೊಳ್ಳಲು ಯತ್ನಿಸಿರುವ ಖುರೇಷಿ, ಇದರಲ್ಲಿ ತಪ್ಪೇನೂ ಇಲ್ಲ. ನನ್ನ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ. ಇದರಲ್ಲಿ ಆಶ್ಚರ್ಯ ಪಡುವುದೇನಿದೆ. ನೀವು ಯಾರ ಅಜೆಂಡಾವನ್ನು ಅನುಸರಿಸುತ್ತಿದ್ದೀರಿ ಎಂದು ಸಂದರ್ಶನಕಾರನನ್ನು ಪ್ರಶ್ನಿಸಿದ್ದಾರೆ. ಒಟ್ಟಾರೆಯಾಗಿ ಇಡೀ ವಿಶ್ವದ ಮುಂದೆ ಪಾಖಿಸ್ತಾನದ ಮಾನ ಹೋಗುತ್ತಿರುವಾಗ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸುಳ್ಳು ಸುದ್ಧಿ ಹರಡುತ್ತಿರುವ ಇಂತವರ ನಿಜ ಬಣ್ಣ ಬಟಾಬಯಲಾಗುತ್ತಿದೆ.

Be the first to comment