ಪಾಕಿಸ್ತಾನಕ್ಕೆ ಭಾರತೀಯ ವಾಯುಪಡೆಯಿಂದ ಖಡಕ್ ವಾರ್ನಿಂಗ್! ಉಗ್ರರ ಒಳನುಸುಳುವಿಕೆ ನಿಲ್ಲದಿದ್ದರೆ ಬಾಲಾಕೋಟ್ ವೈಮಾನಿಕ ದಾಳಿ ಮತ್ತೆ ಪುನರಾವರ್ತನೆಯಾಗುತ್ತೆ…

ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನು ಯಾವತ್ತೂ ಬಿಡಲ್ಲ ಅಂತಾ ಇಡೀ ಜಗತ್ತಿಗೆ ತಿಳಿದಿದೆ. ಉಗ್ರರನ್ನು ಪೋಷಣೆ ಮಾಡಲ್ಲ ಅಂತಾ ಜಗತ್ತಿನ ಕಣ್ಣೆಗೆ ಮಣ್ಣೆರಚಿ ಭಾರತ ವಿರುದ್ಧ ಉಗ್ರರನ್ನು ಛೂ ಬಿಡುತ್ತಿದೆ. ಇದಕ್ಕೆ ಪ್ರತಿಯಾಗಿ ಇದೀಗ ಸೇನೆ ಖಡಕ್ ಸಂದೇಶವನ್ನು ರವಾನಿಸಿದೆ. ಭಾರತ ಗಡಿಯಲ್ಲಿ ಉಗ್ರ ಒಳನುಸುಳುವಿಕೆಯನ್ನು ನಿಲ್ಲಿಸದಿದ್ದರೆ, ಬಾಲಕೋಟ್ ವೈಮಾನಿಕ ದಾಳಿ ಪುನಾರವರ್ತನೆಗೊಳ್ಳಲಿವೆ ಎಂದು ಪಾಕಿಸ್ತಾನಕ್ಕೆ ಭಾರತೀಯ ವಾಯುಪಡೆ ಎಚ್ಚರಿಕೆ ನೀಡಿದೆ.

ಪಾಕ್ ಗೆ ಎಚ್ಚರಿಕೆ ರವಾನಿಸಿದ ವಾಯುಪಡೆ…

ಬಾಲಕೋಟ್ ವೈಮಾನಿಕ ದಾಳಿಯ ಪೆÇ್ರೀಮೋ ವಿಡಿಯೋ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿರುವ ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ದುಷ್ಕøತ್ಯವನ್ನು ಮಾಡಲು ಪಾಕಿಸ್ತಾನ ಸಂಚು ರೂಪಿಸುತ್ತಿದೆ ಎಂಬ ವರದಿಗಳು ಬಂದಿದ್ದು, ಪಾಕಿಸ್ತಾನದ ಯಾವುದೇ ದಾಳಿ ಎದುರಿಸಲು ನಾವು ಸರ್ವ ಸನ್ನದ್ಧರಾಗಿದ್ದೇವೆಂದು ಹೇಳಿದ್ದಾರೆ.

ಭಾರತದೊಳಗೆ ಪಾಕಿಸ್ತಾನ ತನ್ನ ಉಗ್ರರ ಒಳನುಸುಳುವಿಕೆಯನ್ನು ನಿಲ್ಲಿಸದಿದ್ದರೆ, ಬಾಲಕೋಟ್ ಉಗ್ರರ ತರಬೇತಿ ನೆಲೆಗಳ ಮೇಲೆ ನಡೆಸಲಾದ ವೈಮಾನಿಕ ದಾಳಿಗಳು ಪುನರಾವರ್ತನೆಗೊಳ್ಳಲಿವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ. ನಾವು ಮೊದಲು ದಾಳಿ ಮಾಡುವುದಿಲ್ಲ. ಆದರೆ, ಪಾಕಿಸ್ತಾನವೇನಾದರೂ ದಾಳಿ ಮಾಡಿದ್ದೇ ಆದರೆ, ಭಾರತ ಸರ್ಕಾರ ಯಾವುದೇ ಆದೇಶ ನೀಡಿದರೂ ಆ ಪ್ರಕಾರ ಪ್ರತಿಕ್ರಿಯೆ ನೀಡುತ್ತೇವೆ. ಸರ್ಕಾರ ಯಾವ ರೀತಿ ಹೇಳುತ್ತೋ, ಅದರ ಅನುಸಾರ ನಾವು ನಡೆಯಲಿದ್ದೇವೆಂದು ತಿಳಿಸಿದ್ದಾರೆ. ಮತ್ತೆ ಪಾಕಿಸ್ತಾನ ಭಾರತ ವಿರುದ್ಧ ನಡಿಯಿತೇ ಆದಲ್ಲಿ ಖಂಡಿತ ಈ ಬಾರಿ ವೈಮಾನಿಕ ದಾಳಿಗಿಂತ ಭಯಾನಕ ದಾಳಿಯನ್ನು ಪಾಕಿಸ್ತಾನ ಎದುರಿಸಲು ತಯಾರಿರಬೇಕಾಗುತ್ತದೆ. ನಾವು ಸುಮ್ಮನಿರುತ್ತೇವೆ ಆದರೆ ಪಾಕಿಸ್ತಾನ ಪದೇ ಪದೇ ಹುಚ್ಚಾಟ ಶುರುಮಾಡಿದರೆ ಭಾರತದ ತಾಕತ್ತು ಏನು ಎಂಬುವುದನ್ನು ಮರೆತಿದ್ದರೆ ಮತ್ತೆ ನೆನೆಪಿಸಬೇಕಾಗುತ್ತದೆ ಹುಷಾರ್….

Be the first to comment