72 ವರ್ಷದ ಬಳಿಕ ಮೊದಲ ಬಾರಿಗೆ ಪಿಒಕೆಯ ಶಾರದಾ ಪೀಠದಲ್ಲಿ ಪೂಜೆ ನಡೆಸಿದ ಭಾರತೀಯ ಹಿಂದೂ ದಂಪತಿಗಳು…

72 ವರ್ಷಗಳ ನಂತರ ಮೊದಲ ಬಾರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದ ಶಾರದಾ ಪೀಠದಲ್ಲಿ ಭಾರತೀಯ ಮೂಲದ ಹಿಂದೂ ದಂಪತಿಗಳಿಬ್ಬರು ಪೂಜೆ ನಡೆಸಿದ್ದಾರೆ. ಹೌದು…ಪಿ.ಕೆ.ವೆಂಕಟ ರಮಣ ಮತ್ತು ಅವರ ಪತ್ನಿ ಸುಜಾತಾ, ಹಾಂಕಾಂಗ್ ನಲ್ಲಿರುವ ಹಿಂದೂ ದಂಪತಿ ಭಾರತೀಯ ಮೂಲದವರು, ಶಾರದಾ ದೇವಾಲಯದ ಬಳಿ ಪೂಜೆಯನ್ನು ‘ಸೇವ್ ಶಾರದಾ ಸಮಿತಿ’ ಮತ್ತು ಪಿಒಕೆ ನಾಗರಿಕ ಸಮಾಜದ ಸಂಘಟಿತ ಪ್ರಯತ್ನಗಳ ಮೂಲಕ ಅಲ್ಲಿ ಪೂಜೆ ನಡೆಸಿದ್ದಾರೆ. ವಾಲಿಡ್ ವೀಸಾದ ಮೂಲಕ ಈ ದಂಪತಿಗಳು ಪಿಒಕೆಗೆ ಪ್ರಯಾಣ ಬೆಳೆಸಿ ಪೂಜೆಯನ್ನು ಸಲ್ಲಿಸಿ ಶಾರದಾ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಆರ್ಟಿಕಲ್ 370 ಯನ್ನು ರದ್ದುಗೊಳಿಸಿರುವ ಕಾರಣ ಭಾರತ ಸರ್ಕಾರದ ಕ್ರಮವನ್ನು ಪ್ರತಿಭಟಿಸಿ ಕಳೆದ ಮೂರು ದಿನಗಳಿಂದ ಪಿಒಕೆಯ ಕೆಲ ಜನರು ನಿಯಂತ್ರಣ ರೇಖೆ (ಎಲ್‍ಒಸಿ) ಕಡೆಗೆ ಮೆರವಣಿಗೆ ನಡೆಸುತ್ತಿದ್ದರೂ ಪಿಒಕೆಯಲ್ಲಿನ ನಾಗರಿಕ ಸಮಾಜದ ಸದಸ್ಯರು ಅವರನ್ನು ನೋಡಿಕೊಳ್ಳಲು ಮತ್ತು ಅಗತ್ಯ ರಕ್ಷಣೆ ನೀಡಿ ಪೂಜೆ ಸಲ್ಲಿಸಲು ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಪೂಜೆಯನ್ನು ಮಾಡಿದ ಬಳಿಕ ಛಾಯಾಚಿತ್ರಗಳನ್ನು ಪಿಒಕೆ ನಾಗರಿಕ ಸಮಾಜದ ಸದಸ್ಯರಿಗೆ ಹಸ್ತಾಂತರಿಸಿದರು. ಈ ವರ್ಷದ ಆರಂಭದಲ್ಲಿ, ಡಾ.ರಮೇಶ್ ವಾಂಕ್ವಾನಿ ನೇತೃತ್ವದ ಐವರು ಸದಸ್ಯರ ನಿಯೋಗ ಜೂನ್ 24 ರಂದು ಪಾಕಿಸ್ತಾನ ಹಿಂದೂ ಕೌನ್ಸಿಲ್ (ಪಿಎಚ್‍ಸಿ) ಸಹಾಯದಿಂದ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡಿತ್ತು.

ದೆಹಲಿ ಮೂಲದ ಕಾಶ್ಮೀರಿ ಪಂಡಿತ್ – ರವೀಂದರ್ ಪಂಡಿತಾ ಮತ್ತು ಇತರ ಕೆಲವರು ಸೇರಿಕೊಂಡು ಸೇವ್ ಶಾರದಾ ಸಮಿತಿ ರಚಿಸಿದ್ದರು. ತೀರ್ಥಯಾತ್ರೆಯ ಮಾರ್ಗವನ್ನು ಪುನಃ ತೆರೆಯಲು ಮತ್ತು ಶಾರದಾ ದೇಗುಲವನ್ನು ಪುನಃಸ್ಥಾಪಿಸಲು ಅಭಿಯಾನವನ್ನು ಪ್ರಾರಂಭಿಸಿದರು. ಸಮಿತಿಯು ಶರದಾ ಪೀಠ ಮತ್ತು ಇತರ ಹಿಂದೂ ದೇವಾಲಯಗಳ ರಕ್ಷಣೆ ಮತ್ತು ಅಮರನಾಥ ತೀರ್ಥಯಾತ್ರೆಯಂತೆ ಈ ಸ್ಥಳಕ್ಕೆ ತೀರ್ಥಯಾತ್ರೆ ಪುನರಾರಂಭಿಸಲು ಅನುಮತಿ ಕೋರಿದೆ. ಅದಲ್ಲದೆ ಕಾಶ್ಮೀರದ ಶಾರದಾ ಪೀಠಕ್ಕೆ ಕೊನೆಯದಾಗಿ 1948 ರಲ್ಲಿ ಯಾತ್ರೆ ಕೈಗೊಂಡಿದ್ದವರು ಕಾಶ್ಮೀರದ ಋಷಿ ಸ್ವಾಮಿ ನಂದಲಾಲ್‍ರವರು.

ದೇಶ ವಿಭಜನೆಯ ಬಳಿಕ ತಮ್ಮ ಆಶ್ರಮವನ್ನು ತೊರೆದ ನಂದಲಾಲ್, ಪೀಠದ ವಿಗ್ರಹಗಳ ಜೊತೆಗೆ ತಿಕ್ಕರ್ ಎನ್ನುವ ಹಳ್ಳಿಯಲ್ಲಿ ನೆಲೆಸಿದ್ದರು. ಭಾರತ -ಪಾಕ್ ವಿಭಜನೆಯ ಬಳಿಕ ಎಪ್ಪತ್ತೆರಡು ವರ್ಷಗಳಿಂದ ಇದುವರೆಗೂ ಯಾರೂ ಅಲ್ಲಿ ಕಾಲಿಟ್ಟಿರಲಿಲ್ಲ. ಕಳೆದ ಮೂರು ವರ್ಷಗಳಿಂದ ರವೀಂದರ್ ಪಂಡಿತರವರ ನೇತೃತ್ವದಲ್ಲಿ ಕಾಶ್ಮೀರಿಗರ ಗುಂಪೆÇಂದು “ಸೇವ್ ಶಾರದಾ ಕಮಿಟಿ ಕಾಶ್ಮೀರ್” ಎನ್ನುವ ಸಂಘಟನೆ ಮೂಲಕ ಶಾರದಾ ಪೀಠಕ್ಕೆ ಹೋಗಲು ಅನುಮತಿ ನೀಡುವಂತೆ ಗೃಹ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಬಳಿಕ ಈ ವರ್ಷದ ಮೊದಲಿಗೆ ಡಾ.ರಮೇಶ್ ವಾಂಕ್ವಾನಿ ನೇತೃತ್ವದ ಐವರ ಸದಸ್ಯರ ನಿಯೋಗದ ತಂಡ ಭೇಟಿ ನೀಡಿತ್ತು. ಇದೀಗ 72 ವರ್ಷಗಳ ಬಳಿಕ ಭಾರತೀಯ ದಂಪತಿಗಳು ಶಾರದಾ ಪೀಠದಲ್ಲಿ ಪೂಜೆಯನ್ನು ಸಲ್ಲಿಸಿದ್ದಾರೆ. ಈಗಾಗಲೇ ಮೋದಿ ಸರ್ಕಾರ ಪಿಒಕೆ ಯನ್ನು ಆದಷ್ಟು ಬೇಗ ವಶಪಡಿಸಿಕೊಳ್ಳಲು ನಾನಾ ಯೋಜನೆಯನ್ನು ಹಾಕುತ್ತಿದ್ದಾರೆ.

Be the first to comment