ಯೋಧರ ಪರಿಹಾರ 4 ಪಟ್ಟು ಹೆಚ್ಚಳ ಮಾಡಿದ ಮೋದಿ ಸರ್ಕಾರ…

ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಯಾವಾಗಲೂ ದೇಶದ ಗಡಿ ಕಾಯುವ ಯೋಧರ ಬಗ್ಗೆ ನೆನಪಿಸುತ್ತಾ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಯಾವಾಗಲೂ ಶ್ರಮಿಸುತ್ತಿರುತ್ತಾರೆ. ಒಂದಲ್ಲ ಒಂದು ವಿಷಯಗಳಲ್ಲಿ ಸೈನಿಕರ ಬಗ್ಗೆ ಕಾಳಜಿ ವಹಿಸಿ ಅವರಿಗೆ ಅವಶ್ಯ ವಸ್ತುಗಳನ್ನು ಪೂರೈಸುವಲ್ಲಿ ಶ್ರಮಿಸುತ್ತಿರುತ್ತಾರೆ. ಇದೀಗ ಸೇನೆಯ ದೀರ್ಘಕಾಲದ ಬೇಡಿಕೆಯನ್ನು ಮೋದಿ ಸರ್ಕಾರ ಪೂರೈಸಿದೆ.

ಹೌದು… ನರೇಂದ್ರ ಮೋದಿ ಸರ್ಕಾರವು ಸೇನೆಯ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದೆ. ಯುದ್ಧದ ಸಂದರ್ಭದಲ್ಲಿ ನಡೆಯುವ ದುರ್ಘಟನೆಯ ವೇಳೆ ಯೋಧರ ಕುಟುಂಬಿಕರಿಗೆ ನೀಡುವ ಹಣಕಾಸು ನೆರವಿನ ಪ್ರಮಾಣವನ್ನು ರೂ. 2 ಲಕ್ಷದಿಂದ ರೂ. 8 ಲಕ್ಷಕ್ಕೆ ಹೆಚ್ಚಳಗೊಳಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅನುಮೋದನೆಯನ್ನು ನೀಡಿದ್ದಾರೆ. ಯುದ್ಧದ ಸಮಯದಲ್ಲಿನ ದುರ್ಘಟನೆ ಸಂದರ್ಭದಲ್ಲಿ ಸೈನಿಕರ ಕುಟುಂಬಗಳಿಗೆ ನೀಡಲಾಗುವ ಆರ್ಥಿಕ ನೆರವಿನ ಮೊತ್ತವನ್ನು 2 ಲಕ್ಷ ರೂಗಳಿಂದ 8 ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ. ಈ ಮೊತ್ತವನ್ನು Army Battle casualities Welfare Fund(ABCWF) ಮೂಲಕ ನೀಡಲಾಗುತ್ತದೆ. ಅಲ್ಲದೆ ದುರ್ಘಟನೆಯ ವೇಳೆ ಹುತಾತ್ಮರಾಗುವ ಅಥವಾ ಶೇಕಡಾ 60 ರಷ್ಟು ಮತ್ತು ಅದಕ್ಕಿಂತ ವಿಕಲಾಂಗತೆಗೆ ಒಳಗಾಗುವ ಯೋಧರ ಕುಟುಂಬಿಕರಿಗೆ ಈ ಮೊತ್ತವನ್ನು ನೀಡಲಾಗುತ್ತದೆ. ಉದಾರೀಕೃತ ಕುಟುಂಬ ಪಿಂಚಣೆ ಆರ್ಮಿ ಗ್ರೂಪ್ ವಿಮೆಯಿಂದ ಆರ್ಮಿ ವೆಲ್ಫೇರ್ ಫಂಡ್‍ನಿಂದ ಹಣಕಾಸು ನೆರವು ಮತ್ತು ಎಕ್ಸ್-ಗ್ರೇಟಿಯಾ ಮೊತ್ತದ ಜೊತೆಗೆ ಹೆಚ್ಚುವರಿಯಾಗಿ ಈ ಮೊತ್ತವನ್ನು ಯೋಧರ ಕುಟುಂಬಕ್ಕೆ ನೀಡಲಾಗುತ್ತದೆ.

Be the first to comment